ಬಂಡ್ರಿ ಸರ್ಕಾರಿ ಕೆಪಿಎಸ್-ಡಿಪಿಇಪಿ ಶಾಲೆಗಳಲ್ಲಿ 11.09.2021 ಶನಿವಾರ ನಡೆದಿದ್ದಾದರು ಏನು ಗೊತ್ತಾ..!!

0
513

ಸಂಡೂರು:ಸೆ:13:-ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಚೋರನೂರು ಹೋಬಳಿ ವ್ಯಾಪ್ತಿಯ ಬಂಡ್ರಿ ಗ್ರಾಮದಲ್ಲಿನ ಸರ್ಕಾರಿ ಶಾಲೆಗಳೆಲ್ಲಾ ಎಕಾ ಏಕಿ ಅಘೋಷಿತ ರಜೆಯನ್ನು ಮಾಡಿದ್ದರು ಏಕೆ ಎಂಬುದಕ್ಕೆ ಶಾಲೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಮುಖ್ಯಗುರುಗಳಿಂದ ಸರಿಯಾದ ಉತ್ತರ ಸಿಗುತ್ತಿಲ್ಲ ಎಲ್ಲವೂ ಹಾರಿಕೆಯ ಉತ್ತರವಾಗಿತ್ತೆ ವಿನಃ ನಿಖರವಾದ ಉತ್ತರವಿರಲಿಲ್ಲ,

ದಿನಾಂಕ 11.09.2021ರಂದು ಇಡೀ ರಾಜ್ಯದಲ್ಲೇ ಶಾಲಾ ಕಾಲೇಜ್ ಗಳು ತೆರೆದು ಶಿಕ್ಷಕರು ಮಕ್ಕಳಿಗೆ ಪಾಠಗಳನ್ನು ಬೋಧಿಸುತ್ತಿದ್ದರೆ ಬಂಡ್ರಿ ಗ್ರಾಮದ ಶಾಲೆಗಳು ಮಾತ್ರ ಬಾಗಿಲುಗಳನ್ನು ಮುಚ್ಚಿ ಬಂದ್ ಮಾಡಿದ್ದರು, ಸ್ಥಳೀಯ ಗ್ರಾಮದಲ್ಲಿ ಯಾವುದೇ ಹಬ್ಬ ಹರಿದಿನಗಳಿರಲಿಲ್ಲ, ಶನಿವಾರದ ಹಿಂದಿನ ದಿನ ಗಣೇಶಹಬ್ಬದ ಪ್ರಯುಕ್ತ ಸರ್ಕಾರ ರಜೆ ಇತ್ತು,

ಶನಿವಾರದಂದು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರದೆ ಏಕಪಕ್ಷೀಯ ನಿರ್ದಾರವನ್ನು ತೆಗೆದುಕೊಂಡು ಸರ್ವಾಧಿಕಾರಿಯಂತೆ ಘೋಷಣೆ ಮಾಡಿಕೊಂಡಿರುವುದು ನಿಯಮಬಾಯಿರವಾಗಿದೇ ಇದನ್ನು ಡಿಡಿಪಿಐ ಸಿ.ರಾಮಪ್ಪ ಹಾಗೂ ಬಿಇಒ ಡಾ.ಐ.ಆರ್.ಅಕ್ಕಿ ಅವರುಗಳಿಗೆ ದೂರವಾಣಿ ಮುಖಾಂತರ ತಿಳಿಸಿದಾಗ ಇದು ನಮ್ಮ ಗಮನಕ್ಕೆ ಬಂದಿಲ್ಲ ಹಾಗಾಗಿ ಸಂಬಂಧಪಟ್ಟ ಶಾಲೆಯ ಮುಖ್ಯಸ್ಥರೊಡನೆ ಮಾತನಾಡುತ್ತೇನೆ ಎಂದು ಹೇಳಿದರೆ ಹೊರತು ಯಾಕೆ ಈಗೆ ಮಾಡಿದರು, ಶಾಲೆಗಳು ಶನಿವಾರದಂದು ತೆರೆಯದಿಯುವುದಕ್ಕೆ ಕಾರಣವೇನು..? ಸಂಬಂದಪಟ್ಟವರ ಮೇಲೆ ಯಾವ ಕ್ರಮವನ್ನು ಕೈಗೊಳ್ಳದೇ ಸುಮ್ಮನಿರುವುದಾದರು ಏಕೆ..? ಎಲ್ಲವೂ ನಿಗೂಢವಾಗಿದೆ.

ಯಾವುದೇ ಸರ್ಕಾರಿ ಶಾಲೆಗಳಲ್ಲಿ ಸ್ಥಳೀಯ ರಜೆಯನ್ನು ಘೋಷಣೆಮಾಡಬೇಕಾದರೆ ಎಸ್ಡಿಎಂಸಿ ಹಾಗೂ ಶಿಕ್ಷಕರೊಡನೆ ಒಂದು ಸಭೆಯನ್ನು ನಡೆಸಿ ಅದರ ಅನುಮೋದನೆಗಾಗಿ ಸಭೆಯ ನದಾವಳಿಗಳನ್ನು ಬಿಇಒ ಅವರ ಹತ್ತಿರ ಮನವಿಯನ್ನು ಕೊಟ್ಟು ರಜೆ ಘೋಷಣೆಗೆ ಅನುಮತಿಯನ್ನು ಅನುಮತಿಯನ್ನು ಪಡೆಯಬೇಕೆಂಬುದು ನಮಗೂ ಹಾಗೂ ನಿಮಗೂ ಗೊತ್ತಿರುವ ಪ್ರಾಥಮಿಕ ತಿಳುವಳಿಕೆಯ ವಿಷಯ,

ಇಂತಹ ಒಂದು ಪ್ರಾಥಮಿಕ ತಿಳುವಳಿಕೆ ಗೊತ್ತಿಲ್ಲದಿದ್ದರೆ ಅವರುಗಳು ಇನ್ನು ಹೇಗೆ ಮುಖ್ಯಗುರುಗಳ ಹುದ್ದೆಯನ್ನು ನಿಭಾಯಿಸಬಲ್ಲರು ಹಾಗೂ ಮಕ್ಕಳಿಗೆ ಇನ್ಯಾವ ರೀತಿಯಾದ ಜ್ಞಾನರ್ಜನೆಗಾಗಿ ಪಾಠಗಳನ್ನು ಹೇಳುತ್ತಿರಬವುದೆಂದು ನಾವು ನೀವು ಊಹಿಸಿಕೊಳ್ಳಬೇಕಾಗುತ್ತದೆ.

ಕೊರೊನಾದಿಂದ ಮಕ್ಕಳು ಆಗಲೇ ಒಂದುವರೇ ವರ್ಷದ ದಿನಗಳನ್ನು ಕಳೆದುಬಿಟ್ಟಿದ್ದಾರೆ, ಈಗ ತಾನೇ ಶಾಲೆಗಳು ಆರಂಭವಾಗಿ ಮಕ್ಕಳು ಉತ್ಸುಕರಾಗಿ ಶಾಲೆಗಳ ಕಡೆಗೆ ಬರಲಾರಂಭಿಸಿದ್ದಾರೆ ಇಂತಹ ದಿನಗಳಲ್ಲಿ ಶಾಲೆಗಳು ಅದರ ಮುಖ್ಯಸ್ಥರು ಈಗೇ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದು ಸರೀನಾ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ ಡಿಡಿಪಿಐ ಹಾಗೂ ಬಿಇಒ ಅವರುಗಳು ಮಕ್ಕಳ ಹಿತದೃಷ್ಟಿಯಿಂದ ಹಾಗೂ ಇಲಾಖೆಯ ಮರ್ಯಾದೆಯ ಮಾನದ ಪ್ರಶ್ನೆಯಾಗಿದ್ದು ಯೋಚಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾಗಿದೆ ಅಲ್ಲಿಯವರೆಗೂ ಕಾಯ್ದು ನೋಡೋಣ..

LEAVE A REPLY

Please enter your comment!
Please enter your name here