ಉದ್ಯೋಗಖಾತ್ರಿ ಕೆಲಸ ದುಡ್ಡು ಮಾಯಾ: ನಾಳೆ ನಾಳೆ ಎನ್ನುವ ಅಧಿಕಾರಿಗಳು,ಕೂಲಿ ಕಾರ್ಮಿಕರ ಗೋಳು ಕೇಳೋರ್ಯಾರು.?!

0
291

ವಿಜಯನಗರ/ಕೊಟ್ಟೂರು:ಜೂನ್:21:- ತಾಲೂಕು ಕಂದಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವ ಕೆ ಗಜಾಪುರ ರೈತ ಕೆ.ನಾಗಪ್ಪ,ಇವರು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಲಿ ಕೆಲಸ ಮಾಡಿರುತ್ತಾರೆ

14.5.2022. 8ದಿನ ಕೆಲಸ, 24.5.2022.4ದಿನ ಕೆಲಸ, 28.5.2022.3ದಿನ ಕೆಲಸ ಮಾಡಿರುತ್ತಾರೆ. ಒಟ್ಟು15 ದಿನದ ಕೂಲಿ ದುಡ್ಡು ಬಂದಿರುವುದಿಲ್ಲ.

ಪಂಚಾಯಿತಿ ಸಿಬ್ಬಂದಿ ವರ್ಗದವರನ್ನು ಕೇಳಿದರೆ. ನಾಳೆ ನಾಳೆ ಎನ್ನುತ್ತಾರೆ, ಕೇಳಿದರೆ ದುಡ್ಡು ಇಲ್ಲ ಎಂದು ಹೇಳಿ ಕಳಿಸುತ್ತಾರೆ.ಇದು ಒಬ್ಬರ ಸಮಸ್ಯೆಯಲ್ಲ ಉದ್ಯೋಗಖಾತ್ರಿ ಕೆಲಸ ಮಾಡಿ ದುಡ್ಡು ಬರದಿರುವ ಇನ್ನು ಹಲವಾರು ಜನಗಳು ಸಮಸ್ಯೆಯಲ್ಲಿ ಇದ್ದಾರೆ,ಇದರ ಬಗ್ಗೆ ಸಂಬಂದಪಟ್ಟ ಮೇಲಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಬಡ ಕೂಲಿ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here