ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

0
217

ಹೊಸಪೇಟೆ(ವಿಜಯನಗರ),ಜು.16:2020-21ನೇ ಸಾಲಿನ ಡಿಎಂಎಫ್ ಯೋಜನೆಯಡಿಯಲ್ಲಿ ಮಂಜೂರಾದ 90 ಲಕ್ಷ ವೆಚ್ಚದ ಹೊಸಪೇಟೆ ನಗರದ ಉದ್ಯೋಗ ಪೆಟ್ರೋಲ್ ಬಂಕ್‍ನಿಂದ ವಯಾ ಮೇನ್ ಬಜಾರ್ ಮುಖಾಂತರ ಬಳ್ಳಾರಿ ಸರ್ಕಲ್‍ವರೆಗಿನ ರಸ್ತೆ ಅಭಿವೃದ್ಧಿ ಹಾಗೂ 75 ಲಕ್ಷ ವೆಚ್ಚದ ಹೊಸಪೇಟೆ ನಗರದ ರಾಮ್‍ಲೀ ಸ್ವಾಮಿ ಮಜೀದ್ ರಸ್ತೆಯಿಂದ ವಯಾ ಚಪ್ಪರದಹಳ್ಳಿ ಮುಖಾಂತರ 100 ಹಾಸಿಗೆ ಆಸ್ಪತ್ರೆವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಗರದಲ್ಲಿ ಶುಕ್ರವಾರ ಭೂಮಿಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಧರ್ಮೇಂದ್ರಸಿಂಗ್, ಹುಡಾ ಅಧ್ಯಕ್ಷರಾದ ಅಶೋಕ್ ಜಿರೇ, ನಗರಸಭೆ ಆಯುಕ್ತರಾದ ಮನ್ಸೂರ್ ಅಲಿ, ಹುಡಾ ಮಾಜಿ ಅಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಮುಖಂಡರಾದ ಸಂದೀಪ್‍ಸಿಂಗ್, ಸಮಾಜ ಸೇವಕರಾದ ಟಿಂಕರ್ ರಫೀಕ್, ಕಲಂದರ್ ಮತ್ತು ಇತರರು ಇದ್ದರು.

LEAVE A REPLY

Please enter your comment!
Please enter your name here