ಬೆಳೆ ಹಾನಿ: ರೈತರ ಖಾತೆಗಳಿಗೆ 40.87 ಕೋಟಿ ರೂ. ಜಮೆ

0
176

ರಾಯಚೂರು,ಡಿ.15 :- 2021ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿಯಾದ ರೈತರಿಗೆ ಈಗಾಗಲೇ 11ನೇ ಹಂತಗಳಲ್ಲಿ 58,112 ಫಲಾನುಭವಿಗಳಿಗೆ 40.87 ಕೋಟಿ ರೂ.ಗಳ ಇನ್ ಪುಟ್ ಸಬ್ಸಿಡಿಯನ್ನು ಸರ್ಕಾರದಿಂದ ನೇರವಾಗಿ ಆಧಾರ ಸಂಖ್ಯೆ ಹೊಂದಿರುವ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ.

ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಮುಂಗಾರು ಹಂಗಾಮಿನ ಪ್ರವಾಹ ಅಥವಾ ಅಕಾಲಿಕ ಮಳೆ ಸಂದರ್ಭದಲ್ಲಿ ಬೆಳೆ ಹಾನಿಯಾಗಿರುವ ರೈತರ ಮಾಹಿತಿಯನ್ನು ಭೂಮಿ ಪರಿಹಾರ ತಂತ್ರಾAಶದಲ್ಲಿ ದಾಖಲು ಮಾಡಿರುವ 12ನೇ ಹಂತದ 2,781 (3,001 ಸರ್ವೆ ನಂ) ರೈತರಿಗೆ 1.85 ಕೋಟಿ ರೂ.ಗಳ ಇನಪುಟ್ ಸಬ್ಸಿಡಿಯನ್ನು ಜಮೆ ಮಾಡಲು ಅನುಮೊದನೆ ನೀಡಲಾಗಿದ್ದು, ಅತೀ ಶೀಘ್ರದಲ್ಲಿ ಸರ್ಕಾರ ದಿಂದ ನೇರವಾಗಿ ಆಧಾರ ಸಂಖ್ಯೆ ಹೊಂದಿರುವ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನವನ್ನು ಜಮ ಮಾಡಲಾಗುವುದು ಮತ್ತು ಬಾಕಿ ಉಳಿದ ರೈತರ ಮಾಹಿತಿಯನ್ನು ಭೂಮಿ ಪರಿಹಾರ ತಂತ್ರಾAಶದಲ್ಲಿ ದಾಖಲು ಮಾಡಲಾಗಿದ್ದು, ಹಂತ ಹಂತವಾಗಿ ಪರಿಹಾರ ಧನವನ್ನು ರೈತರ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಜಮೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.


ರೋಜ್‌ಗಾರ್ ದಿವಸ್ ಆಚರಣೆ: ಕಾಮಗಾರಿ ಸ್ಥಳದಲ್ಲಿ ಲಸಿಕೆ

ಕೂಲಿ ಕಾರ್ಮಿಕರಗುಳೆ ತಡೆಗೆ ನರೇಗಾ ಸಹಕಾರಿ: ಐಇಸಿ ಸಂಯೋಜಕ ಸತೀಶ

ರಾಯಚೂರು,ಡಿ.15 :- ಕೂಲಿ ಕಾರ್ಮಿಕರ ಗುಳೆ ತಡೆಗೆ ಸರ್ಕಾರ ಮಹತ್ವಕಾಂಕ್ಷೆ ನರೇಗಾ ಯೋಜನೆ ಜಾರಿಗೊಳಿಸಿದ್ದು, ಅರ್ಹ ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮಸ್ಕಿ ತಾಪಂ ಐಇಸಿ ಸಂಯೋಜಕ ಜಿ.ಸತೀಶ ಸಲಹೆ ನೀಡಿದರು.

ಅವರು ಡಿ.15ರ ಬುಧವಾರ ಜಿಲ್ಲೆಯ ಮಸ್ಕಿ ತಾಲೂಕಿನ ತಲೇಖಾನ್ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಆಯೋಜಿಸಿದ್ದ ರೋಜ್‌ಗಾರ್ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೂಲಿ ಕಾರ್ಮಿಕರು, ಪರಿಶಿಷ್ಟ ಜಾತಿ, ಪಂಗಡದವರಿಗೆ ಅನುಕೂಲ ಕಲ್ಪಿಸಲು ಸರ್ಕಾರ ನರೇಗಾ ಯೋಜನೆ ಜಾರಿಗೆ ತಂದಿದೆ. ಗ್ರಾಪಂ ಕಚೇರಿಯಲ್ಲಿ ಕೆಲಸದ ಬೇಡಿಕೆ ಪಟ್ಟಿ ಸಲ್ಲಿಸಿ, ಸ್ವಂತ ಊರಿನಲ್ಲಿ ದುಡಿದು ಆರ್ಥಿಕವಾಗಿ ಸದೃಢರಾಗಬಹುದು. ಪ್ರತಿ ದಿನಕ್ಕೆ ಸಾಮಗ್ರಿ ವೆಚ್ಚದ ಜತೆಗೆ 289 ರೂ. ಕೂಲಿ ನೀಡಲಾಗುತ್ತಿದೆ. ಕೆಲಸದ ಸ್ಥಳದಲ್ಲಿ ಕುಡಿವ ನೀರಿನ ಜತೆಗೆ ಅಗತ್ಯ ಸೌಕರ್ಯ ಒದಗಿಸಲಾಗುತ್ತಿದೆ. ಸಮುದಾಯ ಕಾಮಗಾರಿಗಳಿಂದ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಸಾಧ್ಯವಾಗಿದೆ.

ವಿವಿಧ ಗ್ರಾಮಗಳಲ್ಲಿ ನರೇಗಾದಡಿ ಅಂಗನವಾಡಿ, ಬಿಸಿಯೂಟದ ಕೊಠಡಿ, ಬಾಸ್ಕೆಟ್ ಬಾಲ್ ಮೈದಾನ ನಿರ್ಮಿಸಿದ್ದರಿಂದ ಗ್ರಾಮಗಳ ಅಂದ ಹೆಚ್ಚಿದೆ. ಶಾಲಾ ಮಕ್ಕಳಿಗೂ ಅನುಕೂಲವಾಗಿದೆ. ನೀರಿನ ತೊಟ್ಟಿ, ಗೋಕಟ್ಟೆ, ಬದು ನಿರ್ಮಾಣ, ಮಳೆ ನೀರು ಕೊಯ್ಲು ಸೇರಿ ವಿವಿಧ ಕಾಮಗಾರಿಗಳು ಜಲ ಸಂರಕ್ಷಣೆಗೆ ನಾಂದಿ ಹಾಡಿವೆ. ವೈಯಕ್ತಿಕ ಕಾಮಗಾರಿಗಳಾದ ದನದದೊಡ್ಡಿ, ಕುರಿ ಶೆಡ್, ಎರೆಹುಳು ತೊಟ್ಟಿ ನಿರ್ಮಾಣ, ಪೇರಲ ಬೆಳೆ ಸೇರಿ ವಿವಿಧ ತೋಟಗಾರಿಕೆ ಬೆಳೆಗಳಿಗೆ ಅಗತ್ಯ ಸಹಾಯಧನ ಒದಗಿಸಲಾಗುತ್ತಿದೆ. ರೈತರು ಸಂಪ್ರದಾಯಿಕ ಬೆಳೆಗಳ ಜತೆಗೆ ವಾಣಿಜ್ಯ ಬೆಳೆಗಳನ್ನು ಬೆಳೆದು, ಸಾಲದ ಸುಳಿಯಿಂದ ಪಾರಾಗಬೇಕು ಎಂದರು.
ತಲೇಖಾನ್ ಗ್ರಾಪಂ ಪಿಡಿಒ ಮಂಜುಳಾ ಪಂಚಾಳ ಮಾತನಾಡಿ, ಕೆಲಸದ ಬೇಡಿಕೆ ಅರ್ಜಿ ಸಲ್ಲಿಸುವುದು ಸೇರಿ ಇಡೀ ಯೋಜನೆಯ ಮಾಹಿತಿ ನೀಡಿದರು. ಕಂಪ್ಯೂಟರ್ ಆಪರೇಟರ್ ಶರಣಬಸವ, ಕಾಯಕಮಿತ್ರ ನಾಗರತ್ನಇತರರಿದ್ದರು.

ಕಾಮಗಾರಿ ಸ್ಥಳದಲ್ಲಿ ಲಸಿಕೆ: ತಲೇಖಾನ್ ಗ್ರಾಮದ ನರೇಗಾ ಕೂಲಿ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲೇ ಕರೋನಾ ಲಸಿಕೆ ನೀಡಲಾಯಿತು. ಮೆದಕಿನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಣಾ ಅಧಿಕಾರಿ ಸರೋಜಮ್ಮ ಮಾತನಾಡಿ, ಕರೋನಾ ಲಸಿಕೆ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಹೀಗಾಗಿ ಕೂಲಿ ಕಾರ್ಮಿಕರು ಅನಗತ್ಯ ಭಯದಿಂದ ಹೊರ ಬಂದು ಲಸಿಕೆ ಪಡೆಯಬೇಕು ಎಂದು ಸಲಹೆ ನೀಡಿದರು. 15 ದಿನಗಳಿಂದ ಕೂಲಿ ಕಾರ್ಮಿಕರು ಇರುವ ಸ್ಥಳಕ್ಕೆ ತೆರಳಿ ಲಸಿಕೆ ನೀಡಲಾಗುತ್ತಿದೆ ಎಂದರು.

ಇದೇ ಸಂದ0ರ್ಭದಲ್ಲಿ ಆರೋಗ್ಯ ನಿರೀಕ್ಷಣಾಅಧಿಕಾರಿ ಬಸವರಾಜ್, ಆಶಾ ಕಾರ್ಯಕರ್ತೆಯರಾದ ಪವಿತ್ರಾ, ಸಾವಿತ್ರಮ್ಮ, ಪಿಡಿಒ ಮಂಜುಳಾ ಪಂಚಾಳ ಸೇರಿದಂತೆ ಇತರರು ಇದ್ದರು.


ಐಟಿಐ: ತರಬೇತಿಗೆ ಅರ್ಜಿ ಆಹ್ವಾನ

ರಾಯಚೂರು,ಡಿ.15 :- ಬೆಂಗಳೂರಿನ ಹಿಂದುಸ್ಥಾನ ಏರೋನಾಟಿಕ್ಸ್ ಲಿಮಿಟೆಡ್ ವತಿಯಿಂದ ವಿವಿಧ ವೃತ್ತಿಗಳಲ್ಲಿ ಅಪ್ರೆಂಟಿಶಿಫ್ ತರಬೇತಿಯನ್ನು ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಫಿಟ್ಟರ್, ಟರ್ನರ್, ಮಶಿನಿಷ್ಟ, ಎಲೆಕ್ಟಿçÃಷನ್, ವೆಲ್ಡರ್, ಕೊಪಾ, ಪೌಂಡರಿ ಮ್ಯಾನ್, ಶೀಟ್ ಮೇಟಲ್ ವರ್ಕರ್ ವೃತ್ತಿಯಲ್ಲಿ ವಿದ್ಯಾರ್ಹತೆ ಪಡೆದ ಅಭ್ಯರ್ಥಿಗಳು ತಿತಿತಿ.ಚಿಠಿಠಿಡಿeಟಿಣiಛಿeshiಠಿiಟಿಜiಚಿ/ಛಿಚಿಟಿಜiಜಚಿಣe-ಡಿegisಣಡಿಚಿಣioಟಿ ನೋಂದಣಿ ಮಾಡಿಕೊಂಡ ನಂತರ ನೋಂದಣಿ ಸಂಖ್ಯೆಯ ಪ್ರತಿಯನ್ನು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಕ್ಕೆ ಡಿ.28ರೊಳಗಾಗಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ: 08532-231684ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ಮಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಜೆಸ್ಕಾಂ: ಡಿ.16ರಂದು ಗ್ರಾಹಕರ ಸಂವಾದ ಸಭೆ

ರಾಯಚೂರು,ಡಿ.15 :- ಜಿಲ್ಲೆಯ ದೇವದುರ್ಗದ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಕಾರ್ಯ ಮತ್ತು ಪಾಲನೆ ವಿಭಾಗದ ಕಚೇರಿಯಲ್ಲಿ ಇದೇ ಡಿ.16ರ ಮಧ್ಯಾöಹ್ನ 3.ಯಿಂದ ಸಂಜೆ 5ಗಂಟೆಯವರೆಗೆ ಗ್ರಾಹಕರ ಕುಂದುಕೊರತೆ ಸಭೆಯನ್ನು ಏರ್ಪಡಿಸಲಾಗಿದೆ.

ಗ್ರಾಹಕರು ಅಥವಾ ಸಾರ್ವಜನಿಕರು ತಮ್ಮ ವಿದ್ಯುತ್ ಸಂಬAಧಿಸಿದ ಸಮಸ್ಯೆಗಳನ್ನು ಈ ಗ್ರಾಹಕರ ಕುಂದುಕೊರತೆ ಸಭೆಯಲ್ಲಿ ಪಾಲ್ಗೊಂಡು ಪರಿಹರಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಭೆಯಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆಯಬೇಕೆಂದು ಎಂದು ದೇವದುರ್ಗದ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಜೆಸ್ಕಾಂ: 17ರಂದು ದೇವದುರ್ಗ ತಾಲೂಕಿನ ವಿವಿಧಡೆ ವಿದ್ಯುತ್ ವ್ಯತ್ಯಯ

ರಾಯಚೂರು,ಡಿ.15 :- ಜಿಲ್ಲೆಯ ದೇವದುರ್ಗ ತಾಲೂಕಿನ 110 ಕೆ.ವಿ ರಾಯಚೂರು ದಿಂದ ಶಾಹಾಪುರ ಡಬಲ್ ಸರ್ಕ್ಯೂಟ್ ಮಾರ್ಗಗಳಲ್ಲಿ ಇನ್ಸೂಲೇಟರ್ ಬದಲಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಈ ಪ್ರಯುಕ್ತ 2021ರ ಡಿ.17ರ ಬೆಳಿಗ್ಗೆ 8ರಿಂದ ಸಂಜೆ 5ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಗೂಗಲ್, ಇಟಗಿ, ಹೆರೂರು, ಯಾಟಗಲ್, ಮಾತ್ಪಲ್ಲಿ, ಹೆರೇಬೂದುರು, ಗಬ್ಬೂರು, ಮಸಿದಾಪುರ, ಮಲದಕಲ್, ಸುಂಕೇಶ್ವರಹಾಳ, ರಾಮದುರ್ಗ, ಖಾನಾಪುರ, ಕಾಕರಗಲ್ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ದೇವದುರ್ಗ ಜೆಸ್ಕಾಂ ಕಾ ಮತ್ತು ಪಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅಪರಿಚಿತ ಮೃತ ದೇಹ: ಪತ್ತೆಗೆ ಮನವಿ

ರಾಯಚೂರು,ಡಿ.15 :- ಜಿಲ್ಲೆಯ ನೀರಮಾನವಿಯ ರೇಣುಕಾ ಬಡವಣೆ ಸಮೀಪದ ಗುಡ್ಡದಲ್ಲಿ ಅಂದಾಜು 30-35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದ್ದು, ಈ ಕುರಿತು ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ.

ಅಪರಿಚಿತ ಮೃತ ದೇಹವು ಯಾವುದೋ ಕಾಯಿಲೆಯಿಂದ ಮೃತಪಟ್ಟಿದ್ದು, ಆತನ ಹೆಸರು ಮತ್ತು ತಂದೆ ಹೆಸರು ತಿಳಿದು ಬಂದಿಲ್ಲ ಅಂದಾಜು 30 ರಿಂದ 35 ವಯಸ್ಸು ಹಾಗೂ 5.4 ಎತ್ತರ, ಸಾಧಾರಣ ಮೈ ಕಟ್ಟು, ಕೋಲು ಮುಖ, ಕಪ್ಪು ಮಿಶ್ರಿತ ಕೂದಲು ಹೊಂದಿದ್ದು, ಮೈ ಮೇಲೆ ಹಳದಿ ಆಫ್ ಶರ್ಟ್, ಕಪ್ಪು ಬಣ್ಣದ ಜಿನ್ಸ್ ಪ್ಯಾಂಟ್, ಬಿಳಿ ಬಣ್ಣದ ಆಫ್ ಬನಿಯನ್ ಹಾಗೂ ನೀಲಿ ಬಣ್ಣದ ಒಳ ಚೆಡ್ಡಿ ಧರಿಸಲಾಗಿದೆ.

ಈ ಅಪರಿಚಿತ ಮೃತ ದೇಹದ ಬಗ್ಗೆ ಯಾರಿಗಾದರು ಸುಳ್ಳಿವು ಸಿಕ್ಕಲ್ಲಿ ಠಾಣೆ ದೂರವಾಣಿ ಸಂಖ್ಯೆ; 08538220333, ಪಿ.ಎಸ್. ಐ. ದೂರವಾಣಿ ಸಂಖ್ಯೆ; 9480803865ಗೆ ಸಂಪರ್ಕಿಸುವಂತೆ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here