ಗಜಲ್

0
63

ತರ್ಕಗಳು ಕಾವಲಾಗಿ ನಿದ್ದೆ ಕೆಡಿಸುತ್ತಿವೆ ನೆಮ್ಮದಿಯ ವಿಳಾಸಕೊಡಿ
ಜಿಜ್ಞಾಸೆಗಳು ನಲಿವನು ಕಳೆಯುತ್ತಿವೆ ನೆಮ್ಮದಿಯ ವಿಳಾಸಕೊಡಿ

ಧರ್ಮಗಳ ಹೆಸರಿನಲಿ ಅಧರ್ಮದ ಆಟಾಟೋಪಗಳು ನಡೆದಿವೆ
ಅತಿಶಯ ನೀತಿ ಶಾಂತಿ ಕದಡುತ್ತಿವೆ ನೆಮ್ಮದಿಯ ವಿಳಾಸಕೊಡಿ

ಅಸಮಾನತೆಗಳ ರಣನೃತ್ಯಕೆ ಸಮತಾವಾದ ಬೆಚ್ಚಿ ನಡುಗುತ್ತಿದೆ
ಕುಲಗಳ ಬೇರು ನೆತ್ತರು ಬೇಡುತ್ತಿವೆ ನೆಮ್ಮದಿಯ ವಿಳಾಸಕೊಡಿ

ಧರ್ಮದರ್ಶಿಗಳು ದಾರಿಯಲ್ಲದ ದಾರಿಯಲಿ ಅಲೆಯುತಿರುವರು
ದೇವತಾಣಗಳು ಸುಲಿಗೆ ಮಾಡುತ್ತಿವೆ ನೆಮ್ಮದಿಯ ವಿಳಾಸಕೊಡಿ

ಅನುಭಾವದ ನಿಜಹಾದಿಯಲಿ ಸಾಗುವವರು ವಿರಳವಾಗಿಹರು
“ಚಿಜ್ಯೋತಿ “ಅಂತರಾಳ ಕಂಪಿಸುತ್ತಿದೆ ನೆಮ್ಮದಿಯ ವಿಳಾಸಕೊಡಿ.

ಜ್ಯೋತಿ ಬಿ ದೇವಣಗಾವ.

LEAVE A REPLY

Please enter your comment!
Please enter your name here