ಕೋವಿಡ್-19:ಸಮಸ್ಯೆಯಾಗದಂತೆ ಕ್ರಮವಹಿಸಿ; ಜಿಲ್ಲಾಧಿಕಾರಿ

0
66

ಮಂಡ್ಯ.:-ಜಿಲ್ಲೆಯಾದ್ಯಂತ ಕೋವಿಡ್ ನಿಯಂತ್ರಣಕ್ಕೆ ಯಾವುದೇ ಕೊರತೆಯಾಗಬಾರದು ಎಂದು ಜಿಲ್ಲಾಧಿಕಾರಿ ಎಸ್ .ಅಶ್ವಥಿ ಹೇಳಿದರು.
ಕೋವಿಡ್ -19 ನಿಯಂತ್ರಣ ಸಂಬಂಧ ಇಂದು ಜಿಲ್ಲೆಯ ಮಳವಳ್ಳಿ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ಮದ್ದೂರು, ನಾಗಮಂಗಲ ಮತ್ತು ಪಾಂಡವಪುರ ತಾಲ್ಲೂಕಿನ ಆರೋಗ್ಯ ಅಧಿಕಾರಿಗಳು ಹಾಗೂ ತಹಶೀಲ್ದಾರ್‍ಗಳ ಜೊತೆ ಜೂಮ್ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ, ತಾಲ್ಲೂಕಿನಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಗಳು ವೈದ್ಯರು ಕುಂದು ಸೋಂಕಿತರನ್ನು ಭೇಟಿ ಮಾಡಿ ಟ್ರಾಸ್ ಮಾಡಬೇಕು ಎಂದು ಹೇಳಿದರು.
ಸರ್ಕಾರದಿಂದ ಜಿಲ್ಲೆಯಲ್ಲಿ 2ಕಡೆ ಆಕ್ಸಿಜನ್ ಪ್ಲಾಂಟ್ ಗೆ ಅನುಮತಿ ನೀಡಿದ್ದು, ಜಿಲ್ಲಾಸ್ಪತೆ ಆವರಣದಲ್ಲಿ ಡಿ.ಎಚ್.ಒ ಹಾಗೂ ಮಳವಳ್ಳಿ ಯಲ್ಲಿ ತಹಶೀಲ್ದಾರ್ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಈ ಕೂಡಲೇ ಸೂಕ್ತ ಸ್ಥಳ ಪರಿಶೀಲನೆ ಮಾಡಿ ಗುರುತಿಸಿ ಎಂದು ಸೂಚಿಸಿದರು.
ಔಷದಿಗಳು ಸಂಬಂಧ ಮುಂಗಡವಾಗಿ ಕಾಯ್ದಿರಿಸಿ ಈ ಸಂಬಂಧ ಯಾವುದೇ ಸಮಸ್ಯೆ ಆಗದಂತೆ ಕ್ರಮವಹಿಸಿ ಎಂದರು.
ಹೋಮ್ ಐಶೋಲೇಷನ್ ನಲ್ಲಿರುವವರಿಗೆ ಔಷದಿ ಮತ್ತು ಕಿಟ್ ನ್ನು ನೀಡಿ ಎಂದು ಸೂಚಿಸಿದರು.
ಆಕ್ಸಿಜನ್ ಸಂಬಂಧ ಯಾವುದೇ ಕೊರತೆಬಾರದ ರೀತಿ ನಿರ್ವಹಣೆಗಾಗಿ ಕಾಲ್ ಸೆಂಟರ್, ಸಹಾಯವಾಣಿ, ವಾರ್ ರೂಂನ್ನು ತೆರೆಯಲಾಗಿದೆ ಎಂದರು.
ಕೋವಿಡ್ ಕೇರ್ ಸೆಂಟರ್ ಹಾಗೂ ಆಸ್ಪತ್ರೆಯಲ್ಲಿರುವ ಕೋವಿಡ್ ವ್ಯಕ್ತಿಗಳಿಗೆ ಮೂಲಭೂತ ಸೌಕರ್ಯಗಳು,ಹಾಗೂ ಉತ್ತಮ ಆಹಾರ ನೀಡಿ ಅವರಿಗೆ ಯಾವುದೇ ಸಮಸ್ಯೆ ಆಗದಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಕೋವಿಡ್ ಸಂಪರ್ಕಿತರನ್ನು ಪತ್ತೆ ಹಚ್ಚಿ ಹೋಮ್ ಐಶೋಲೇಷನ್ ಅಥವಾ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಿ ಈ ಸೋಂಕಿತರ ಸಂಪರ್ಕಕೊಂಡಿಯನ್ನು ಕಡಿತಗೊಳಿಸಿ ಎಂದರು.
ಆಕ್ಸಿಜನ್ ಸಮಸ್ಯೆ ನಿವಾರಣೆ ಸಂಬಂಧ ಆಕ್ಸಿಜನ್ ಆಡಿಟ್ ಕಮಿಟಿ ಮೂಲಕ ಈ ಸಮಸ್ಯೆ ನಿವಾರಿಸಲು ಕ್ರಮವಹಿಸಿ ಎಂದರು.
ಕೋವಿಡ್ ಸಂಪರ್ಕಿತರನ್ನು ಗುರುತಿಸಿ ಅವರ ಕುಟುಂಬದವರನ್ನು ಪರೀಕ್ಷೆಗೆ ಒಳಪಡಿಸಿ ಎಂದರು.

LEAVE A REPLY

Please enter your comment!
Please enter your name here