ಉತ್ತಮ ಆರೋಗ್ಯಕ್ಕೆ ಪೌಷ್ಟಿಕ ಆಹಾರವೇ ಸೇವನೆಯೇ ಮೂಲ ಮಂತ್ರ: ಸಿಡಿಪಿಓ ಪ್ರೇಮಮೂರ್ತಿ.

0
267

ಸಂಡೂರು:ಸೆ:23:- ಸಂಡೂರು ತಾಲೂಕಿನ ಹೊಸದರೋಜಿ ಗ್ರಾಮದ ಕೋಡಿ ವೀರಭದ್ರೇಶ್ವರ ದೇವಾಲಯದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ರಾಷ್ಟ್ರೀಯ ಪೌಷ್ಟಿಕ ಮಾಸಾಚರಣೆ-2021 ಹಾಗೂ ಮಾತೃ ವಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರೇಮಮೂರ್ತಿ ಅವರು ನಾಲ್ಕು ವಾರಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮೊದಲವಾರ ಎದೆಹಾಲೀನ ಮಹತ್ವ, ಮಕ್ಕಳ ಪೂರಕ ಆಹಾರ ಕುರಿತು ತಾಯಂದಿರಿಗೆ ಅರಿವು ಮೂಡಿಸುವುದು, ಎರಡನೆ ವಾರ ಗರ್ಭಣಿಯರ ಮತ್ತು ಕಿಶೋರಿಯರ ಆರೋಗ್ಯ ವೃದ್ದಿ‌ಗೆ ಪೌಷ್ಟಿಕ ಆಹಾರ, ಮಕ್ಕಳ ಚುಚ್ಚು ಮದ್ದು‌ ಬಗ್ಗೆ ಅರಿವು ಮುಡಿಸುವುದು, ಮೂರನೆ ವಾರ ಮಕ್ಕಳ ಅತಿಸಾರ ಬೇದಿ ನಿಯಂತ್ರಣ, ಶುದ್ದ ಕುಡಿಯುವ ನೀರಿನ ಕುರಿತು ಅರಿವು ಮೂಡಿಸುವುದು, ನಾಲ್ಕನೇ ವಾರ ಸಮುದಾಯ ಆಧಾರಿತ ಚಟುವಟಿಕೆಗಳನ್ನು ಆಯೋಜಿಸುವುದು, ಶಿಬಿರಗಳ ಮೂಲಕ ಪೌಷ್ಟಿಕ ಆಹಾರ ಬಗ್ಗೆ ಪ್ರಾತ್ಯಕ್ಷಿಕೆ ಮಾಡಿಸುವುದು, ಶಿಶುಗಳಿಗೆ ಅನ್ನಪ್ರಾಶನ ಮಾಡಿಸುವುದು, ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯ ಮಾಡುವುದು, ಜಾಗೃತಿ ಜಾಥ ಮಾಡುವುದನ್ನು ಹಮ್ಮಿಕೊಂಡು ಜನರಿಗೆ ಪೌಷ್ಟಿಕ ಆಹಾರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು,

ಮೇಲ್ವಿಚಾರಕಿ ಶ್ರೀಮತಿ ಚೇತನ ಮಾತೃ ವಂದನಾ ಕಾರ್ಯಕ್ರಮದ ಸೌಲಭ್ಯ ಪಡೆಯುವ ಬಗ್ಗೆ ಮಾಹಿತಿ ನೀಡಿದರು, ಡಾ.ಫಣಿಂದರ್ ಋತ ಬುಕ್-ಹಿತಬುಕ್ ಕುರಿತು ಋತುಗಳಿಗೆ ಅನುಗುವಾಗಿ ಆಹಾರ ಮತ್ತು ಹಣ್ಣು ಸೇವನೆ ಮಾಡಿ,ದ್ಯಾನ , ಪ್ರಾಣಾಯಾಮ ಮಾಡಿ ಎಂದು ತಿಳಿಸಿದರು,

ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಎರಡು ವರ್ಷದೊಳಗಿನ ಅಪೌಷ್ಟಿಕ ಮಕ್ಕಳ ಆರೋಗ್ಯ ವೃದ್ಧಿಗೆ ಸರಳ ಆಹಾರ ವಿಧಾನಗಳ ಬಗ್ಗೆ ವಿವರನ್ನು ನೀಡಿದರು ನಂತರ ಗ್ರಾಮ ಪಂಚಾಯತ್ ಅಧ್ಯಕ್ಷರಿಂದ “ಕಡಿಮೆ ಖರ್ಚಿನ ಹೆಚ್ಚು ಪೌಷ್ಟಿಕ ಪಾಕಗಳು” ಕುರಿತು ಕರ ಪತ್ರಗಳನ್ನು ಬಿಡುಗಡೆ ಗೊಳಿಸಿದರು,ನಂತರ ಮೇಲ್ವಿಚಾರಕಿ ಶ್ರೀಮತಿ ಗೀತಾ ಅವರು ಮಾತನಾಡಿ ಬಾಲ್ಯ ವಿವಾಹ ತಡೆ, ಮತ್ತು ಹೆಣ್ಣು ಮಕ್ಕಳ ಮಾರಾಟ ಜಾಲ ಕುರಿತು ಎಚ್ಚರವಿರುವ ಕಾವಲು ಪಡೆ ಬಗ್ಗೆ ಮಾತನಾಡಿದರು, ನಂತರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎಮ್ಮೆ ಗಂಗಣ್ಣ ಅವರು ಮಾತನಾಡಿ ಗ್ರಾಮ ಪಂಚಾಯತಿ ವತಿಯಿಂದ ಪ್ರತಿಗಳನ್ನು ಮುದ್ರಿಸಿ ತಾಯಂದಿಗೆ ಹಂಚುವ ಭರವಸೆ ನೀಡಿದರು,ನಂತರ ಮಕ್ಕಳಿಗೆ ಅನ್ನಪ್ರಾಶನ, ಗರ್ಭಿಣಿಯರಿಗೆ ಸೀಮಂತ ಕಾರ್ಯವನ್ನು ಗಣ್ಯರು ನಡೆಸಿ ಕೊಟ್ಟರು,

ಈ ಕಾರ್ಯಕ್ರಮದಲ್ಲಿ ದರೋಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಎಮ್ಮೆ ಗಂಗಣ್ಣ, ಸಿ.ಡಿ.ಪಿ.ಒ ಪ್ರೇಮಮೂರ್ತಿ, ಡಾ.ಫಣಿಂದರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಪೋಷಣ್ ಸಂಯೊಜಕ ಗಂಗಾಧರ್,ಗ್ರಾಮ ಸದಸ್ಯರಾದ ಮಾಯಣ್ಣ,ಕಿರಣ್, ಆಂಜಿನೇಯ, ವೀರಭದ್ರಪ್ಪ, ತಿಮ್ಮಣ್ಣ, ರುದ್ರಪ್ಪ,ನಾಗವೇಣಿ,ಅಂಜಿನಮ್ಮ, ಸರೊಜಮ್ಮ,ಕಾವೇರಿ, ಮುಖಂಡರಾದ ಹಳ್ಳದಪ್ಪ, ವನ್ನೂರಸ್ವಾಮಿ, ಹಂಪಣ್ಣ, ಕಾಳಪ್ಪ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕಿಯರು,ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here