ಕೆಎಸ್ ಈಶ್ವರಪ್ಪರನ್ನು ಮುಖ್ಯಮಂತ್ರಿ ಮಾಡುವಂತೆ ನಾಗವೇಣಿ ಪಾಟೀಲ್ ಪಾಟೀಲ್ ಒತ್ತಾಯ

0
393

ರಾಜ್ಯದ ಹಿಂದುಳಿದ ವರ್ಗದ ಧೀಮಂತ ನಾಯಕ ಕೆ ಎಸ್ ಈಶ್ವರಪ್ಪನವರು ನಮ್ಮ ನಾಡಿನ ಮುಖ್ಯಮಂತ್ರಿಯಾಗ ಬೇಕೆಂದು ಅಹಿಂದ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ನಾಗವೇಣಿ ಪಾಟೀಲ್ ಅವರು ಬಿಜೆಪಿ ಪಕ್ಷದ ರಾಷ್ಟ್ರೀಯ ಮುಖಂಡರಿಗೆ ಪತ್ರಿಕೆ ಮೂಲಕ ಒತ್ತಾಯಿಸಿದ್ದಾರೆ

ಹೌದು ಇದೊಂದು ಕೂಗು ಕಳೆದ ಹತ್ತು ವರ್ಷದಿಂದಲೂ ಕೇಳಿಬರುತ್ತಲೇ ಇದೆ. ಈಶ್ವರಪ್ಪನವರ ಹತ್ತಿರ ಬಂದಿದ್ದಂತಹ ಮುಖ್ಯಮಂತ್ರಿ ಪಟ್ಟ ಅನೇಕ ಕಾರಣಗಳಿಂದಾಗಿ ಅವರಿಂದ ದೂರ ಸರಿದಿದ್ದು ಸರಿಯಷ್ಟೇ… ಈಶ್ವರಪ್ಪನವರ ನೇರ ನುಡಿ, ಈಶ್ವರಪ್ಪನವರ ನೇರವಾದ ಮಾತುಗಳಿಂದಾಗಿ ಅನೇಕ ಬಾರಿ ಅವರಿಂದ ಮುಖ್ಯಮಂತ್ರಿ ಪಟ್ಟ ಹಿಂದೆ ಸರಿದಿದೆ.

ಅವರು ಎಲ್ಲ ನಾಯಕರ ಹಾಗೆ ಎಲ್ಲರನ್ನೂ ಮೆಚ್ಚಿಸಿಕೊಂಡು ಹಿತವಾದ ನುಡಿಗಳನ್ನು ಹೇಳಿಕೊಂಡು ಹೋಗಿದ್ದಿದ್ದರೆ ಯಾವತ್ತೋ ಮುಖ್ಯಮಂತ್ರಿ ಆಗುತ್ತಿದ್ದರು, ಆದರೆ ಅವರ ವ್ಯಕ್ತಿತ್ವವೇ ಹಾಗೆ ನೇರ ನುಡಿಗೆ ಪ್ರಖ್ಯಾತಿ ಅವರು ತಮ್ಮ ಮನಸ್ಸಿನಲ್ಲಿ ಯಾವುದನ್ನು ಬಚ್ಚಿಟ್ಟುಕೊಳ್ಳದೆ ಮುಕ್ತ ಮನಸ್ಸಿನಿಂದ ಬಿಚ್ಚಿ ನುಡಿಯುವಂತಹ ಮನುಷ್ಯ.

ಎಂಬತ್ತರ ದಶಕದಿಂದಲೂ ಸಂಪೂರ್ಣವಾಗಿ ಬಿಜೆಪಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅನೇಕ ಜವಾಬ್ದಾರಿಗಳ ಮುಖಾಂತರ ಅಂದರೆ ನಗರ ಅಧ್ಯಕ್ಷ, ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ, ರಾಜ್ಯ ಬಿಜೆಪಿ ಅಧ್ಯಕ್ಷ, ರಾಷ್ಟ್ರೀಯ ಕಾರ್ಯದರ್ಶಿ ಹೀಗೆ ಹತ್ತು ಹಲವಾರು ಜವಾಬ್ದಾರಿಗಳ ಮುಖಾಂತರ ಬಿಜೆಪಿಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಬಿಜೆಪಿ ಪಕ್ಷಕ್ಕೆ ಬಲವಾಗಿ ಶ್ರಮಿಸಿದ ಕೆಲವೇ ಕೆಲವು ನಾಯಕರುಗಳಲ್ಲಿ ಈಶ್ವರಪ್ಪನವರು ಸಹ ಒಬ್ಬರು ಎಂದರೆ ತಪ್ಪಾಗಲಾರದು..

ತಮ್ಮ ತತ್ವ ಸಿದ್ಧಾಂತ ಆದರ್ಶಗಳಲ್ಲಿ ಯಾವುದೇ ರೀತಿ ರಾಜಿ ಇಲ್ಲದೆ ಅಂದಿನಿಂದ ಇಂದಿನ ತನಕ ತಮ್ಮ ವ್ಯಕ್ತಿತ್ವವನ್ನು ಮತ್ತು ತಮ್ಮ ದೃಢತ್ವವನ್ನು ಉಳಿಸಿಕೊಂಡ ರಾಜ್ಯ ಬಿಜೆಪಿಯ ಈಗಿರುವ ನಾಯಕರ ಪೈಕಿಯಲ್ಲಿ ಈಶ್ವರಪ್ಪನವರು ಅಗ್ರಗಣ್ಯರು ಎಂದರೆ ತಪ್ಪಾಗಲಾರದು ಇಂತಹ ಈಶ್ವರಪ್ಪನವರು ಯಾಕೆ ಮುಖ್ಯಮಂತ್ರಿಯಾಗಬಾರದು?

ಈ ಪ್ರಶ್ನೆ ಎಲ್ಲಾರಲ್ಲೂ ಮೂಡುವುದು ಸಹಜ!!

ಈಶ್ವರಪ್ಪನವರು ಎಂದೂ ತಮ್ಮ ಜಾತಿ ಆಧಾರದ ಮೇಲೆ ಗುರುತಿಸಿಕೊಂಡವರಲ್ಲ ಅವರು ಬಹುತೇಕ ಹಿಂದುತ್ವದ ಆಧಾರದ ಮೇಲೆ ಸಂಘದ ನೀತಿ ನಿಯಮಗಳನ್ನು ಮೈಗೂಡಿಸಿಕೊಂಡು ತಮ್ಮ ರಾಜಕೀಯವನ್ನು ಮಾಡಿದವರೇ ಆಗಿದ್ದಾರೆ ಆದರೂ ಸಹ ಪ್ರಸ್ತುತ ಜಾತಿ ಹೊರತುಪಡಿಸಿ ರಾಜಕಾರಣವಿಲ್ಲ ಎಂಬುದು ಕೇವಲ ಸೋಜಿಗವೇ ಸರಿ, ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯಗಳ ಪೈಕಿ ಎರಡನೇ ಅತಿ ಹೆಚ್ಚು ಸಮುದಾಯವೆಂದರೆ ಅದು #ಕುರುಬ ಸಮುದಾಯ ಕುರುಬ ಸಮುದಾಯದಲ್ಲಿ ಅಗ್ರಗಣ್ಯ ನಾಯಕ ಎಂದರೆ ಅದು ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿದರೆ ಮತ್ತೊಬ್ಬ ಪ್ರಭಲ ನಾಯಕ ಎಂದರೆ ಅದು ಕೆ ಎಸ್ ಈಶ್ವರಪ್ಪನವರು..
ಅವರು ಎಂದೂ ತಮ್ಮ ಜಾತಿಯನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಿಲ್ಲವಾದರೂ ಅನೇಕ ಸಂದರ್ಭಗಳಲ್ಲಿ ತಮ್ಮ ಶಕ್ತಿಯನ್ನು ತೋರಿಸಿದ್ದುಂಟು ಈ ಹಿಂದೆ ಈಶ್ವರಪ್ಪ ಮತ್ತು ಯಡಿಯೂರಪ್ಪನವರ ನಡುವೆ ಮುಸುಕಿನ ಗುದ್ದಾಟದಲ್ಲಿ ರಾಜ್ಯಾದ್ಯಂತ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಕಟ್ಟಿ ಅದರಲ್ಲಿ ತಮ್ಮ ಶಕ್ತಿ ಏನು ಎಂಬುದನ್ನ ಇಡೀ ರಾಜ್ಯ ಮತ್ತು ಕೇಂದ್ರದ ನಾಯಕರುಗಳಿಗೆ ಹಾಗೂ ಇತರೆ ಪಕ್ಷದ ನಾಯಕರುಗಳಿಗೆ ತಿಳಿಸಿದ್ದಾರೆ..
ಕೆಲವರಂತು ಈಶ್ವರಪ್ಪರ ಶಕ್ತಿಯನ್ನು ತಿಳಿದು ಮುಕ್ತ ಕಂಠದಿಂದ ಹೊಗಳಿರುವ ಉದಾಹರಣೆಗಳು ತುಂಬಾ ಇವೇ…
ಈಶ್ವರಪ್ಪನವರು ಒಂದು ವೇಳೆ ಪಕ್ಷದ ನಾಯಕರ ನಿರ್ಲಕ್ಷ್ಯಕ್ಕೆ ಒಳಗಾಗಿ ಹೊರಬಂದರೆ ಅಖಂಡ ಕುರುಬ ಸಮುದಾಯವು ಅವರ ಹಿಂದೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ..
ಪ್ರಸ್ತುತ ನಡೆಯುತಿರುವ ರಾಜ್ಯ ರಾಜಕಾರಣವನ್ನೊಮ್ಮೆ ಗಮನಿಸಿದರೆ ಬಹುತೇಕ ಕಾಂಗ್ರೇಸ್ ನಾಯಕರು ಕಾಂಗ್ರೇಸ್ ಪಕ್ಷದಲ್ಲಿ ಸಿದ್ದರಾಮಯ್ಯರ ಪ್ರಭಾವ ಕುಗ್ಗಿಸುವ ಸಲುವಾಗಿ ಅನೇಕರಿಗೆ ಪಟ್ಟಾಭಿಷೇಕವನ್ನು ನೀಡಿ ಅವರಿಂದ ರಾಜಕಾರಣವನ್ನು ಪ್ರಾರಂಭಿಸುವ ನೀಲಿ ನಕ್ಷೆಯನ್ನು ಹೊಂದಿದೆ ಆದುದರಿಂದ ಕುರುಬ ಸಮುದಾಯ ವಿಚಲಿತಗೊಂಡಿದೆ ಈ ಹಿಂದೆ ಜನತಾದಳ ಒಟ್ಟಿಗಿದ್ದ ಸಮುದಾಯ ಸಿದ್ದರಾಮಯ್ಯನವರ ಕಾರಣಕ್ಕಾಗಿ ಕಾಂಗ್ರೆಸ್ ಕಡೆಗೆ ವಲಿದಿತ್ತು ಆದರೆ ಪ್ರಸ್ತುತ ರಾಜಕಾರಣದಲ್ಲಿ ಸಿದ್ದರಾಮಯ್ಯ ನವರನ್ನು ರಾಜಕೀಯವಾಗಿ ಕುಗ್ಗೀಸಲು ಕೆಲ ಕಾಂಗ್ರೇಸ್ ನಾಯಕರೇ ಸಜ್ಜಾಗಿರುವುದು ನೋವಿನ ಸಂಗತಿಯೇ ಸರಿ…

ರಾಜ್ಯದಲ್ಲಿ ನಮ್ಮ ಸಮುದಾಯದ ಯಾವುದೇ ನಾಯಕರನ್ನು ನಿರ್ಲಕ್ಷ್ಯ ಮಾಡಿದರೂ ಅದು ನಮಗೆ ಕುರುಬ ಸಮುದಾಯವನ್ನೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದೆನಿಸುತ್ತದೆ.

ಕಾಂಗ್ರೇಸಿಗೆ ಸಿದ್ದರಾಮಯ್ಯನವರು ಹೇಗೋ ಹಾಗೇ ಬಿಜೆಪಿಯಲ್ಲಿ ನಮ್ಮ ಸಮುದಾಯದ ಪ್ರಭಲ ನಾಯಕರಾಗಿ ಎದ್ದು ಕಾಣುವುದು ಅದು ಸನ್ಮಾನ್ಯ ಕೆ ಎಸ್ ಈಶ್ವರಪ್ಪನವರು ಮಾತ್ರ. ಇತ್ತೀಚಿನ ದಿನಗಳಲ್ಲಿ ಕುರುಬ ಸಮಾಜದ ಶಾಸಕರುಗಳು ಬಿಜೆಪಿ ಸೇರಿದ್ದಾರೆ…

ಇಂದು ಬಿಜೆಪಿ ಪಕ್ಷಕ್ಕೆ ಕುರುಬ ಸಮುದಾಯದ 4 ಜನ ಶಾಸಕರು ಬಂದಿದ್ದು ಪಕ್ಷಕ್ಕೆ ಆನೆಬಲ ಬಂದಂತಾಗಿದೆ ಎಂದರೆ ತಪ್ಪಾಗಲಾರದು…
ಇಂತಹ ಸೂಕ್ತ ಸಂದರ್ಭದಲ್ಲಿ ಸನ್ಮಾನ್ಯ ಈಶ್ವರಪ್ಪನವರನ್ನು ಬಿಜೆಪಿ ಪಕ್ಷದ ಹೈಕಮಾಂಡ್ ಪರಿಗಣಿಸಿ ಅವರನ್ನು ಮುಖ್ಯಮಂತ್ರಿ ಮಾಡಿದರೆ ಈ ಸಮುದಾಯ ಬಹುತೇಕ ಬಿಜೆಪಿ ಪರ ವಾಲುವುದರಲ್ಲಿ ಯಾವುದೇ ಸಂಶಯವಿಲ್ಲ…
ಈಶ್ವರಪ್ಪ ಕೇವಲ ಕುರುಬ ಸಮುದಾಯಕ್ಕೆ ಮಾತ್ರವಲ್ಲ ಅಖಂಡ ಹಿಂದುತ್ವದ ಹಿಂದುಳಿದ ವರ್ಗಗಳ ಪ್ರತೀಕವಾಗಿ ಇದ್ದಾರೆ…
ಈಶ್ವರಪ್ಪನವರಿಗೆ ಕರ್ನಾಟಕ ರಾಜ್ಯಾದ್ಯಂತ ಇರುವ ಎಲ್ಲಾ ಹಿಂದುಳಿದ ವರ್ಗಗಳ ಸ್ವಾಮಿಗಳನ್ನು ಒಗ್ಗೂಡಿಸುವ ಶಕ್ತಿ ಇದೆ, ಈ ಹಿಂದೆ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಈಶ್ವರಪ್ಪನವರು ಯಶಸ್ವಿಯಾಗಿದ್ದಾರೆ ಎಂದು ಅನೇಕ ಸಂದರ್ಭದಲ್ಲಿ ಹಲವಾರು ಸ್ವಾಮೀಜಿಗಳು ಮುಕ್ತ ಕಂಠದಿಂದ ಹೊಗಳಿರುವುದು ನಮ್ಮೆಲ್ಲರ ತಿಳಿದಿದೆ…

ಆದ್ದರಿಂದ ರಾಜ್ಯ ಮತ್ತು ಕೇಂದ್ರದ ನಾಯಕರುಗಳು ಈ ದಿಕ್ಕಿನಲ್ಲೂ ಒಮ್ಮೆ ಯೋಚಿಸುವ ಅವಶ್ಯಕತೆ ಇದೆ…

ಈಶ್ವರಪ್ಪನವರು ಕೇವಲ ವ್ಯಕ್ತಿಯಲ್ಲ ಅವರೊಂದು ಅಸಾಧರಣವಾದ ಶಕ್ತಿ ಇಂತಹ ಶಕ್ತಿ ಈ ನಾಡಿನ ಮುಖ್ಯಮಂತ್ರಿ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು..

LEAVE A REPLY

Please enter your comment!
Please enter your name here