ಮಟ್ಕಾ ದಂಧೆ: ಕೂಲಿ ಕಾರ್ಮಿಕರೇ ಟಾರ್ಗೆಟ್‌! ಸಾಲದ ಶೂಲಕ್ಕೆ ಸಿಲುಕಿದ ಶ್ರಮಿಕ ವರ್ಗ

0
541

ಕೊಟ್ಟೂರು: ಮಟ್ಕಾದಿಂದ ಸಾಲ ಬಾಧೆ ತಾಳಲಾಗದೆ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ತೀರಿಸಲಾಗದೆ ಗ್ರಾಮವನ್ನೇ ತೊರೆದಿರುವ ನಿದರ್ಶನಗಳು ಇವೆ. ಸಮಾಜದಲ್ಲಿನ ಗೌರವ ಹಾಳಾಗುತ್ತದೆ ಎಂಬ ಕಾರಣ, ಮುಜುಗರ ಸೇರಿದಂತೆ ನಾನಾ ಕಾರಣಗಳಿಂದ ಆತ್ಮಹತ್ಯೆ ನಡೆದಿರುವ ಘಟನೆಗಳು ಈ ಹಿಂದೆ ನಡೆದಿವೆ.

ರಾಜ್ಯಕ್ಕೆ ಆನ್‌ಲೈನ್‌ ಮಟ್ಕಾ ಗೀಳು ವ್ಯಾಪಿಸಿದೆ. ಕೂಲಿ ಕಾರ್ಮಿಕ ವರ್ಗವನ್ನು ಗುರಿಯಾಗಿಸಿಕೊಂಡು ದಂಧೆಕೋರರು ಚಟುವಟಿಕೆ ನಡೆಸುತ್ತಿದ್ದಾರೆ. ಚಟಕ್ಕೆ ದಾಸರಾಗಿರುವ ಶ್ರಮಿಕ ವರ್ಗ ಸಾಲದ ಶೂಲಕ್ಕೆ ಸಿಲುಕಿ ಗ್ರಾಮ ತೊರೆಯುವ ಪರಿಸ್ಥಿತಿ ಎದುರಾಗಿದೆ. ಜತೆಗೆ ಆತ್ಮಹತ್ಯೆಗೆ ಶರಣಾದ ವ್ಯಕ್ತಿಗಳ ಪ್ರಕರಣಗಳು ದಾಖಲಾಗಿ ಇರುವುದಿಲ್ಲ. ಮತ್ತು ಮಟ್ಕಾ ಗೀಳು ಕಾರಣವಾಗುತ್ತಿದೆ.

ಮುಂಬಯಿಯಿಂದ ಮಟ್ಕಾ ದಂಧೆಯನ್ನು ಆನ್‌ಲೈನ್‌ ಮೂಲಕ ನಡೆಸಲಾಗುತ್ತಿದ್ದು, ನಾನಾ ಆ್ಯಪ್‌ಗಳು ಗೂಗಲ್‌ನಲ್ಲಿ ಲಭ್ಯವಿದೆ. ಬಳ್ಳಾರಿ ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಅನೇಕರು ಕೆಲವರ ಸಹಭಾಗಿತ್ವದಲ್ಲಿ ಪ್ರಮುಖ ಪಟ್ಟಿ ಹಿಡಿಯುವ ಮಟ್ಕಾ ದಂಧೆ ಕಂಪನಿ ಮಾಲೀಕರು..!? ಇಂಥವರನ್ನು ಗಡಿಪಾರು ಮಾಡಲು ಈ ಹಿಂದೆ ಇರುವ ಡಿಸಿ ಎಲ್ಲಾ ತಯಾರಿ ನಡೆಸಿದ್ದರು ಅದರೆ ಕಾರಣತರಗಳಿಂದ ನಿಲುಗಡೆಯಿತು.ಎಂದು ಸಾರ್ವಜನಿಕರು ಗಂಭೀರವಾಗಿ ಚರ್ಚೆ ಮಾಡಿದರು.

ಕೊಟ್ಟೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಾಗೂ ಪಟ್ಟಣದ ಅಂಬೇಡ್ಕರ್ ನಗರ, ಜೆಪಿ ನಗರ, ನೇಕರ್ ಓಣಿ , ಪಿ ಎಲ್ ಡಿ ಬ್ಯಾಂಕ್ ಹತ್ತಿರದ ಶೆಡ್ಡುಗಳಲ್ಲಿ ಮತ್ತೆ ಗರಿಗೆದರಿಗೆ ಮಟ್ಕಾ ದಂದೆ ವಾರ್ಡಿಗೊಬ್ಬರಂತೆ ಮಹಿಳೆಯರು ಕೂಡ ಈ ಕಂಪನಿಗಳಲ್ಲಿ ಮಾಲೀಕರು ಭಾಗಿಯಾಗಿರುವುದು ಕಂಡುಬಂದಿದೆ.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here