ಕಳಪೆ ಕಾಮಗಾರಿ ಸಾರ್ವಜನಿಕರ ಆಕ್ರೋಶ : ಕಣ್ಮುಚ್ಚಿ ಕುಳಿತ ಲೋಕೋಪಯೋಗಿ ಇಲಾಖೆ

0
113

ಕೊಟ್ಟೂರು ಪಟ್ಟಣದ ಬಸ್ ನಿಲ್ದಾಣದಿಂದ ಹ್ಯಾಳ್ಯಾ ರಸ್ತೆಯಲ್ಲಿರುವ ಬನ್ನಿಮಂಟಪದ ಹತ್ತಿರವಿರುವ  ರಾಜಕಾಲುವೆಯ ಕಾಮಗಾರಿ ನಡೆಯುತ್ತಿದ್ದು ಈ ಕಾಮಗಾರಿ ತುಂಬಾ ಕಳಪೆಯಾಗಿದೆ.
ಕಾಮಗಾರಿ ನಡೆಯುವ ಸಂದರ್ಭದಲ್ಲಿ ನೀರಿನ ಪೈಪ್‌ಲೈನ್ ಒಡೆದುಹೋಗಿ ಸಿಮೆಂಟು ಉಸುಗು ಕೊಚ್ಚಿ ಹೋಗಿದ್ದು.ಕಳಪೆ ಕಾಮಗಾರಿ ಎಂದು ಸಾರ್ವಜನಿಕವಾಗಿ ಕಂಡರೂ ಸಹ ಟೆಂಡರ್‌ದಾರರು ಇದ್ಯಾವುದನ್ನೂ ಲೆಕ್ಕಿಸದೆ ಅದೇ ರೀತಿ ಕಳಪೆಯಾಗಿಯೇ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರು ಆರೋಪಿಸಿದರು ಸಹ ಅಧಿಕಾರಿಗಳು ಕಿಂಚಿತ್ತೂ ತಲೆಕೆಡಿಸಿಕೊಳ್ಳುತ್ತಿಲ್ಲ. ಇದನ್ನೆಲ್ಲ ನೋಡಿದರೆ ಅಧಿಕಾರಿವರ್ಗ ಟೆಂಡರ್‌ದಾರರ ಪರವಾಗಿದ್ದಾರೆ.!ಎಂಬ ಸೂಚನೆಗಳು ಕಾಣುತ್ತಿವೆ. ಕಾಮಗಾರಿ ಸತತ ಮೂರು ವರ್ಷಗಳಿಂದ ನಡೆಯುತ್ತಿದ್ದರೂ ಸಹ ಇನ್ನೂ ಪೂರ್ಣವಾಗಿಲ್ಲ. ನಿರ್ದಿಷ್ಟ ಕಾಮಗಾರಿಗೆ ಇಂತಿಷ್ಟೇ ಕಾಲಮಿತಿ ಎಂದು ನಿಗದಿಪಡಿಸಿಯೇ ಟೆಂಡರ್ ಪಡೆದುಕೊಂಡಿರುತ್ತಾರೆ. ಆದರೆ ಇದನ್ನು ಗಾಳಿಗೆ ತೂರಿ ಸುಳ್ಳು ಕಾರಣಗಳನ್ನು ಹೇಳಿ ಕಾಮಗಾರಿಯನ್ನು ಮುಂದೂಡುತ್ತಲೇ ಬರುತ್ತಿದ್ದಾರೆ. ಆದರೆ ಕಾಲಮಿತಿ ಮುಗಿದಿರುವ ಬಗ್ಗೆ ಸ್ಪಷ್ಟವಾಗಿದ್ದರೂ ಸಹ ಅಧಿಕಾರಿಗಳು ಸುಮ್ಮನಿರುವುದರ ಹಿಂದೆ ಕಾಣದ ರಾಜಕೀಯ ಪ್ರಭಾವಿಯ ಕೈಗಳ ಒತ್ತಡ ಇರಬಹುದೆಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.? ಅಧಿಕಾರಿಗಳು ಹೇಳಿದಂತೆ ೨೦೧೯ರಲ್ಲಿಯೇ ದೇವಿಪ್ರಸಾದ್ ಎನ್ನುವವರಿಗೆ ಟೆಂಡರ್ ಮಂಜೂರಾಗಿದ್ದು ಇದುವರೆಗೂ ಪೂರ್ಣಗೊಂಡಿಲ್ಲದಿರುವುದಕ್ಕೆ ಕಾರಣವೇನು? ಮತ್ತೊಬ್ಬ ಟೆಂಡರ್ ಪಡೆದಿರುವ ನಾಗರಕಟ್ಟೆ ರಾಜಣ್ಣ ಇವರಿಗೆ ಟೆಂಡರ್ ಆಗಿದ್ದು ಇವರ ಒಂದು ತಿಂಗಳ ಕಾಲಮಿತಿ ಉಳಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಸಾರ್ವಜನಿಕರ ಕೋಟಿಗಟ್ಟಲೆ ತೆರಿಗೆ ಹಣ ಈ ರೀತಿ ಪೋಲಾಗುತ್ತಿರುವುದನ್ನು ನೋಡಿಯೂ ನೋಡದಂತೆ ಕುಳಿತಿರುವುದು ಯಾರ ಪುರುಷಾರ್ಥಕ್ಕೋ ? ಕಳಪೆ ಕಾಮಗಾರಿಯಾಗಿದ್ದು ಕಣ್ಣಿಗೆ ಕಂಡರೂ ಕಾಣದಂತಿರುವ ಅಧಿಕಾರಿಗಳ ಮೇಲೆ ಮುಂದಿನ ದಿನಗಳಲ್ಲಿ ಲೋಕಾಯುಕ್ತರ ಗಮನಕ್ಕೆ ತರಲಾಗುವುದೆಂದು ಚಂದ್ರಶೇಖರ.ಪಿ, ಅಜ್ಜಪ್ಪ, ನೂರ್, ಆಕ್ರೋಶ ವ್ಯಕ್ತಪಡಿಸಿದರು.

■ಸಾರ್ವಜನಿಕರು ರಾಜಕಾಲುವೆ ಕಳೆಪ ಕಾಮಗಾರಿ ಎಂದು ಆರೋಪಿಸುತ್ತಿದ್ದು, ಈ ಕಾಮಗಾರಿ ಸಂಪೂರ್ಣವಾಗಿ ಮುಗಿದ ನಂತರ ಮೂರನೇ ವ್ಯಕ್ತಿ ತಪಾಸಣೆ ನಡೆಸಿ ಕಾಮಗಾರಿಯ ಸಂಪೂರ್ಣ ವಿವರ ನೀಡಿದ ಮೇಲೆಯೇ ಬಿಲ್ಲನ್ನು ಸಂಬಂಧಿಸಿದ ಟೆಂಡರ್‌ದಾರರಿಗೆ ಪಾವತಿಸಲಾಗುವುದು.
—-ವೆಂಕಟನಾರಾಯಣ, ಎ.ಇ.ಇ. ವಿಜಯನಗರ

■ಕಳಪೆ ಕಾಮಗಾರಿಯ ಬಗ್ಗೆ ಸಂಪೂರ್ಣ ಮಾಹಿತಿಯು ಹಿಂದೆ ಇದ್ದ ಅಧಿಕಾರಿಗಳಿಗೆ ಗೊತ್ತಿದ್ದು, ಕಾಮಗಾರಿಗಳ ಬಗ್ಗೆ ಏನೇ ಸಮಸ್ಯೆ ಬಂದರೂ ಅವರೇ ಬಗೆಹರಿಸುತ್ತಾರೆ. ಕೊಟ್ಟೂರಿಗೆ ಸಂಬಂಧಿಸಿದಂತೆ ನಾನು ಕೆಲಸ ನಿರ್ವಹಿಸಲು ಆಗುವುದಿಲ್ಲವೆಂದು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ.
—-ನಾಗೇಶ್, ಲೋಕೋಪಯೋಗಿ ಅಭಿಯಂತರರು ಕೂಡ್ಲಿಗಿ.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here