ಕರೋನಾ ಅಲೆ ತಡೆಯಲು ತಾಲೂಕಿನ ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಿ

0
242

ಸಂಡೂರು:ಏ:18:ಕರೋನಾ ಮಹಾಮಾರಿ 2ನೇ ಅಲೆ ತಾಲೂಕಿನಾದ್ಯಂತ ಅಪ್ಪಳಿಸುತ್ತಿದ್ದು ಪೂರ್ಣ ಪ್ರಮಾಣದಲ್ಲಿ ಕ್ರಮ ವಹಿಸುವ ಮೂಲಕ ಅದರೆ ಚೈನ್ ಲಿಂಕ್ ಕತ್ತರಿಸುವ ಮೂಲಕ ಅದನ್ನು ತಡೆಯುವ ಎಲ್ಲಾ ಪ್ರಯತ್ನವನ್ನು ಕಡ್ಡಾಯವಾಗಿ ಮಾಡಬೇಕು ಎಂದು ಶಾಸಕ ಈ.ತುಕರಾಂ ತಿಳಿಸಿದರು.
ಅವರು ಇಂದು ಪಟ್ಟಣದ ತಾಲೂಕು ಪಂಚಾಯಿತಿ ಅವರಣದಲ್ಲಿ ಕೋವಿಡ್-2ನೇ ಅಲೆಯ ನಿಯಂತ್ರಣದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಶೈಕ್ಷಣಿಕವಾಗಿ ಯಾವುದೇ ಕುಂಟಿತವಾಗದಂತೆ ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಎಲ್ಲಾ ಸೂಕ್ತ ಭದ್ರತೆ ಮತ್ತು ಕರೋನಾ ತಡೆಯ ಅಂಶಗಳನ್ನು ಬಳಸಬೇಕು, ಅಲ್ಲದೆ ಎಲ್ಲಾ ಕೊಠಡಿಗಳ ಸ್ಯಾನಿಟೈಸರ್ ಕಡ್ಡಾಯವಾಗಿ ಮಾಡಿ, ಪ್ರತಿ ಗ್ರಾಮ ಪಂಚಾಯಿತಿಯಿಂದ ಜನರಿಗೆ ಕರೋನಾ 2ನೇ ಅಲೆಯ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಬಿತ್ತಿಪತ್ರಗಳನ್ನು ಹಾಕುವ ಮೂಲಕ, ಟಾಂ ಟಾಂ ಹೊಡೆಸುವ ಮೂಲಕ ಜಾಗೃತಿ ಉಂಟುಮಾಡಬೇಕು, ಅಲ್ಲದೆ ಪ್ರತಿಯೊಬ್ಬ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಬೇಕು, ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಸಮಸ್ಯೆಗಳ ಬಗ್ಗೆ ಕೂಲಂಕುಷ ಚರ್ಚೆಮೂಲಕ ಅದಕ್ಕೆ ಬೇಕಾಗುವ ಅರ್ಥಿಕ ಅಂಶಗಳನ್ನು ಸಹ ತಿಳಿಸಬೇಕು ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ರಶ್ಮಿಯವರು ಮಾತನಾಡಿ ತಾಲೂಕಿನಾದ್ಯಂತ ಕರೋನಾ ಲಸಿಕೆ ಹಾಕಿಸಿಕೊಳ್ಳುವವರ ಪ್ರಮಾಣ ಕಡಿಮೆ ಇದೆ, ಅದರೆ ಹಾಕಿಸಿಕೊಂಡವರಿಗೆ ಕರೋನಾ ಬರುವುದು, ಹರಡುವಿಕೆ ತಡೆಯುತ್ತಿದೆ ಅದಕ್ಕೆ ಪಿ.ಡಿ.ಓಗಳು ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಶಾಕಾರ್ಯಕರ್ತೆಯರೊಂದಿಗೆ
ಮನೆ ಮನೆಗೆ ತೆರಳಿ ಪಟ್ಟಿಮಾಡಿ ಅವರಿಗೆ ಲಸಿಕೆಯ ಮಾಹಿತಿ ತಿಳಿಸಿ ಹಾಕಿಸಬೇಕು, ಅಲ್ಲದೆ ಕಡ್ಡಾಯವಾಗಿ ಕರೋನಾ ಸಂಪರ್ಕಿತರ ಚೈನ್ ಪತ್ತೆ ಹಚ್ಚುವಲ್ಲಿ ಜವಾಬ್ದಾರಿ ವಹಿಸಬೇಕು, ಈಗಾಗಲೇ ಗ್ರಾಮ ಮಟ್ಟಕ್ಕೂ ಸಹ ವ್ಯಾಪ್ತಿಸಿದ್ದು ತಾಲೂಕಿನ ವಿಠ್ಠಲಾಪುರದಲ್ಲಿ 8 ಜನರಿಗೆ ಸೋಂಕು ಪತ್ತೆಯಾಗಿದ್ದು ಗಮನಕ್ಕೆ ಬಂದಿದೆ, ಹಗಲು ರಾತ್ರಿ ಕೆಲಸ ಮಾಡಬೇಕಾಗುತ್ತದೆ, ಯಾವುದೇ ಅಧಿಕಾರಿ ನೆಪ ಇಲ್ಲದೆ ಕೆಲಸ ಮಾಡಬೇಕು, ಇಲಾಖೆಯ ಕೆಲಸದ ಜೊತೆಗೆ ಈ ಕೆಲಸ ಅನಿವಾರ್ಯ ಎಂದರು. ಅಲ್ಲದೆ ತೋರಣಗಲ್ಲಿನಲ್ಲಿ ಈಗಾಗಲೇ ಜಿಂದಾಲ್ ಕಂಪನಿಯ ಅವರಣದಲ್ಲಿ ತಗಡಿನ ಶೆಡ್ಡ ಹಾಕಿದ್ದು ಕಂಪನಿಯ ಗುತ್ತಿಗೆ ಕಾರ್ಮಿಕರಿಗೆ ಸೋಂಕು ಪತ್ತೆಯಾಗಿದೆ, 300 ಜನರಿಗೆ ವ್ಯವಸ್ಥೆ ಇದೆ, ಅದರೆ ಸಂಪರ್ಕಿತರ ಮಾಹಿತಿ ಸರಿಯಾಗಿ ನೀಡುತ್ತಿಲ್ಲ ಈ ಬಗ್ಗೆ ಜಿಂದಾಲ್ ಕಂಪನಿಯ ಅಧಿಕಾರಿಗಳು ಕ್ರಮವಹಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಎ.ಸಿ. (ಸಹಾಯಕ ಆಯುಕ್ತರು) ರಮೇಶ್ ಕೋನಾ ರಡ್ಡಿಯವರು ಕರೋನಾ ನಿಯಂತ್ರಣದ ಕ್ರಮಗಳು ಮತ್ತು ಕಾರ್ಖಾನೆಗಳ, ಶಾಲೆಯ, ಜನ ನಿಬಿಡ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಟ್ಯಾಕ್ ಮಾಡುವ ಮಾಹಿತಿ, ಮತ್ತು ಜಿಲ್ಲೆಯಾದ್ಯಂತ ಹಬ್ಬ, ಜಾತ್ರೆ, ಉತ್ಸವಗಳನ್ನು ಕಡ್ಡಾಯವಾಗಿ ರದ್ದು ಮಾಡಲಾಗಿದೆ ಯಾರಾದರೂ ಮಾಡಿದರೆ ಅವರ ಮೇಲೆ ಕ್ರಮವಹಿಸುವ ಬಗ್ಗೆಯೂ ನಿರ್ಧರಿಸಲಾಗಿದೆ, ಅಲ್ಲದೆ ಸರ್ಕಾರ ನಿಗದಿಪಡಿಸಿದ ರೀತಿಯಲ್ಲಿಯೇ ಜನ ಇರಬೇಕು ಇಲ್ಲವಾದಲ್ಲಿ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯಾನಿರ್ವಾಹಕ ಅಧಿಕಾರಿ ಕೆ.ಅರ್. ಪ್ರಕಾಶ್ ಅವರು ಮಾತನಾಡಿ ತಾಲೂಕಿನಾದ್ಯಂತ ಎಚ್ಚರಿಕೆಯಾಗಿ ಪಿ.ಡಿ.ಓಗಳು ಕಾರ್ಯ ಅರಂಭಿಸಿದ್ದಾರೆ, ಅದರೆ ಶಾಸಕರ ಪ್ರೋತ್ಸಾಹ ನಿರಂತರ ಸಂಪರ್ಕದಿಂದ ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯನಿರ್ವಹಿಸಲಾಗುವುದು, ಅಲ್ಲದೆ ಕಡ್ಡಾಯವಾಗಿ ಎಲ್ಲಾ ಅಧಿಕಾರಿಗಳು ಭಾಗಿಗಳಾಗಿ ಹಿಂದಿನ ಬಾರಿಗಿಂತಲೂ ಹೆಚ್ಚು ಶ್ರಮವಹಿಸಿ ಕಾರ್ಯನಿರ್ವಹಿಸಲಾಗುವುದು ಎಂದರು.

ಅಂತಿಮವಾಗಿ ಶಾಸಕ ಈ.ತುಕರಾಂ ಮಾತನಾಡಿ ಯಾವುದೇ ಕಾರಣಕ್ಕೂ ಕರೋನಾ ಹರಡದಂತೆ ಕ್ರಮವಹಿಸಬೇಕು, ತಾಲೂಕಿನಲ್ಲಿ ಒಟ್ಟು ಅಸ್ಪತ್ರೆಗಳಲ್ಲಿ ಇರುವ ಬೆಡ್‍ಗಳು, ವೆಂಟಿಲೇಟರ್ಸ್, ಹೆಚ್ಚಿನ ಕೋವಿಡ್ ಅಸ್ಪತ್ರೆಯಾಗಿ ಬಂಡ್ರಿ ಮುರಾರ್ಜಿ ವಸತಿಶಾಲೆಯ ಬಳಕೆ ತೋರಣಗಲ್ಲಿ ಭಾಗದಲ್ಲಿ ವಡ್ಡು ಮೆಟ್ರಿಕಿಭಾಗದಲ್ಲಿಯೂ ಸಹ ಹೆಚ್ಚಿನ ಅಸ್ಪತ್ರೆಯನ್ನು ಸ್ಥಾಪಿಸುವ ಬಗ್ಗೆ ಆರೋಗ್ಯ ಇಲಾಖೆಯ ಕ್ರಮದ ಬಗ್ಗೆ ಮಾಹಿತಿ ನೀಡಿದರು, ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸೂಚಿಸಿದರು.
ಸಭೆಯಲ್ಲಿ ಜಿಂದಾಲ್ ಕಂಪನಿಯ ಅಧಿಕಾರಿ ಮಂಜುನಾಥ ಪ್ರಭು, ಎನ್.ಎಂ.ಡಿ.ಸಿ. ಗಣಿ ಕಂಪನಿಯ ಅಧಿಕಾರಿಗಳು, ತಾಲೂಕಿನ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.ಕರೋನಾ ತಡೆಯಲು ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಿ

LEAVE A REPLY

Please enter your comment!
Please enter your name here