ಬೆಲೆ ಏರಿಕೆ ಖಂಡಿಸಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ ಕರಿಯಪ್ಪ ನೇತೃತ್ವದಲ್ಲಿ ಪ್ರತಿಭಟನೆ.

0
128

ಸಿಂಧನೂರು ನಗರದಲ್ಲಿ ಪೆಟ್ರೋಲ್, ಡಿಸೇಲ್, ಗ್ಯಾಸ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ ಕರಿಯಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ನಗರದ ಬಸವೇಶ್ವರ ವೃತ್ತದಿಂದ ಮಿನಿವಿಧಾನ ಸೌಧದ ವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಈ ಬೆಲೆ ಏರಿಕೆ ನೀತಿಗೆ ಜನಾಕ್ರೋಶ ವ್ಯಕ್ತವಾಗಿದೆ, ಇದರ ಪರಿಣಾಮವಾಗಿ ಈ ಪ್ರತಿಭಟನೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಬಡ ಮಧ್ಯಮ ವರ್ಗದ ಹಿತ ಕಾಪಾಡುವಲ್ಲಿ ವಿಫಲವಾಗುತ್ತಿದೆ ಎಂದು ಹರಿಹಾಯ್ದರು.

ಈ ಸಂದರ್ಭದಲ್ಲಿ ಮುಖಂಡರಾದ ಹೆಚ್ ಎನ್ ಬಡಿಗೇರ, ಅಬ್ದುಲ್ ಗನಿಸಾಬ್, ನಾಗವೇಣಿ ಪಾಟೀಲ್, ಎಸ್ ಎಂ ಖಾದ್ರಿ, ಹನುಮೇಶ ವಕೀಲರು, ಕರಿಯಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಶ್ರೀನಿವಾಸ ವೈ, ಗೌರವಾಧ್ಯಕ್ಷ ಹುಸೇನಪ್ಪ ಸೂಲಂಗಿ, ಉಪಾಧ್ಯಕ್ಷ ರಮೇಶ ಯಾದವ್,ದೌಲಸಾಬ್ ದೊಡ್ಮನಿ,ಮಲ್ಲಪ್ಪ ಯಾದವ್, ನಗರ ಘಟಕದ ಅಧ್ಯಕ್ಷ ರಾಜು ಅಡವಿಭಾವಿ, ಕಾರ್ಮಿಕ ಘಟಕದ ಅಧ್ಯಕ್ಷ ಆದಿ ಮೇಸ್ತ್ರಿ, ಮಸ್ಕಿ ಯುವ ಕಾಂಗ್ರೆಸ್ ಅಧ್ಯಕ್ಷ ಹನುಮೇಶ ಬಾಗೋಡಿ, ಕರವೇ ಅಧ್ಯಕ್ಷ ಗಂಗಣ್ಣ ಡಿಶ್, ಉಮೇಶ ಗೌಡ, ಹೆಚ್ ಜಗದೀಶ್ ಸೇರಿದಂತೆ ಹಲವರಿದ್ದರು.

ವರದಿ:ಅವಿನಾಶ ದೇಶಪಾಂಡೆ ✍️

LEAVE A REPLY

Please enter your comment!
Please enter your name here