ಪತ್ರಿಕಾ ವಿತರಕರನ್ನು ಗುರುತಿಸುವ ಕಾರ್ಯ ಆಗಲಿ.

0
108

ಇಂದು ವಿಶ್ವ ಪತ್ರಿಕಾ ವಿತರಕರ ದಿನ,ವಿಶ್ವದ ವಿದ್ಯಮಾನವನ್ನು ಓದುಗ ದೊರೆಯ ಮನೆ ಬಾಗಿಲಿಗೆ ಮುಟ್ಟಿಸುವ ಪತ್ರಿಕೆ ವಿತರಕರ ಕುರಿತು ಅಭಿಮಾನ, ಮೆಚ್ಚಗೆ ವ್ಯಕ್ತಪಡಿಸುವುದು ಪ್ರತಿಯೊಬ್ಬರ ಕರ್ತವ್ಯ.

ಹೌದು, ಮಳೆ, ಗಾಳಿಯನ್ನದೇ ನಸುಗಿನಲ್ಲೇ ಎದ್ದು ಪತ್ರಿಕೆಗಳನ್ನು ಜೋಡಿಸಿಕೊಂಡು ಓದುಗರ ಮನೆ ಬಾಗಿಲಿಗೆ ತಲುಪಿಸುವ ವಿತರಿಕರಗೆ ಹಲವು ಸಂಕಷ್ಟಗಳಿವೆ. ತಮಗೆ ಸಿಗುವ ಅಲ್ಪ ಕಾಸಿನಲ್ಲೇ ತೃಪ್ತಿ ಪಡುವ ವಿತರಕರು ಚಾಚೂತಪ್ಪದೆ ಪ್ರತಿದಿನ ಪತ್ರಿಕೆ ಮುಟ್ಟಿಸುವ ಕಾರ್ಯ ಮಾಡುತ್ತಾರೆ. ಈ ಸಂಘಟಿತ ವಲಯದ ಕಾರ್ಮಿಕರಿಗೆ ಮುಖ್ಯವಾಗಿ ಜೀವನ ಭದ್ರತೆ ಇಲ್ಲ.

ಎಂಟರಿಂದ ಅರವತ್ತರ ವಯೋಮಾನದವರು ಪತ್ರಿಕೆ ವಿತರಣೆ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಹಲವರು ಪತ್ರಿಕೆಯಿಂದ ಅಲ್ಪಹಣವನ್ನೇ ನೆಚ್ಚಿಕೊಂಡಿದ್ದಾರೆ. ಮತ್ತೆ ಕೆಲವರು ಇದರ ಜೊತೆಗೆ ಅನ್ಯಕೆಲಸ ಕೂಡ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಸಾವಿರಾರು ಜನ ವಿತರಕರು ಕೆಲಸ ಮಾಡುತ್ತಿದ್ದಾರೆ. ವರ್ಷಪೂರ್ತಿ ನಿದ್ದೆಗೆಟ್ಟು ಪತ್ರಿಕೆ ತಲುಪಿಸುವ ಕಾರ್ಯ ಮಾಡುವ ಗುರುತಿಸುವ ಕಾರ್ಯವಾಗುತ್ತಿಲ್ಲ ಎಂಬ ಅಳಲು ಪತ್ರಿಕೆ ವಿತರಕರದ್ದು.

ಪತ್ರಿಕೆ ವಿತರಕರಿಗೆ ಬೇಕು ಈ ಸೌಲಭ್ಯ
ಪತ್ರಿಕೆ ವಿತರಕರಿಗೆ ಸರ್ಕಾರ ಜೀವನ ಭದ್ರತೆ ಒದಗಿಸಲು ಮುಂದಾಗಬೇಕು.
ಆರೋಗ್ಯ ವಿಮೆ, ಪಿಂಚಣಿ ಸೌಲಭ್ಯಕ್ಕೆ ಚಿಂತನೆ ನಡೆಸಬೇಕು
ಸರ್ಕಾರಿ ಬಸ್‍ಗಳಲ್ಲಿ ಉಚಿತ ಬಸ್ ನೀಡುವ ಕುರಿತು ಪರಿಶೀಲನೆ ನಡೆಸಬೇಕು.

ವರದಿ:ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here