ಚಿರಿಬಿ ಮೂಗಬಸವೇಶ್ವರ ಸ್ವಾಮಿ ದರ್ಶನಕ್ಕೆ ಅವಕಾಶ: ಪಿಎಸ್ಐ ವಿಜಯಕೃಷ್ಣ

0
367

ಕೊಟ್ಟೂರು:ಆಗಸ್ಟ್:22:- ಚಿರಿಬಿ ಶ್ರೀಮೂಗಬಸವೇಶ್ವರ ರಥೋತ್ಸವ ಮತ್ತು ಜಾತ್ರಾ ಮಹೋತ್ಸವವನ್ನು ವಿಜಯನಗರ ಜಿಲ್ಲಾಧಿಕಾರಿಗಳು ರದ್ದಗೊಳಿಸಿ ನಿಷೇಧಗೊಳಿಸಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಶ್ರಾವಣದ ಕೊನೆಯ ಸೋಮವಾರ ಆಗಸ್ಟ್ 22ರಂದು ಯಾವುದೇ ಬಗೆಯ ಮೆರವಣಿಗೆ ಉತ್ಸವಗಳನ್ನು ಭಕ್ತರು ನಡೆಸಬಾರದು, ಭಕ್ತಿಯ ಹೆಸರಿನಲ್ಲಿ ಭಕ್ತರು ಹಲಗೆ ಬಾರಿಸುತ್ತ ಮೆರವಣಿಗೆ ಸಹ ಕೈಗೊಳ್ಳಬಾರದು. ಇದನ್ನು ಮೀರಿ ನಡೆದರೆ ಅನಿವಾರ್ಯವಾಗಿ ಕಾನೂನು ಶಿಕ್ಷೆಗೆ ಒಳಪಡಿಸಲಾಗುವುದು
ಎಂದು ಕೊಟ್ಟೂರು ಪೊಲೀಸ್‌ ಠಾಣೆಯ ಶಾಂತಿ ಮತ್ತು ಸುವ್ಯವಸ್ಥೆ ವಿಭಾಗದ ಸಬ್ ಇನಸ್ಪೆಕ್ಟರ್ ವಿಜಯಕೃಷ್ಣ ಎಚ್ಚರಿಕೆ ನೀಡಿದರು.

ಶನಿವಾರ ಸಂಜೆ ತಾಲೂಕಿನ ಚಿರಿಬಿ ಗ್ರಾಮದ ಮೂಗಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಪೊಲೀಸ್‌ ಠಾಣೆ ವತಿಯಿಂದ ಹಮ್ಮಿ ಕೊಂಡಿದ್ದ ಶಾಂತಿ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.

ಶ್ರಾವಣ ಮಾಸದ ಕೊನೆಯ ಸೋಮವಾರ ಚಿರಿಬಿ ಮೂಗಬಸವೇಶ್ವರ ದೇವಸ್ಥಾನಕ್ಕೆ ಭಕ್ತರಿಗೆ ಕೇವಲ ಭಕ್ತಿ ಸಮರ್ಪಿಸಲು ಅವಕಾಶ ಇದ್ದು ಇದನ್ನು ಹೊರತುಪಡಿಸಿ ಯಾವುದೇ ಬಗೆಯ ಸೇವೆಗಳನ್ನು ಸಲ್ಲಿಸುವಂತಿಲ್ಲ ಎಂದು ಹೇಳಿದರು. ಭಾನುವಾರ ಸಂಜೆಯಿಂದಲೇ ದೇವಸ್ಥಾನದ ಸುತ್ತ ಪೊಲೀಸ್ ಬಂದೋಬಸ್ತ್ ಆಯೋಜಿಸಲು ಕೈಗೊಂಡಿರುವುದಾಗಿ ಹೇಳಿದರು. ಈಗಾಗಲೇ ತಯಾರಿ ಕೈಗೊಂಡಿರುವುದಾಗಿ ಹೇಳಿದರು
ಶಾಂತಿ ಭಂಗಗೊಳಿಸಲು ಯಾರಾದರೂ ಮುಂದಾದರೆ ತಕ್ಷಣವೇ ಪೊಲೀಸರು ವಶಕ್ಕೆ ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದರು.

ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಂ.ಎಚ್‌. ಪ್ರಕಾಶ ರಾವ್ ಮಾತನಾಡಿ, ದೇವರು ದರ್ಶನ ಪಡೆಯಲು ಸಾಲು ಸಾಲಾಗಿ ಬರಬೇಕು, ಯಾವುದೇ ಬಗೆಯ ಕಾರ್ಯಕ್ರಮಗಳನ್ನು ದೇವಸ್ಥಾನದಲ್ಲಿ ಹಮ್ಮಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಸಹಾಯಕ ಸಬ್ ಇನಸ್ಪೆಕ್ಟರ್, ಅಬ್ಬಾಸ್ ಸೇರಿದಂತೆ ಸಭೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here