ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ; ಸುಂಕದಕಲ್ಲು ಗ್ರಾಮದಲ್ಲಿ 99 ಅರ್ಜಿಗಳ ಸ್ವೀಕೃತಿ

0
239

ಕೊಟ್ಟೂರು:ಜೂನ್:18:- ತಾಲೂಕಿನ ಸುಂಕದಕಲ್ಲು ಗ್ರಾಮದಲ್ಲಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ”ಯ 8ನೇ ಕಾರ್ಯಕ್ರಮವನ್ನು ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದು, 99 ಅರ್ಜಿಗಳು ಸ್ವೀಕೃತವಾದರೆ ಕಂದಾಯ ಇಲಾಖೆಗೆ ಸಂಬಂಧಿಸಿದ 11 ಅರ್ಜಿಗಳು ಸ್ಥಳದಲ್ಲೇ ಇತ್ಯರ್ಥವಾದವು. ಉಳಿದಂತೆ ಕಂದಾಯ 24, ಆಹಾರ ಇಲಾಖೆ -13, ಕೆ.ಎಸ್.ಆರ್.ಟಿ.ಸಿ.-2, ಶಿಕ್ಷಣ ಇಲಾಖೆ-1, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ-2, ಅಬಕಾರಿ-1, ತಾಲೂಕು ಪಂಚಾಯಿತಿ-45 ಒಟ್ಟು 88 ಅರ್ಜಿಗಳನ್ನು ಸೂಕ್ತ ಕ್ರಮಕೈಗೊಂಡು ವಿಲೇಗಾಗಿ ಸಂಬಂಧಿಸಿದ ಇಲಾಖೆಗೆ ಕಳುಹಿಸಲಾಗುವುದು ಎಂದು ತಹಶೀಲ್ದಾರರು ತಿಳಿಸಿದರು.

ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ದರ್ಶನವನ್ನು ಪಡೆದು ಎಲ್ಲಾ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳೊಂದಿಗೆ ಸಂಚರಿಸಿ ಚರಂಡಿ, ಸ್ಮಶಾನ ಭೂಮಿ, ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆಗಳ ವೀಕ್ಷಣೆ ಮಾಡಿದರು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಉದ್ಘಾಟಿಸುತ್ತಾ ತಹಶೀಲ್ದಾರ್ ಕುಮಾರಸ್ವಾಮಿ ಎಂ ಇವರು ಗ್ರಾಮದ ರಸ್ತೆಗಳು ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ವಚ್ಛತೆಯ ಬಗ್ಗೆ ಗ್ರಾಮ ಪಂಚಾಯಿತಿಯಿಂದ ಅಗತ್ಯ ಕ್ರಮಕೈಗೊಳ್ಳುವಂತೆ, ಈ ಕಾರ್ಯಕ್ರಮದ ಮೂಲಕ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. ವೇದಿಕೆ ಮೇಲೆ ಹಾಜರಿದ್ದ ವಿಜಯಕುಮಾರ್.ಹೆಚ್ ಎಡಿಎ

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here