ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ, ಜನವಾದಿ ಮಹಿಳಾ ಸಂಘದಿಂದ ರಾಷ್ಟ್ರಪತಿಗೆ 500 ಸಹಿಗಳ ಪೊಸ್ಟ್

0
122

ಹಗರಿಬೊಮ್ಮನಹಳ್ಳಿ,ಆ,17 ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಗರಿಬೊಮ್ಮನಹಳ್ಳಿ ತಾಲೂಕ ಸಮಿತಿಯ ಮುಖಂಡರುಗಳು . “ಹಸಿವು ಮುಕ್ತ ಬದುಕು ನನ್ನ ಸಂವಿಧಾನಿಕ ಹಕ್ಕು”. ಹಾಗೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ದೇಶವ್ಯಾಪ್ತಿ ಕರೆ ನೀಡಲಾಗಿದ್ದ ಸಹಿ ಸಂಗ್ರಹ ಆಂದೋಲನಾ ನಿಮಿತ್ತ ಬುಧವಾರ ಐದುನೂರು ಜನರಿಂದ ಸಹಿ ಸಂಗ್ರಹಿಸಿ ಪಟ್ಟಣದಲ್ಲಿರುವ ಕೇಂದ್ರ ಅಂಚೆ ಕಚೇರಿ ಮೂಲಕ ರಾಷ್ಟ್ರಪತಿಗಳಿಗೆ ಪೊಸ್ಟ್ ಮಾಡಿದರು.

ಜನವಾದಿ ಮಹಿಳಾ ಸಂಘಟನೆಯ ತಾಲೂಕ ಕಾರ್ಯದರ್ಶಿ ಸರ್ದಾರ ಹುಲಿಗೆಮ್ಮ ಮಾತನಾಡಿ, ನರೇಂದ್ರ ಮೋದಿ ಸರ್ಕಾರ‌ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. .ಹೀಗಾಗಿ ದೇಶದಲ್ಲಿ ನಿರುದ್ಯೋಗ. ಹಸಿವು. ಬಡತನ. ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿವೆ ಪೆಟ್ರೋಲ್ ಡಿಸೈಲ್ ನೂರರ ಗಡಿ ದಾಟಿದೆ ಎಂದು ದೂರಿದರು.

ಕೇಂದ್ರ ಸರ್ಕಾರ ಒಂದೇ ದೇಶ ಒಂದೇ ತೆರಿಗೆ ಒಂದೇ ನಾಗರಿಕತೆ ಇರಬೇಕೆಂದು ಹೇಳುತ್ತದೆ. ಅದೇ ರೀತಿ ಎಲ್ಲರಿಗೂ ಒಂದೇ ಸಂಬಳ ಜಾರಿಮಾಡಬೇಕು. ರಾಷ್ಟ್ರಪತಿಗಳನ್ನು ಒಳಗೊಂಡಂತೆ ಎಲ್ಲಾ ಜನ ಪ್ರತಿನಿಧಿಗಳಿಗೂ ಇದು ಅನ್ವಯವಾಗಬೇಕೆಂದರು.

ತಾಲೂಕ ಮುಖಂಡರಾದ ಪಿಂಜಾರ್ ಹೆಗ್ಡಾಳ ರೇಣುಕಾ ಮಾತನಾಡಿ, ಕೇಂದ್ರ ಸರ್ಕಾರ ಕೃಷಿ ಕಾಯ್ದೆ ವಾಪಸ್ ತೆಗೆದುಕೊಳ್ಳುತ್ತೇವೆ. ಅಂತ ಹೇಳಿ ದೇಶಿಯ ವಿದೇಶಿಯ ಕಾರ್ಪೊರೇಟ್ ಕಂಪನಿಗಳ ಪರವಾಗಿ ನೀತಿಗಳನ್ನು ರೂಪಿಸುತ್ತಿದೆ. ಸರಕಾರಿ ಸ್ವಾಯತ್ತ ಸಂಸ್ಥೆಗಳನ್ನು ಖಾಸಗಿಕರಣ ಮಾಡುತ್ತಿರುವುದರಿಂದ ಇನ್ನಷ್ಟು ಬೆಲೆಗಳೂ ಗಗನಕ್ಕೇರುವಂತಾಗಿದೆ ಎಂದರು.

ತಾಲೂಕಾ ಮುಖಂಡರಾದ ನಿರ್ಮಲ ರೇಣುಕಾ ಸಲ್ಮಾ ಬಾನು ಯಶೋಧ ಇದ್ದರು.

–ಹುಳ್ಳಿಪ್ರಕಾಶ, ಹಿರಿಯ ಪತ್ರಕರ್ತರು

LEAVE A REPLY

Please enter your comment!
Please enter your name here