ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಕುಡುತಿನಿ ಪಟ್ಟಣದ ಮೇಲೆ ಮಲತಾಯಿ ಧೋರಣೆ ತೋರುವುದು ಸರಿಯಲ್ಲ: ಪಪಂ.ಅಧ್ಯಕ್ಷ ರಾಜಶೇಖರ್ ಆರೋಪ

0
120

ಕುರುಗೋಡು:ಆಗಸ್ಟ್:19:-ಕುರುಗೋಡು ಸಮೀಪದ ಕುಡುತಿನಿ ಅಭಿವೃದ್ಧಿಗೆ ಡಿಎಂಎಪ್ ಅನುದಾನದಡಿಯಲ್ಲಿ 28 ಕೋಟಿ ಹಾಗೂ ಪಪಂ ಅನುದಾನದಡಿಯಲ್ಲಿ ಸುಮಾರು ಕೋಟಿ ಮಂಜೂರುಗೊಂಡು ಕಾಮಗಾರಿಗಳ ಎಸ್ಟಿಮೆಂಟ್ ತಯಾರಿಗೊಂಡಿದ್ದರು ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಜಾರಿಗೊಳಿಸದೆ ಪಟ್ಟಣದ ಅಭಿವೃದ್ಧಿಗೆ ಕೊಕ್ಕೆ ಬಿಳಿಸುವಂತಹ ಕೆಲಸ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಕುಡುತಿನಿ ಪಟ್ಟಣದ ಮೇಲೆ ಮಲತಾಯಿ ದೋರಣೆ ಮಾಡುವುದು ಸರಿಯಲ್ಲ ಎಂದು ಪಪಂ ಅಧ್ಯಕ್ಷ ವಿ. ರಾಜಶೇಖರ್ ಆರೋಪಿಸಿದರು.

ಸಮೀಪದ ಕುಡುತಿನಿ ಪಟ್ಟಣದಲ್ಲಿ ಗುರುವಾರ ಜರುಗಿದ ಪತ್ರಿಕೆಗೋಷ್ಠಿಯಲ್ಲಿ ಮಾತನಾಡಿದ ಅವರು,ಬಳ್ಳಾರಿ ರಸ್ತೆಯಿಂದ ಹೊಸಪೇಟೆ ರಸ್ತೆವರೆಗೆ ಡಬಲ್ ಮುಖ್ಯರಸ್ತೆಗೆ 28 ಕೋಟಿ, 30 ಹಾಸಿಗೆವುಳ್ಳ ಆಸ್ಪತ್ರೆ ಗೆ 8 ಕೋಟಿ, ಪಪಂ ಮಿನಿ ವಿಧಾನಸೌಧ ಕ್ಕೆ 4 ಕೋಟಿ, ಮಕ್ಕಳ ಮೈದಾನದ ಆಟ ಸ್ಟೇಡಿಯಂ ಗೆ 3 ಕೋಟಿ, ಎಲೆಕ್ಟ್ರಿಕಲ್ ಬೋರ್ಡ್ಸ್ ಮತ್ತು ವಿದ್ಯುತ್ ಪರಿವರ್ತಕ ಗಳಿಗೆ 2 ಕೋಟಿ, ಪರಿಶಿಷ್ಟ ಜಾತಿ ಮಹಿಳಾ ತರಬೇತಿ ಕೇಂದ್ರಕ್ಕೆ 1.50 ಕೋಟಿ, ಎಲ್ಲ ಸಮುದಾಯದ ಸಾಮೂಹಿಕ ಸಮುದಾಯದ ಭವನ ನಿರ್ಮಾಣಕ್ಕೆ 50 ಲಕ್ಷ, ಪಪಂ ಅನುದಾನದಲ್ಲಿ ನೂತನ ಸಂತೆ ಮಾರುಕಟ್ಟೆಗೆ 1 ಕೋಟಿ 40 ಲಕ್ಷ, ಅಲ್ಲದೆ ಬಡವರಿಗೆ ಭೂಮಿ ಹಂಚಿಕೆ ಮಾಡಲು ಸರ್ವೇ ನಂ 705 ರಲ್ಲಿ 3 ಎಕರೆ ಭೂಮಿ ನಿಗದಿ ಮಾಡಲಾಗಿದೆ. ಪಟ್ಟಣದ 19 ನೇ ವಾರ್ಡ್ ನಲ್ಲಿ ನೀರಿನ ಟ್ಯಾಂಕರ್ ನಿರ್ಮಾಣಕ್ಕೆ 80 ಲಕ್ಷ, ಇನ್ನೂ ಬಡವರಿಗೆ ಭೂಮಿ ಹಂಚಿಕೆ ಮಾಡಲು 45 ಲಕ್ಷ ವೆಚ್ಚವನ್ನು ಕಾಯ್ದಿರಿಸಲಾಗಿದ್ದು ಈ ಎಲ್ಲ ಕಾಮಗಾರಿಗಳನ್ನು ಎಸ್ಟಿಮೆಂಟ್ ಮಾಡಿ ಅನುಮೋದನೆಗೊಂಡಿವೆ ಆದರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಟೆಂಡರ್ ಪ್ರಕ್ರಿಯೆ ಜಾರಿಗೊಳ್ಳಿಸದೆ ಪಟ್ಟಣದ ಅಭಿವೃದ್ಧಿಗೆ ಕುಂಟಿತಗೊಳಿಸುತ್ತಿದ್ದಾರೆ. ಇದರಿಂದ ಪಟ್ಟಣದ ಜನರಿಗೆ ತುಂಬಾ ಸಮಸ್ಯೆ ಆಗುತ್ತಿದೆ. ಜಿಲ್ಲೆಯ ಆಡಳಿತ ಅಧಿಕಾರಿ ಆಗಿರುವ ಜಿಲ್ಲಾಧಿಕಾರಿಗಳೆ ಇಂತಹ ನಡೆ ಮಾಡುತ್ತಿರುವುದು ಶೋಭೆಯಲ್ಲ ಆದಷ್ಟು ಬೇಗಾ ಈ ಕಾಮಗಾರಿಗಳಿಗೆ ಟೆಂಡರ್ ಕರೆದು ಅಭಿವೃದ್ಧಿಗೆ ಸಹಕಾರ ಮಾಡಬೇಕು ಎಂದು ತಿಳಿಸಿದರು. ಅಲ್ಲದೆ ಈ ಹಿಂದೆ ಮೊದಲು ಬಳ್ಳಾರಿ ಮತ್ತು ವಿಜಯನಗರಕ್ಕೆ ಒಬ್ಬರೇ ಜಿಲ್ಲಾಧಿಕಾರಿಗಳು ಇರುತಿದ್ರು ಆದರೆ ಬಳ್ಳಾರಿ ಮತ್ತು ವಿಜಯನಗರ ವಿಂಗಡಣೆಗೊಂಡು ಬಳ್ಳಾರಿ ಚಿಕ್ಕ ಜಿಲ್ಲೆ ಆಗಿದ್ರು ಇಂತಹ ಕೆಲಸಗಳಿಗೆ ಆದ್ಯತೆ ನೀಡದೆ ಇರುವುದು ದುರಂತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here