ಬಿ.ಜಿ.ಕೆರೆ ಗ್ರಾಮದಲ್ಲಿ ಕೊರೋನಾ ನಿಯಂತ್ರಣಕ್ಕೆ ವಾರ್ಡುಗಳುದಾಧ್ಯಂತ ಸ್ಯಾನಿಟೈಸರ್‌ ಸಿಂಪರಣೆ.

0
85

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮದಲ್ಲಿ ಮೇ 18 ರಂದು ಕೊರೋನಾ ನಿಯಂತ್ರಣಕ್ಕೆ ವಾರ್ಡುಗಳುದಾಧ್ಯಂತ ಸ್ಯಾನಿಟೈಸರ್‌ ಮಾಡಿಸಲಾಗುತ್ತಿದೆ ಪ್ರತಿಯೊಬ್ಬರು ಸ್ವಚ್ಚತೆ ಕಾಪಾಡಿಕೊಳ್ಳುವ ಮೂಲಕ ಆರೋಗ್ಯ ರಕ್ಷಿಸಿಕೊಳ್ಳಬೇಕೆಂದು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ಅಗತ್ಯ ಸೇವಾ ವಸ್ತುಗಳ ಅಂಗಡಿಯನ್ನು ಬಿಟ್ಟು ಬೇರೆ ಯಾವುದೇ ಅಂಗಡಿಗಳನ್ನು ತೆರೆಬಾರದು ಒಂದು ವೇಳೆ ತೆರದಿದ್ದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತಹ ಅಂಗಡಿಗಳನ್ನು ಸೀಜ್ ಮಾಡಿ ಕೇಸ್‌ನ್ನು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಗ್ರಾಮದ ಎಲ್ಲಾ ವಾರ್ಡಗಳಲ್ಲಿ ಸ್ಯಾನಿಟೇಸರ್‌ ಮಾಡಿಸಲಾಗಿದೆ ಎಂದರು. ಸಾರ್ವಜನಿಕರು ಸಹ ಸರ್ಕಾರದ ಆದೇಶಗಳನ್ನು ನಿಯಮಗಳನ್ನು ಅರಿತು ಮುನ್ನಡೆಯಬೇಕು, ಅನವಶ್ಯಕವಾಗಿ ಮಾಸ್ಕ ಧರಿಸದೆ ತಿರುಗಾಟವನ್ನು ಕಡಿಮೆ ಮಾಡಬೇಕು ಪ್ರತಿ ನಾಗರಿಕನು ಬದುಕನ್ನು ಅರಿತು ಆರೋಗ್ಯದ ಮೇಲೆ ನಿಗಾವಹಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ರಾಧಾ ಬಿ- ನಾಗರಾಜ್ ಎಂ.ಪಿ, ಉಪಾಧ್ಯಕ್ಷರು ಶಿವರೆಡ್ಡಿ, ಸದಸ್ಯರುಗಳು, ಪುಷ್ಪ ಬಸವರಾಜ್, ರುದ್ರಮುನಿ, ಪಾಪಯ್ಯ, ಎಲ್ಲಾ ಸದಸ್ಯರುಗಳು, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರ ನೇತೃತ್ವದಲ್ಲಿ, ಸ್ಯಾನಿಟೈಸರ್‌ ಮಾಡಿಸಲಾಯಿತು.

LEAVE A REPLY

Please enter your comment!
Please enter your name here