ಖಾಸಗಿ ಶಿಕ್ಷಕರನ್ನು ಸಂಕಷ್ಟಕ್ಕೆ ದೂಕಿದ ದಿನಗಳು…

0
112

ಇಂದು ಸಮಾಜ ಮತ್ತು ಸರಕಾರ ಶಿಕ್ಷಕರಿಗೆ ಬೆನ್ನೆಲುಬಾಗಿ ನಿಲ್ಲಬೇಕಾದ ಅಗತ್ಯವಿದೆ. ಅವರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕಿದೆ. ಶಿಕ್ಷಣ ಕ್ಷೇತ್ರಕ್ಕೆ ಮರುವೇಗ ನೀಡುವ ಈ ಯೋಧರಿಗೆ ಅಸೌಖ್ಯ, ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ.

ಕೋವಿಡ್‌ ಸಂಕಷ್ಟದ ಕಾಲದಲ್ಲೇ ಶಿಕ್ಷಕರ ದಿನಾಚರಣೆ ಎದುರಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಈ ರೀತಿಯ ಸವಾಲನ್ನು ಶಿಕ್ಷಣ ವಲಯ ಎಂದೂ ಎದುರಿಸಿರಲಿಲ್ಲ. ಖಾಸಗಿ ಶಾಲೆಗಳು, ಸರಕಾರಿ ಶಾಲೆಗಳು, ಕಾಲೇಜುಗಳು… ಒಟ್ಟಾರೆ ಯಾಗಿ ಶೈಕ್ಷಣಿಕ ರಂಗದ ಪ್ರತಿಯೊಂದು ಹಂತಕ್ಕೂ ಸವಾಲೊಡ್ಡಿ ಬಿಟ್ಟಿದೆ ಪುಟ್ಟ ವೈರಸ್‌
ಶ್ಲಾಘನೀಯ ಸಂಗತಿಯೆಂದರೆ, ಈ ಅತೀವ ಸವಾಲುಗಳ ನಡುವೆಯೇ ನಮ್ಮ ಶಿಕ್ಷಕರು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ, ಜತೆಗೆ ವೈಯಕ್ತಿಕ ಸಂಕಷ್ಟವನ್ನೂ ಎದುರಿಸುತ್ತಿದ್ದಾರೆ. ಹೊಸ ಸಹಜತೆಯ ಜತೆಗೆ ಹೆಜ್ಜೆಹಾಕಲೇಬೇಕಾದ ಅನಿವಾರ್ಯತೆ ಇದೆ. ಈ ಕಾರಣಕ್ಕಾಗಿಯೇ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಇಲಾಖೆ ವಿದ್ಯಾಗಮದಂಥ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದಿತ್ತು. ಇದರಡಿಯಲ್ಲಿ ಶಿಕ್ಷಕರು ಗ್ರಾಮಗಳಿಗೆ ತೆರಳಿ, ವಿದ್ಯಾರ್ಥಿಗಳಿಗೆ ಪಾಠ ಮಾಡಿಬರುತ್ತಿದ್ದರು. ಸರಕಾರವು ಚಂದನ ವಾಹಿನಿಯ ಮೂಲಕವೂ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿದೆ.

ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ಶಿಕ್ಷಕರು ಕೋವಿಡ್‌ಗೆ ತುತ್ತಾಗಿರುವುದರಿಂದ ಸಹಜವಾಗಿಯೇ ಬೋಧಕರಲ್ಲಿ ಆತಂಕವಿದೆ. ಅಗತ್ಯ ಸುರಕ್ಷಾ ಪರಿಕರಗಳ ಅಲಭ್ಯತೆಯೂ ಅವರಲ್ಲಿನ ಆತಂಕವನ್ನು ಹೆಚ್ಚಿಸುತ್ತಿದೆ
ಇನ್ನೊಂದೆಡೆ ಖಾಸಗಿ ಶಿಕ್ಷಣ ವಲಯಕ್ಕೂ ಇದು ಪರೀಕ್ಷೆಯ ಸಮಯವೇ. ಖಾಸಗಿ ಶಾಲೆಗಳಿಂದು ಆರ್ಥಿಕ ಸಂಕಷ್ಟ ಅನುಭವಿಸುತ್ತಿವೆ. ಇದರ ನೇರ ಪರಿಣಾಮ ಅಲ್ಲಿನ ಶಿಕ್ಷಕರ ಮೇಲೆ ಆಗತೊಡಗಿದೆ. ಕೆಲವು ಶಾಲೆಗಳಲ್ಲಂತೂ ತಿಂಗಳುಗಟ್ಟಲೆ ಸಂಬಳವೇ ಸಿಗದೇ, ಶಿಕ್ಷಕರು ಜೀವನಾಧಾರಕ್ಕಾಗಿ ಅನ್ಯ ಕೆಲಸಗಳತ್ತ ಮುಖ ಮಾಡುವಂತಾಗಿದೆ.

ಈ ಮಧ್ಯೆ ಈಗ ಸರಕಾರ ಕಾಲೇಜುಗಳನ್ನು ಹಾಗೂ ಪ್ರೌಢ ಶಾಲೆಗಳನ್ನು ಕೋವಿಡ್ ನಿಯಮ ಪಾಲನೆಯೊಂದಿಗೆ ಆರಂಭಿಸಿದ್ದು, ಸೆ.6ರಿಂದ ಹಿರಿಯ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ನಿರ್ಧಾರಕ್ಕೆ ಬಂದಿದ್ದು ವೃತ್ತಿ ಪರ ಖಾಸಗಿ ಶಿಕ್ಷಕರಿಗೆ ಸಮಾಧಾನದ ಸುದ್ದಿ ಎನ್ನಬಹುದು.

ವರದಿಯ:ಅವಿನಾಶ ದೇಶಪಾಂಡೆ ✍️

LEAVE A REPLY

Please enter your comment!
Please enter your name here