ಅಂಕಮ್ಮನಾಳ್ ನಲ್ಲಿ ವಾಂತಿ ಭೇದಿ, ಗ್ರಾಮದಲ್ಲಿ ಬೀಡುಬಿಟ್ಟ ಆರೋಗ್ಯ ಇಲಾಖೆ ಸಿಬ್ಬಂದಿ ಜನರಿಗೆ ದೈರ್ಯತುಂಬಿದ ಶಾಸಕ ತುಕಾರಾಮ್.

0
278

ಸಂಡೂರು:ಆ:6: ವಾಂತಿ ಭೇದಿ ಪ್ರಕರಣಗಳು 50 ಏರಿಕೆ, ನಿಯಂತ್ರಣಕ್ಕೆ ಅಂಕಮನಾಳ್ ಗ್ರಾಮದಲ್ಲಿ ಬೀಡುಬಿಟ್ಟ ಆರೋಗ್ಯ ಇಲಾಖೆ,ಜಿಲ್ಲೆ ಮತ್ತು ತಾಲೂಕಿನ ಅಧಿಕಾರಿಗಳ ಭೇಟಿ ನೀಡಿ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ

ತಾಲೂಕಿನ ಅಂಕಮನಾಳ್ ಗ್ರಾಮದಲ್ಲಿ ವಾಂತಿ ಭೇದಿ ಪ್ರಕರಣಗಳು ಉಲ್ಬಣಗೊಂಡ ಕಾರಣಕ್ಕಾಗಿ ಗ್ರಾಮಕ್ಕೆ ಮಾನ್ಯ ಶಾಸಕರಾದ ಈ ತುಕಾರಾಂ,ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಹೆಚ್.ಎಲ್ ಜನಾರ್ದನ್, ಮಾನ್ಯ ತಹಶಿಲ್ದಾರರಾದ ಗುರುಬಸವರಾಜ್,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಲಿಂಗಮೂರ್ತಿ , ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಧಾರುಕೇಶ್ ಇತರ ಅಧಿಕಾರಿಗಳು ಭೇಟಿ ನೀಡಿ ನಿಯಂತ್ರಣ ಕ್ರಮಗಳ ಪರಿಶೀಲನೆ ಮಾಡಿದರು,ತಾತ್ಕಾಲಿಕ ಚಿಕಿತ್ಸಾ ಕೇಂದ್ರಕ್ಕೆ ಹತ್ತು ಬೆಡ್ ಗಳು ಮತ್ತು ಸಾಕಷ್ಟು ಔಷಧಿ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಕಾರಣಕ್ಕೂ ಭಯ ಪಡಬೇಡಿ ಎಂದು ಜನರಿಗೆ ದೈರ್ಯ ತುಂಬುವ ಕಾರ್ಯ ಕೈಗೊಂಡರು,

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್ ಜನಾರ್ದನ್ ಮಾತನಾಡಿ ವಾಂತಿ ಭೇದಿ ಕಂಡುಬಂದವರಲ್ಲಿ ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಡ್ರಿಪ್ ಹಾಕಿ ಸಂಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಸುವುದು, ಇತರರಿಗೆ ಇಲ್ಲೆ ಚಿಕಿತ್ಸೆ ನೀಡಲಾಗುತ್ತಿದೆ, ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದರೆ ವಿಮ್ಸ್ ಗೆ ಸೂಚಿಸಲಾಗುತ್ತಿದೆ, 18 ಪ್ರಕರಣಗಳು ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಉಳಿದಂತೆ ಚಿಕಿತ್ಸೆ ಪಡೆಯುತ್ತಿದ್ದಾರೆ, ಆಶಾ ಕಾರ್ಯಕರ್ತೆರ 15 ತಂಡಗಳು 504 ಮನೆಗಳ ಭೇಟಿ ಮಾಡಿ ಪ್ರತಿ ಮನೆಗೂ ಕರಪತ್ರ ಅಂಟಿಸಲಾಗಿದ್ದು ಮುಂಜಾಗ್ರತೆಗಾಗಿ ಓ.ಆರ್.ಎಸ್ ಪಾಕೆಟ್ ಮತ್ತು ನೀರು ಶುದ್ಧೀಕರಣಕ್ಕೆ ಹಾಲೋಜೆನ್ ಮಾತ್ರೆ ಮತ್ತು ಭೇದಿ ನಿಯಂತ್ರಣಕ್ಕೆ ಝಿಂಕ್ ಮಾತ್ರೆಗಳನ್ನು ವಿತರಣೆ ಮಾಡಲಾಗಿದ್ದು ಎಲ್ಲಾ ಕ್ರಮಗಳನ್ನು ತುಂಬ ಕಟ್ಟಾಗಿ ಮಾಡಲಾಗಿದೆ,

ಹಾಗೆ ಪ್ರಕರಣಗಳ ನಿಯಂತ್ರಣಕ್ಕೆ ಜನರಿಗೆ ಸಹಕಾರ ನೀಡುವ ಕುರಿತು ಓಣಿ ಓಣಿಗಳಲ್ಲಿ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ, ಕಾಯಿಸಿ ಆರಿದ ನೀರನ್ನೆ ಕುಡಿಯಬೇಕು, ತೆರೆದಿಟ್ಟ ಆಹಾರ, ಹಣ್ಣುಗಳನ್ನು ಸೇವಿಸ ಬೇಡಿ, ಬಿಸಿ ಆಹಾರ ಸೇವಿಸಿ, ಊಟಕ್ಕೆ ಮೊದಲು ಶೌಚದ ನಂತರ ಕೈಗಳನ್ನು ಸ್ವಚ್ಚವಾಗಿ ತೊಳೆಯಬೇಕು, ವಾಂತಿ ಭೇದಿಯ ಒಂದು ಎರಡು ಬಾರಿ ಆದ ತಕ್ಷಣ ಓ.ಆರ್.ಎಸ್ ದ್ರಾವಣ ತಯಾರಿಸಿ ಕುಡಿಯಬೇಕು,ಹತ್ತಿರದ ತಾತ್ಕಾಲಿಕ ಚಿಕಿತ್ಸಾ ಕೇಂದ್ರಕ್ಕೆ ಬಂದು ದಾಖಲಾಗಬೇಕು ಈ ಎಲ್ಲಾ ಮಾಹಿತಿಯನ್ನು ಜನರಿಗೆ ತಲುಪಿಸುತ್ತಿದ್ದಾರೆ, ತಾಲೂಕು ಆರೋಗ್ಯಾಧಿಕಾರಿ ಡಾ.ಕುಶಾಲ್ ರಾಜ್ ತುಂಬಾ ವ್ಯವಸ್ಥಿತವಾಗಿ ನಿರ್ವಹಣೆ ಮಾಡುತ್ತಿದ್ದಾರೆ, ತಾಲೂಕು ಮತ್ತು ಜಿಲ್ಲೆಯ ತಂಡಗಳು ಹಾಗೂ ಆಶಾ ಕಾರ್ಯಕರ್ತೆಯರು ನಿಯಂತ್ರಣ ಕ್ರಮಕ್ಕೆ ಪೂರ್ಣ ಸಹಕಾರ ನೀಡುತ್ತಿದ್ದಾರೆಂದು ಪ್ರಶಂಸೆ ಮಾತುಗಳನ್ನು ಅವರು ತಿಳಿಸಿದರು,

ಚಿಕಿತ್ಸಾ ಕೇಂದ್ರದಲ್ಲಿ ಡಾ.ಅಕ್ಷಯ್ ಶಿವಪುರ, ಡಾ.ಚಂದ್ರಪ್ಪ, ಡಾ.ರಾಘವೇಂದ್ರ,ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಎರಡು ಮೊಬೈಲ್ ಮೆಡಿಕಲ್ ಯುನಿಟ್ ಟೀಮ್ ವೈದ್ಯರು ಮತ್ತು ಸಿಬ್ಬಂದಿಗಳು, ಸಿ.ಹೆಚ್.ಓ ಗಳು ಮತ್ತು ಬಂಡ್ರಿ ಅಸ್ಪತ್ರೆಯ ಸಿಬ್ಬಂದಿ, ತಾಲೂಕಿನ ಮೇಲ್ವಿಚಾರಕರು ಹಾಜರಿದ್ದರು

LEAVE A REPLY

Please enter your comment!
Please enter your name here