ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಗಳು, ಅಪಘಾತ ಸಾಧ್ಯತೆ

0
191

ಸಿಂಧನೂರು ತಾಲೂಕಿನ ಶ್ರೀಪುರಂ_ಜಂಕ್ಷನ್ ಬಳ್ಳಾರಿ ಮುಖ್ಯ ರಸ್ತೆಯ ಮಾರ್ಗದ NH-150A ರಾಷ್ಟ್ರೀಯ ಹೆದ್ದಾರಿ ರಸ್ತೆಯು ಮಲ್ಕಾಪುರ ಕ್ಯಾಂಪ್ ನ ಮಧ್ಯದ ಕೆನಾಲ್ ಮೇಲೆ ರಸ್ತೆ ತುಂಬಾ ಹದಗೆಟ್ಟಿದ್ದು, ಸಿಮೆಂಟ್ ರಸ್ತೆಯ ಕಬ್ಬಿಣ ರಾಡುಗಳು ರಸ್ತೆಯ ಮೇಲೆ ಹುಬ್ಬಿದ್ದರಿಂದ ಬಹಳ ಅಪಘಾತಗಳು ಸಂಭವಿಸುತ್ತಿವೆ.

ಈ ಮುಖ್ಯ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದನ್ನು ಸರಿಪಡಿಸಲು ವಿಳಂಬ ತೋರುತ್ತಿರುವ ಹಿನ್ನಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ರಸ್ತೆಯಲ್ಲಿ ಸಂಚರಿಸುವ ಲಘು ವಾಹನಗಳು ರಸ್ತೆಯ ಪಕ್ಕದಲ್ಲಿ ಓಡಾಡುತ್ತಿವೆ ಇದರಿಂದ ಕ್ಯಾಂಪಿನ ಗ್ರಾಮಸ್ಥರಿಗೆ ರಸ್ತೆಯ ಪಕ್ಕದಲ್ಲಿ ಓಡಾಡಲು ತುಂಬಾ ತೊಂದರೆಯಾಗುತ್ತಿದೆ.

ವರದಿ:ಅವಿನಾಶ ದೇಶಪಾಂಡೆ ಸಿಂಧನೂರು✍️

LEAVE A REPLY

Please enter your comment!
Please enter your name here