ಎಸ್ ಡಿ ಎಂ ಸಿ ಸದಸ್ಯರು ಹಾಗೂ ಗ್ರಾಮ ಪಂಚಾಯತಿ ಸದಸ್ಯರಿಂದ ಗುರುವಂದನಾ ಕಾರ್ಯಕ್ರಮ.

0
49

ಸಿಂಧನೂರು ತಾಲೂಕಿನ ತುರವಿಹಾಳ ಹತ್ತಿರದ ಶ್ರೀ ನಾಗಲಿಂಗೇಶ್ವರ ಕ್ಯಾಂಪ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ (ಎಸ್ ಡಿ ಎಂ ಸಿ) ಸದಸ್ಯರು ಹಾಗೂ ಅಲ್ಲಿನ ಗ್ರಾಮ ಪಂಚಾಯತಿ ಸದಸ್ಯರ ವತಿಯಿಂದ 2022-23 ನೇ ಸಾಲಿನಲ್ಲಿ 13ವರ್ಷಗಳ ಸೇವೆ ಸಲ್ಲಿಸಿ,ತವರು ಜಿಲ್ಲೆಗೆ ವರ್ಗಾವಣೆಯಾಗಿ ತೆರಳಿದ ಶಿಕ್ಷಕ ಮಹೇಶರವರಿಗೆ ಗುರುವಂದನಾ ಹಾಗೂ ಬೀಳ್ಕೊಡುಗೆ ಸಮಾರಂಭ ಜರುಗಿತು.

ಅದೇ ರೀತಿ ಮಹೇಶ್ ಶಿಕ್ಷಕರ ಜೊತೆಗೆ ಕರ್ತವ್ಯ ನಿರ್ವಹಿಸಿದ ಎಲ್ಲಾ ಶಿಕ್ಷಕರನ್ನು ಆಹ್ವಾನಿಸಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಶಿಕ್ಷಕ ಮಹೇಶ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಕಲಿಸುವಲ್ಲಿ ನನ್ನ 13ವರ್ಷಗಳ ಸೇವೆಯನ್ನು ಇಲ್ಲಿ ಸಲ್ಲಿಸಿದ್ದೇನೆ.ಮಕ್ಕಳಿಗೆ ಕಲಿಸುವಾಗ ನಾನು ಮಗುವಾಗಿ ಹಲವಾರು ವಿಷಯಗಳನ್ನು ಕಲಿತಿದ್ದೇನೆ ಈ ಶಾಲೆ ಬಿಟ್ಟು ಹೋಗಲು ನನಗೆ ತುಂಬಾ ಬೇಸರವಾಗಿದೆ ಆದರೆ ಇಂತಹ ಶಾಲೆಯನ್ನು ನಾನು ಮತ್ತೆ ಕಾಣುತ್ತೇನೋ ಇಲ್ಲವೋ ಗೊತ್ತಿಲ್ಲ ಎಂದರು. ಇಲ್ಲಿನ ಶಿಕ್ಷಕರ ಸಹಕಾರ,ಶಾಲಾ ಮೇಲುಸ್ತುವಾರಿ ಸಮಿತಿಯ ಸಹಕಾರ ಹಾಗೂ ಮಕ್ಕಳ ಕಲಿಕೆಯ ಉತ್ಸಾಹವನ್ನು ಯಾವುದೇ ಕಾರಣಕ್ಕೂ ಮರೆಯುವಂತಿಲ್ಲ. ಶಿಕ್ಷಕರಾದ ನಾವುಗಳು ವಿದ್ಯಾರ್ಥಿಗಳನ್ನು ನಮ್ಮ ಸ್ವಂತ ಮಕ್ಕಳಂತೆ ಕಾಣಬೇಕು ಹಾಗೂ ಕಲಿಸಬೇಕು. ತಂದೆ ತಾಯಿಗಳ ನಂತರದಲ್ಲಿ ಶಿಕ್ಷಕರುಗಳೇ ಗುರುಗಳಾಗಿರುತ್ತಾರೆ ಮಕ್ಕಳೂ ಕೂಡ ಆಸಕ್ತಿಯಿಂದ ಕಲಿಯುತ್ತಿದ್ದಾರೆ.ನಮ್ಮ ಶಾಲೆಯ ಮಕ್ಕಳು ಅತ್ಯಂತ ಉತ್ಸಾಹದಿಂದ ನಾನು ಕಲಿಸಿದ ಪಾಠವನ್ನು ಕಲಿಯುತ್ತಿದ್ದರು ಇದೇ ರೀತಿ ಮುಂದಿನ ಎಲ್ಲಾ ಶಿಕ್ಷಕರು ಹೇಳಿದ ಪಾಠವನ್ನು, ಮಾರ್ಗದರ್ಶನವನ್ನು ಚಾಚುತಪ್ಪದೇ ಪಾಲಿಸಬೇಕು, ಅದೇ ನನಗೆ ಸಿಗುವ ಖುಷಿ,ಊರಿನ ಪಾಲಕರು ಪೋಷಕರು,ಶಾಲೆಯ ಸಮಿತಿಯ ಸದಸ್ಯರೂ ಕೂಡ ನನಗೆ ಸಹಕಾರ ನೀಡಿದ ಹಾಗೆ ಈಗಿನ ಶಿಕ್ಷಕರಿಗೂ ಸಹಕಾರ ನೀಡಿ ಶಾಲೆಯ ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು,ಸದಸ್ಯರು,ಗ್ರಾಮ ಪಂಚಾಯತಿ ಸದಸ್ಯರು,ಹಳೆ ವಿದ್ಯಾರ್ಥಿಗಳ ಸಂಘದವರು , ಊರಿನ ಗುರು ಹಿರಿಯರು, ಪಾಲಕರು,ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.

ವರದಿ:ಅವಿನಾಶ್ ದೇಶಪಾಂಡೆ✍️

LEAVE A REPLY

Please enter your comment!
Please enter your name here