ಆಯುಷ್ಮಾನ್ ಭವ ಆಂದೋಲನ ಚಟುವಟಿಕೆಗಳ ಕ್ರಿಯಾ ಯೋಜನೆ ಸಿದ್ದ; ಡಾ.ಗೋಪಾಲ್ ರಾವ್,

0
319

ಸಂಡೂರು: ಸೆ: 13: ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಸಭಾಗಂಣದಲ್ಲಿ ಆಯೋಜಿಸಲಾಗಿದ್ದ ” ಆಯುಷ್ಮಾನ್ ಭವ ಆಂದೋಲನ ” ಕ್ಕೆ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರಿಂದ ವರ್ಚುವಲ್ ಚಾಲನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು,

ಸರಿಯಾಗಿ ಮಧ್ಯಾಹ್ನ 12 ಗಂಟೆಗೆ ” ಆಯುಷ್ಮಾನ್ ಭವ ಆಂದೋಲನ “ಕ್ಕೆ ಅವರು ಚಾಲನೆ ನೀಡಿ ಪ್ರಧಾನಮಂತ್ರಿ ಅವರ ಜನ್ಮ ದಿನ ಮತ್ತು ಮಹಾತ್ಮ ಗಾಂಧೀಜಿಯವರ ಜಯಂತಿ ಆಚರಣೆ ಸಂದರ್ಭದಲ್ಲಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರ ವರೆಗೆ ಆಂದೋಲನ ನಡೆಯಲಿದ್ದು, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ಮುಖ್ಯ ಉದ್ದೇಶವನ್ನಿಟ್ಟು ಕೊಂಡು ಸಾರ್ವಜನಿಕರಿಗೆ ಆಯುಷ್ಮಾನ್ ಹೆಲ್ತ್ ಕಾರ್ಡ್ ವಿತರಣೆ, ಪ್ರತಿ ಸಮುದಾಯ ಆರೋಗ್ಯ ಕೇಂದ್ರ ಮತ್ತು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಪ್ರತಿ ಮಂಗಳವಾರ ಡಿಸೆಂಬರ್ ವರೆಗೆ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸುವುದು, ಕ್ಷಯರೋಗ, ಕುಷ್ಠರೋಗ ದಂತಹ ಸಾಂಕ್ರಾಮಿಕ ರೋಗಗಳು ಹಾಗೂ ಕ್ಯಾನ್ಸರ್, ಬಿ.ಪಿ,ಶುಗರ್, ಹೃದಯ ಸಂಬಂಧಿ ಕಾಯಿಲೆ, ಪಾರ್ಶ್ವವಾಯು ದಂತಹ ಅಸಾಂಕ್ರಾಮಿಕ ರೋಗಗಳ ಪತ್ತೆ ಮತ್ತು ಚಿಕಿತ್ಸೆ ನೀಡುವುದು, ಮತ್ತು ಆರೋಗ್ಯ ರಕ್ಷಣೆಯ ಕಾರ್ಯಕ್ರಮಗಳ ಕುರಿತು ವಾರ್ಡ್ ಮತ್ತು ಗ್ರಾಮಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಹಾಗೂ ರಕ್ತದಾನ ಶಿಬಿರ ಆಯೋಜಿಸುವುದು, ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳುವ ಉದ್ದೇಶಗಳ ಬಗ್ಗೆ ಮಾನ್ಯರು ತಿಳಿಸಿದರು,

ಚಾಲನಾ ಕಾರ್ಯಕ್ರಮದ ನಂತರ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ. ಗೋಪಾಲ್ ರಾವ್ ಅವರು ಮಾತನಾಡಿ ಮಾನ್ಯರು ತಿಳಿಸಿದ ಹಾಗೆ ಈ ಎಲ್ಲಾ ಉದ್ದೇಶಗಳು ಉತ್ತಮವಾಗಿವೆ, ಅದಕ್ಕಾಗಿ ಉತ್ತಮ ಕ್ರಿಯಾ ಯೋಜನೆಯನ್ನು ಸಿದ್ದ ಪಡಿಸಿಕೊಂಡು ಸೆಪ್ಟೆಂಬರ್ 17 ರಿಂದ ಚಟುವಟಿಕೆಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಪ್ರಸೂತಿ ತಜ್ಞರಾದ ಡಾ.ರಜಿಯಾ ಬೇಗಂ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಸೂಪರಿಂಟೆಂಡೆಂಟ್ ಹರ್ಷ,ಸಮಾಲೋಚಕ ಪ್ರಶಾಂತ್ ಕುಮಾರ್, ಶ್ರೀರಾಮುಲು,ಗೀತಾ, ಮಾಲಾಶ್ರೀ,ಮಂಜುನಾಥ್,ಬಾಸ್ಕರ್, ಗುರುಬಸಮ್ಮ,ಮಾಬುಸಾಬ್ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here