ಸಮರ್ಪಕವಾಗಿ ಮಾಸಾಶನ ಕಲ್ಪಿಸಿ-ವಂದೇ ಮಾತರಂ ಜಾಗೃತಿ ವೇದಿಕೆ ಆಗ್ರಹ.

0
129

ಕೂಡ್ಲಿಗಿ ಪಟ್ಟಣ ಹಾಗೂ ಪಟ್ಟಣ ಪಂಚಾಯ್ತಿ ಹಾಗೂ ತಾಲೂಕಿನ ವಿವಿದೆಡೆಗಳಲ್ಲಿ,ಪ್ರತಿ ತಿಂಳು ನೀಡಬೇಕಾಗಿರುವ ಮಾಸಾಶನ ತಮಗೆ ಸಮರ್ಪಕವಾಗಿ ದೋರಕುತಿಲ್ಲ ಎಂದು ಫಲಾನುಭವಿಗಳು ದೂರು ನೀಡಿದ್ದಾರೆ.ಇದು ಕೇವಲ ಪಟ್ಟಣದ ಪಲಾನುಭವಿಗಳ ಗೋಳು ಮಾತ್ರವಲ್ಲ,ತಾಲೂಕಿನ ಬಹುತೇಕ ಗ್ರಾಮೀಣ ಭಾಗದ ಪಲಾನುಭವಿಗಳ ಅಳಲಾಗಿದೆ.

ಮೊರಬ ಗ್ರಾಮದ ಗ್ರಾಮದ ಪಲಾನುಭವಿಗಳ ಮೊರೆ:-
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಮೊರಬ ಗ್ರಾ ಪಂ ವ್ಯಾಪ್ತಿಯ ಗ್ರಾಮಗಳಲ್ಲಿ,ತಮಗೆ ಸಮರ್ಪಕವಾಗಿ ಮಾಸಾಶನ ಬರುತ್ತಿಲ್ಲ ಎಂದು ಬಹುತೇಕ ಪಲಾನುಭವಿಗಳು ಪತ್ರಿಕೆ ದೂರಿದ್ದಾರೆ.ಕೆಲವರಿಗೆ ಎರೆಡು ಮೂರು ತಿಂಗಳು,ಆರು ತಿಂಗಳು ಕೆಲವರಿಗೆ ಒಂದು ವರ್ಷವಾದರೂ ಬಂದಿಲ್ಲ,ಕಾರಣ ಹೇಳುತಿಲ್ಲ.ತಾವು ತಿಂಗಳಾ ಅಲೆದು ಅಲೆದೂ ಸುಸ್ಥಾಗಿರುವುದಾಗಿ ಅಳಲು ತೋಡಿಕೊಂಡಿದ್ದಾರೆ.
ಪೋಸ್ಟ್‌ ನವರು ನಾವೇನು ಮಾಡಕಾಗಲ್ಲ.. ಮೇಲಿಂದ ಬಂದಿಲ್ಲ.. ಬಂದ್ರೆ ನಾವೇ ಕೊಡುತ್ತೀವಿ ಅಂತಾರೆ,ತಾಲೂಕು ಆಪೀಸ್ ಗೆ ಹೋದ್ರೆ ಅಲ್ಲಿ ನಮ್ಮನ್ನ ಆಲಿಸರೇ ಇಲ್ಲ…
ಮಾಡಿಸಿಕೊಡುತೀವಿ ಅಂತ ನಡೂಕ ಬಂದ ಮನುಷ್ಯ ತಲಾ ಎರೆಡು ಮೂರು ಸಾವಿರ ರೊಕ್ಕಾ ಇಸಂಗಡಾನ.. ಅಂತ ಕಣ್ಣೀರಿಡುತ್ತಾಳೆ ಹೆಸರು ಹೇಳದ ವೃದ್ಧೆ.ಇದು ಕೇವಲ ವೃದ್ಧೆಯೋರ್ವಳ ಸಂಕಷ್ಥವಲ್ಲ.
ತಾಲೂಕಿನ ನೂರಾರು ವೃದ್ಧರ ವಿಧವೆಯರ ವಿಕಲಾಂಗರ,ಅರ್ಹ ಪಲಾನುಭವಿಗಳ ನೊಂದವರ ಅಳಲಾಗಿದೆ.

ತಾಲೂಕಿನ ಅಶಕ್ತರ ಅಳಲು:-
ಇದು ‍ಕೆಲ ಬ್ರಷ್ಠ ಕಂದಾಯ ಹಾಗೂ ಪೋಸ್ಟ್ ಅಧಿಕಾರಿಗಳ ಸಿಬ್ಬಂದಿಗಳ ನಿಜಸ್ವರೂಪಕ್ಕೆ ಸಾಕ್ಷಿಯಾಗಿದ್ದು, ಹಾಗೂ ಅಶಕ್ತರ ಅಳಲು ಇದಾಗಿದೆ ಕಾರಣ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಆಲಿಸಬೇಕಿದೆ.
ಬಡವರ ರಕ್ತ ಹೀರೋ ಭ್ರಷ್ಠರ ಹಾಗೂ ತಲೆಮಾಸಿರೋ ಮಧ್ಯವರ್ತಿಗಳ ನಾಚಿಕೆಗೇಡಿತಕ್ಕೆ ಪುರಾವೆಯಾಗಿದೆ.
ಸಮಾಜ ಸೇವೆಯ ಹೆಸರಲ್ಲಿ ತಲೆ ಎತ್ತಿರುವ ಸಂಘ ಸಂಸ್ಥೆಗಳು ನಿದ್ರಿಸುತ್ತಿವೆಯಾ.!?,ಸಮಾಜ ಸೇವೆಯ ಹೆಸರಲ್ಲಿ ಬಿಟ್ಟಿ ಪ್ರಚಾರ ಬಯಸುವ ಭಂಡುಕೋರರ ಬಂಡವಾಳ ಇಷ್ಥೇನಾ.!?,ಎಂಬ ಪ್ರೆಶ್ನೆ ಎಂಥವರಿಗೂ ಮೂಡದೆ ಇರದು..
ವಿಕಲ ಚೇತನರು,ವೃದ್ಧರು, ವಿಧವೆಯರಂತಹ ಅಶಕ್ತರಿಂದ ಹಣ ಕೀಳುವ ಕುಳಗಳು,ಅದಕ್ಕೆ ನಿಯತ್ತಿನಿಂದಾದರೂ ಕೆಲಸ ಮಾಡಿಸದೇ ಸರ್ಕಾರದ ಸೌಲಭ್ಯ ಒದಗಿಸಿಕೊಡದೇ ಹೊಣೆಗೇಡಿತನ ತೋರಿದ್ದಾರೆ.ಫಲನುಭವಿಗಳ ಮನೆಗೆ ತಲುಪಿಸಲು ಸಂಬಳ ಪಡೆಯೋ ಪೋಸ್ಟ್ ನವರು,ಫಲಾನುಭವಿಗಳನ್ನ ಅಲೆದಾಡಿಸುತಿದ್ದಾರೆ ಹಾಗೂ ಸತಾಯಿಸುತಿದ್ದಾರೆ ತಮ್ಮ ಮನೆಗೆ ಕರೆಸಿಕೊಂಡು ದುಂಡಾರ್ತನೆ ಮೆರೆಯುತಿದ್ದಾರೆ.

ಅಶಕ್ತರಲ್ಲಿ ಭಿಕ್ಷೆ ಬೇಡುವ ಭ್ರಷ್ಠರು.!?
ಸರ್ಕಾರ ಫಲಾನುಭವಿಗಳಿಗೆ ನೀಡುವ ಮಾಸಾಶನನೀಡಲು ನಾಚಿಕೆ ಬಿಟ್ಟು,ಎಲ್ಲಾ ಪಲಾನುಭವಿಗಳಿಂದ ಕೆಲವೆಡೆಯ ಪೋಸ್ಟ್ ನವರು ಪ್ರತಿ ತಿಂಗಳು 30₹ರಿಂದ50₹ ವಸೂಲಿ ಮಾಡುತಿದ್ದಾರಂತೆ.ಹಾಗಂತ ಬಹುತೇಕ ಫಲಾನುಭವಿಗಳು ತಮ್ಮನೋವು ತೊಡಿಕೊಂಡಿದ್ದಾರೆ,
ಸರ್ಕಾರದಿಂದ ತಿಂಗಳಾ ಹತ್ತಾರು ಸಾವಿರ ಸಂಬಳ ತೆಗೆದುಕೊಳ್ಳೋ ಇವರು,ಇಂತಹ ಅಶಕ್ತರಿಂದ ಭಿಕ್ಷೆ ಬೇಡುತ್ತಾರಂತೆ ಇದೆಂತಹ ವಿಪರ್ಯಾಸ.!? ಇದೆಂತಹಾ ನಾಚಿಕೆಗೇಡಿನ ಸಂಗತಿ..!?.

ಈ ಸಂಬಂಧಿಸಿದಂತೆ ವಂದೇ ಮಾತರಂ ಜಾಗೃತಿ ವೇದಿಕೆ ಮುಖಂಡರು ಮಾತನಾಡಿದ್ದು,ಇದು ಕೇವಲ ಒಂದು ಗ್ರಾಮದ ಸಮಸ್ಯೆಯಲ್ಲ.ತಾಲೂಕಿನ ಬಹುತೇಕ ಗ್ರಾಮಗಳಲ್ಲಿನ ಸಮಸ್ಯೆಯಾಗಿದೆ.
ಕೆಲ ಜನ ಪ್ರತಿನಿಧಿಗಳು ಅಧಿಕಾರಿಗಳು,ಕೆಲ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಮಾಜಸೇವೆಯ ಸೋಗಿನಲ್ಲಿ ಫೋಜು ಕೊಡೋರು.ಅವ್ಯವಸ್ಥೆಯ ವಿರುದ್ಧ ಧ್ವನಿ ಎತ್ತದೇ ಮೌನ ಸಮ್ಮತಿ ನೀಡಿರೋದು ಖಂಡನೀಯ,
ಈ ಭ್ರಷ್ಠ ಅವ್ಯವಸ್ಥೆ ಖಂಡಿಸಿ ದ್ವನಿ ಎತ್ತಲಾರದಷ್ಟು ಅಶಕ್ತರಾಗಿದ್ದಾರೆ ಎಂದರೆ ಇದೆಂತಹಾ ದುರ್ಗತಿ, ಹತ್ತಾರು ಸಾವಿರ ಸಂಬಳ ಪಡೆಯೋ ಪೋಸ್ಟ್ ನವರು ಪಲಾನುಭವಿಗಳಿಂದ ಹಣ ಪೀಕೋದನ್ನ ಮೊದಲು ನಿಲ್ಲಿಸಬೇಕಿದೆ.
ಕೆಲವು ಕಡೆಗಳಲ್ಲಿ ಫಲಾನುಭವಿಗಳ ಸಹಿ ಫೋರ್ಜರಿ ಮಾಡಿ ಅಥವಾ ಫಲಾನುಭವಿಗಳಿಂದ ತಿಳಿಯದಂತೆ ಸಹಿ ಮಾಡಿಸಿಕೊಂಡು,
ಫಲಾನುಭವಿಗಳ ಹಣ ದುರುಪಯೋಗಮಾಡಿಕೊಂಡು ಬಡ್ಡಿ ಸಾಲದಂಧೆಗೆ ದುರ್ಭಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರುಗಳಿವೆ.

ಇನ್ನು ಕೆಲವು ಕಡೆ ವರ್ಷಗಳ ಕಾಲ ಅಲೆದಾಡಿಸಿ ಹಣ ಬಳಸಿಕೊಂಡು ಸತಾಯಿಸುತ್ತಾರೆಂಬ ಆಕ್ರೋಶ ಕೇಳಿಬಂದಿದೆ, ಹೀಗೆ ಹತ್ತಾರು ದೂರುಗಳಿವೆ ಹಾಗುಯ ಕೆಲವು ಕಡೆಗಳಲ್ಲಿ ಫಲಾನುಭವಿ ಮೃತರಾಗಿದ್ದೂ ಕೂಡ, ಫಲಾನುಭವಿಯ ಹೆಸರಲ್ಲಿ ತಿಂಗಳುಗಳ ಕಾಲ ಪೋಸ್ಟ್ ನವರೇ ಹಣ ಪಡೆದುಕೊಂಡಿದ್ದರೆ ಎಂಬ ದೂರು ಗಳಿವೆ.ಕೆಲವೆಡೆಗೆಳಲ್ಲಿ ಫೋಸ್ಟ್ ನವರೇ ಫಲಾನುಭವಿಗಳೊಂದಿಗೆ ದುಂಡಾವರ್ತನೆ ಯಿಂದ ವರ್ತಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ, ಈ ದೂರುಗಳಿ ಕೇವಲ ಕೂಡ್ಲಿಗಿ ಪಟ್ಟಣಕ್ಕೆ ಮಾತ್ರ ಸೀಮಿತವಾಗಿಲ್ಲ.

ಮೊರಬ ಸೇರಿದಂತೆ ತಾಲೂಕಿನ ಬಹುತೇಕ ಕಡೆಗಳ ದೂರಾಗಿವೆ,ಒಂದೊಂದು ಕಡೆ ಒಂದೊಂದು ತರಹದ ಆರೋಪ ದೂರುಗಳಿವೆ. ತಾಲೂಕಿನ ಬಹುತೇಕ ಗ್ರಾಮೀಣ ಅಂಚೆ ಕೇಂದ್ರಗಳಲ್ಲಿನ ಸಿಬ್ಬಂದಿ ವಿರುದ್ಧ. ಇಂತಹ ಗಂಭೀರ ಆರೋಪಗಳು ಬಹುದಿನಗಳಿಂದ ಹಲವಾರು ಮೌಕಿಕ ದೂರುಗಳು ಕೇಳಿಬಂದಿವೆ,ಹಲುವು ದೂರುಗಳಿಗೆ ಸಾಕ್ಷಿ ಪುರಾವೆ ಹಾಗೂ ವೀಡಿಯೋ ಆಡಿಯೋ ಫೋಟೋ ಸಮೇತ ವಂದೇ ಮಾತರಂ ಜಾಗೃತಿ ವೇದಿಕೆಗೆ ದೂರುದಾರರು ಲಿಖಿತ ದೂರು ನೀಡಿದ್ದಾರೆ ಎಂದು ವೇದಿಕೆ ಖಚಿತಪಡಿಸಿದೆ.
ಕೆಲವೊಂದು ಮೌಕಿಕ ದೂರುಗಳಾಗಿವೆ ಪೂರಕ ಸಾಕ್ಷಿ ಸಂಗ್ರಹಿಸಿದ ಮೇಲೆ,ತಾಲೂಕಿನ ಎಲ್ಲಾ ಗ್ರಾಮೀಣ ಪ್ರದೇಷಗಳಲ್ಲಿನ ದೂರುಗಳನ್ನು ಸಂಗ್ರಹಿಸಿ.

ವಂದೇ ಮಾತರಂ ಜಾಗೃತಿ ವೇದಿಕೆಯಿಂದ ಸಂಬಂಧಸಿದ ಪೋಸ್ಟ್ ರಾಜ್ಯ ಮಹಾಪ್ರಂಬಂಧಕರ ಗಮನಕ್ಕೆ, ಖುದ್ದು ದೂರು ನೀಡುವ ಮೂಲಕ ಮನವರಿಕೆ ಮಾಡಿಕೊಡಲಾಗುವುದು ಎಂದು ವಂದೇ ಮಾತಂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಕೆಲವೊಂದು ಪೊಸ್ಟ್ ಕಚೇರಿಯಲ್ಲಾಗುವ ಭ್ರಷ್ಠಾಚಾರಕ್ಕೆ ಸಂಬಂಧಸಿದಂತೆ, ಭ್ರಷ್ಠಾಚಾರದ ವಿರುದ್ಧ ಫೊಸ್ಟ್ ಇಲಾಖೆಯ ಪ್ರಾಮಾಣಿಕ ಸಿಬ್ಬಂದಿಯವರೇ,
ಭ್ರಷ್ಠರ ವಿರುದ್ಧ ಸುಧೀರ್ಘವಾದ ಮಾಹಿತಿ ವಿವರದೊಂದಿಗೆ ಅಗತ್ಯ ಮಾಹಿತಿಗಳನ್ನ ವಂದೇ ಮಾತರಂ ವೇದಿಕೆ ಗಮನಕ್ಕೆ ತಂದಿರುವುದಾಗಿ ವೇದಿಕೆ ಪದಾಧಿಕಾರಿಗಳು ತಿಳಿಸಿದ್ದಾರೆ.

ಅವುಗಳನ್ನ ಮಾಧ್ಯಮದ ಮುಂದೆ ಹಾಗೂ ಎಸಿಬಿ ಹಾಗೂ ಪೋಸ್ಟ್ ಇಲಾಖಾ ಉನ್ನತಾಧಿಕಾರಿಗಳಲ್ಲಿ ದೂರು ನೀಡಲಾಗುವುದು,ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ವೇದಿಕೆಯಿಂ ಭ್ರಷ್ಠರ ವಿರುದ್ಧ ಕಾನೂನು ಸಮರ ಸಾರಲಿದೆ ಎಂದು ವಂದೇ ಮಾತರಂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here