ಕೂಡ್ಲಿಗಿ:ವಿಶ್ವ ಕ್ಷಯ ರೋಗ ದಿನಾಚರಣೆ

0
110

ವಿಜಯನಗರ ಜಿಲ್ಲೆಕೂಡ್ಲಿಗಿ ಸಾರ್ವಜನಿಕ ಅಸ್ಪತ್ರೆಯ ಆವರಣದಲ್ಲಿ,ಮಾ24ರಂದು ತಾಲೂಕು ಆರೋಗ್ಯ ಇಲಾಖೆ ತಾಲೂಕು ಸಾವ೯ಜನಿಕ ಆಸ್ಪತ್ರೆ ಹಾಗೂ ಮೈರಾಡ ಟಿ.ಬಿ.ರೀಚ್ ಸಂಸ್ಥೆ, ಆರೋಹಣ ಸೊಸೈಟಿ ಫಾರ್ ಸೋಷಿಯಲ್ ಡೆವಲಪ್ಮೆಂಟ್ ಸಂಸ್ಥೆ, ಕೂಡ್ಲಿಗಿ ಸೌಖ್ಯ ಬೆಳಕು ಸಮುದಾಯ ಸೇವಾ ಸಂಸ್ಥೆ, ವಿಮುಕ್ತಿ ಏಡ್ಸ್ ತಡೆಗಟ್ಟುವ ಮಹೀಳಾ ಸಂಘ ಕೂಡ್ಲಿಗಿ,ಶ್ರೀ ರಾಘವೇಂದ್ರ ಪ್ಯಾರಾ ಮೆಡಿಕಲ್ ಕಾಲೇಜು ಕೂಡ್ಲಿಗಿ. ಸಂಯುಕ್ತ ಆಶ್ರಯದಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆಯನ್ನು ಆಚರಿಸಲಾಯಿತು.

ತಹಶಿಲ್ದಾರರಾದ ಎಸ್.ಮಹಾಬಲೇಶ್ವರ
ಮಾತನಾಡುತ್ತ,1882 ಮಾಚ೯24ರಂದು “ಮೈಕ್ರೋ ಬ್ಯಾಕ್ಟೀರಿಯಾ ಟ್ಯೂಬರ್ ಕ್ಯುಲೋಸಿಸ್” ನ್ನು “ರಾಬಟ೯ ಹೆನ್ರಿಕ್ ಹಮ೯ನ್ ಕೋಚ್” ರವರು ಮಾಚ೯ 24ರಂದು ಕಂಡು ಹಿಡಿದಿದ್ದು.ಪ್ರಯುಕ್ತ ಪ್ರತಿ ವರ್ಷ ಮಾ 24ನ್ನು “ವಿಶ್ವ ಕ್ಷಯ ರೋಗ ದಿನಾಚರಣೆ”ಯನ್ನು ಆಚರಿಸಲಾಗುತ್ತಿದೆ.ತಾವೆಲ್ಲರೂ 2025ರ ಒಳಗಾಗಿ ಕ್ಷಯ ಮುಕ್ತ ಕೂಡ್ಲಿಗಿ ತಾಲೂಕನ್ನಾಗಿಸಲು ಎಲ್ಲರೂ ಕೈಜೋಡಿಸಬೇಕು,ಎಂದು ಅವರು ಕರೆ ನೀಡಿದರು.

ತದನಂತರ ಅವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು, ಹಾಗೂಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು ಆರೋಗ್ಯ ಅಧಿಕಾರಿ
ಡಾ.ಬಿ. ಷಣ್ಮುಖ ನಾಯ್ಕ,
ಡಾ.ವಿನಯ್ ಮುದೇಗೌಡರು,
ಮುಖ್ಯ ವೈದ್ಯಾಧಿಕಾರಿ ಡಾ.ರವಿಕುಮಾರ್, ಮೂಳೆ ತಜ್ಞ ಡಾ.ಐಶ್ವರ್ಯ,ಮಕ್ಕಳ ತಜ್ಞ ವೈದ್ಯ ಡಾ.ಶ್ರೀಮತಿ ರೇಖಾ, ಆಸ್ಪತ್ರೆಯ ಸಿಬ್ಬಂದಿಗಳಾದ ಫಾರ್ಮಸಿ ಅಧಿಕಾರಿಗಳಾದ ಈಶಪ್ಪ, ಶುಶ್ರೂಷಾಧಿಕಾರಿ ರಾಮಂಜಿನೇಯ, ಪ್ರ.ಶಾ.ತಂತ್ರಜ್ಞರಾದ ಅಂಗಡಿ ಮಹಾಂತೇಶ,ಗುರು ಬಸವರಾಜ, ತಾಲೂಕು ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ತಾಲೂಕು ಹಿರಿಯ ಮೇಲ್ವಿಚಾರಕರಾದ ಚಿದಾನಂದ, ತಾಲೂಕ ಹಿರಿಯ ಮೇಲ್ವಿಚಾರಕಿಯರಾದ ಶ್ರೀಮತಿ ದೇವಿಕುಮಾರಿ,ಕಿರಿಯ ಆರೋಗ್ಯ ಸಹಾಯಕರಾದ ಶ್ರೀಮತಿ ಗಿರಿಜಾ, ಕುಮಾರಿ ಭವ್ಯ,ಮಹೇಶ್, ಎಮ್.ಹೆಚ್.ಎಲ್.ಎಮ್ ಯುವರಾಜ್,ನಾಗೇಂದ್ರ,ಎನ್ಟಿಇಪಿ ಸಿಬ್ಬಂದಿಗಳಾದ,ರಾಜಕುಮಾರ್, ಹಿರಿಯ ಚಿಕಿತ್ಸೆ ಮೇಲ್ವಿಚಾರಕರಾದ ಪ್ರ.ಶಾ. ತಂತ್ರಜ್ಞರಾದ ಶ್ರೀಮತಿ ಅರುಣಾ ಹಾಗೂ ಸಿಬ್ಬಂದಿ.
ಮೈರಾಡ ಟಿ.ಬಿ ರೀಚ್ ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕರಾದ ಮಲ್ಲಿಕಾರ್ಜುನ,ತಾಲೂಕು ಮೇಲ್ವಿಚಾರಕರಾದ ಪಿ.ಹಾಲೂರಪ್ಪ, ಸಿಆರ್ಪಿಗಳಾದ ಗೌರಮ್ಮ,ರಂಜಿತಾ, ಸಿಬ್ಬಂದಿಯವರು.ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಸಾವಿತ್ರಿ,ಶ್ರೀಮತಿ ಲತಾ, ಶ್ರೀಮತಿ ಗಂಗಮ್ಮ,ಆರೋಹಣ ಸೊಸೈಟಿ ಫಾರ್ ಸೋಷಿಯಲ್ ಡೆವಲಪ್ಮೆಂಟ್ ಸಂಸ್ಥೆಯ.ಮುಖ್ಯಸ್ಥರಾದ ಶ್ರೀಮತಿ ಸುಧಾರಾಣಿ, ಸಿಬ್ಬಂದಿಗಳಾದ ಜೆ.ಎನ್ ಅರುಣಾ,ಅಜ್ಜಯ್ಯ, ಸಮುದಾಯ ಸೇವಾ ಸಂಸ್ಥೆಯ ಸಿಬ್ಬಂದಿಗಳು ಮತ್ತು ವಿಮುಕ್ತಿ ಏಡ್ಸ್ ತಡೆಗಟ್ಟುವ ಮಹೀಳಾ ಸಂಘದ ಸಿಬ್ಬಂದಿಗಳು.ಪ್ಯಾರಾ ಮೆಡಿಕಲ್ ಕಾಲೇಜು ಕೂಡ್ಲಿಗಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಐಸಿಟಿಸಿ ಆಪ್ತ ಸಮಾಲೋಚಕ ಜಿಗೇನಹಳ್ಳಿ ಕೆ.ಪ್ರಶಾಂತಕುಮಾರ ನಿರೂಪಿಸಿದರು,ಆಪ್ತ ಸಮಾಲೋಚಕರು ಓಬಣ್ಣ ಸ್ವಾಗತಿಸಿದರು,ಆಪ್ತ ಸಮಾಲೊಚಕರಾದ ಶ್ರೀಮತಿ ನಾಗರತ್ನ ಆಪ್ತ ವಂದಿಸಿದರು. ಈ ವಷ೯ದ ಘೋಷಣೆ “ಕಾಲ ಘಟಿಸುತ್ತಿದೆ” ಜಾಥಾ ಕಾರ್ಯಕ್ರಮ, ತಾಲೂಕು ಸಾವ೯ಜನಿಕ ಆಸ್ಪತ್ರೆಯಿಂದ ವೀರ ಮದಕರಿ ನಾಯಕ ವ್ರತ್ತದ ವರೆಗೆ ಘೋಷಣೆ ಕೂಗುವುದರ ಮೂಲಕ. ಸಾವ೯ಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಟಿ.ಬಿ.ವಾರಿಯರ್ಸ್ ಗೆ ಸನ್ಮಾನ:-
ಮೈರಾಡ ಟಿ.ಬಿ ರೀಚ್ ಸಂಸ್ಥೆಯ ವತಿಯಿಂದ, ಟಿ.ಬಿ.ವಾರಿಯರ್ಸ್ ಗಳಾದ ಹಿರಿಯ ಮೇಲ್ವಿಚಾರಕರಾದ ರಾಜಕುಮಾರ್ ಮತ್ತು ಪ್ರ.ಶಾ. ತಂತ್ರಜ್ಞಾರಾದ ಕುಮಾರಿ ಭಾಗ್ಯಮ್ಮ ಇವರಿಗೆ ಮಾನ್ಯ ತಹಸಿಲ್ದಾರ್ ರವರು ಮಾನ್ಯ ತಾಲೂಕು ಆರೋಗ್ಯ ಅಧಿಕಾರಿಗಳು ಮೈರಾಡ ಟಿ.ಬಿ ರೀಚ್ ಸಂಸ್ಥೆಯ ತಾಲೂಕು ಮೇಲ್ವಿಚಾರಕರ ಸಹಯೋಗದಲ್ಲಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here