ಪುರಸಭೆ ತಾಯಿ ಇದ್ದಂತೆ ಅದರ ಅಭಿವೃದ್ದಿ ನಮ್ಮ ಕರ್ತವ್ಯ;ಬಿಕೆಜಿ ಕಂಪನಿಯ ಮಾಲಿಕ ಬಿ.ನಾಗನಗೌಡ ಅಭಿಪ್ರಾಯ

0
142

ಸಂಡೂರು : ಸೆ: 25: ಪುರಸಭೆ ನಮ್ಮ ಪಟ್ಟಣದ ತಾಯಿ ಇದ್ದಂತೆ ಅದರ ಪ್ರಗತಿಯನ್ನು ಸಾಧಿಸಲು ಬಿಕೆಜಿ ಕಂಪನಿ ಸದಾ ಸಿದ್ದವಾಗಿದೆ, ಈಗಾಗಲೇ ಅಧ್ಯಕ್ಷೆ ಅನಿತಾ ವಸಂತಕುಮಾರ್ ಅವರ ಮನವಿಯಂತೆ ಪಟ್ಟಣದಲ್ಲಿ ಶೌಚಾಲಯ ರಿಪೇರಿ ಮತ್ತು ನಿರ್ಮಿಸಲು ಯಾವಾಗಲು ಸಿದ್ದವಾಗಿದ್ದೇವೆ ಎಂದು ಬಿಕೆಜಿ ಕಂಪನಿಯ ಮಾಲೀಕರಾದ ಬಿ.ನಾಗನಗೌಡ ತಿಳಿಸಿದರು.

ಅವರು ಪಟ್ಟಣದ ಪುರಸಭೆಯ ಅವರಣದಲ್ಲಿ ಬಿಕೆಜಿ ಕಂಪನಿಯು ಬಿ.ಕೆ. ಬಸವರಾಜ ಅವರ ಹುಟ್ಟು ಹಬ್ಬದ ಅಂಗವಾಗಿ 7 ಲಕ್ಷ ಮೌಲ್ಯದ ಬೀದಿ ದೀಪಗಳನ್ನು ಪುರಸಭೆಗೆ ಹಸ್ತಾಂತರಿಸಿ ಮಾತನಾಡಿ ಪಟ್ಟಣದ ಪ್ರಗತಿ ಮತ್ತು ಅಭಿವೃದ್ದಿ, ಸೌಂದರ್ಯ ವೃದ್ದಿಗೆ ಬಿಕೆಜಿ ಸಂಸ್ಥೆ ಸದಾ ಕಾರ್ಯನಿರ್ವಹಿಸುತ್ತಿದೆ, ಈಗಾಗಲೇ ತಾಲೂಕಿನಾದ್ಯಂತ ಎಲ್ಲಾ ರಸ್ತೆಗಳಲ್ಲಿ ಸಸಿಗಳನ್ನು ನೆಟ್ಟು ಅವುಗಳಿಗೆ ಟ್ರೀಗಾರ್ಡ ನೀಡಲಾಗಿದೆ,ಎಲ್ಲಾ ಸರ್ಕಾರಿ ಕಛೇರಿಗಳಿಗೆ ಡಸ್ಟ್ ಬಿನ್ ನೀಡುವ ಮೂಲಕ ಸ್ವಚ್ಚತೆಗೆ ಅದ್ಯತೆ ನೀಡಲಾಗಿದೆ, ಕರೋನಾ ಸಂದರ್ಭದಲ್ಲಿ ಇಡೀ ಕಂಪನಿ ಸಿಬ್ಬಂದಿ ಸದಾ ಕಾರ್ಯಪ್ರವೃತ್ತರಾಗಿ ರೋಗ ಓಡಿಸಲು ಕಾರಣೀಭೂತರಾಗಿದ್ದಾರೆ, ಅಲ್ಲದೆ ಸರ್ಕಾರಿ ಅಸ್ಪತ್ರೆಗೆ ವಿಶೇಷ ರಕ್ತ ಪರೀಕ್ಷೆ ಮಾಡಲು ಯಂತ್ರಗಳ ನೀಡಿಕೆ, ರೋಗಿಗಳು ಸುಸ್ಥಿತಿಯಲ್ಲಿ ಕುಳಿತುಕೊಳ್ಳಲು ಅಸನಗಳ ವ್ಯವಸ್ಥೆಮಾಡಿದೆ, ಒಂದಲ್ಲ ಒಂದು ರೀತಿಯಲ್ಲಿ ಬಿಕೆಜಿ ಸಂಸ್ಥೆ ಸಾರ್ವಜನಿಕ ಸೇವೆಯನ್ನು ಮಾಡಿ ಸಂಡೂರಿನ ಪ್ರಗತಿಯನ್ನು ಸಾಧಿಸುವುದು ನಮ್ಮ ಅದ್ಯ ಕರ್ತವ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಅಧ್ಯಕ್ಷೆ ಅನಿತಾ ವಸಂತಕುಮಾರ್ ಅವರು ಮಾತನಾಡಿ ಸಂಡೂರು ಪಟ್ಟಣದಲ್ಲಿ ಶೌಚ್ಚಾಲಯಗಳ ಸಮಸ್ಯೆ ಇದೆ, ಪಾರ್ಕ್ ಗಳ ನಿರ್ವಹಣೆ ಸಮಸ್ಯೆಯಾಗಿದ್ದು ಅದಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು, ಅದಕ್ಕೆ ಕಂಪನಿಯವರು ತಕ್ಷಣ ಒಪ್ಪಿಗೆ ಸೂಚಿಸಿದರು, ಪುರಸಭೆಯ ವತಿಯಿಂದ ಬೀದಿ ದೀಪಗಳನ್ನು ಖರೀದಿಸುವುದು ಸಮಸ್ಯೆಯಾಗಿತ್ತು ಅದನ್ನು ಕಂಡ ಕಂಪನಿ ತಕ್ಷಣ 200 ಬೀದಿ ದೀಪಗಳನ್ನು ನೀಡುವ ಮೂಲಕ ಜ್ವಲಂತ ಸಮಸ್ಯೆ ಬಗೆಹರಿಸಲು ಸಹಕಾರಿಯಾಗಿದೆ, ಇದೇ ರೀತಿ ಸಹಕಾರ ಸದಾ ಇರಲಿ ಎಂದು ಧನ್ಯವಾದಗಳನ್ನು ತಿಳಿಸಿದರು.

ಮುಖ್ಯಾಧಿಕಾರಿ ಇಮಾಮ್ ಸಾಹೇಬ್ ಮಾತನಾಡಿ ಪುರಸಭೆ ಎಂದಾಕ್ಷಣ ಎಲ್ಲರೂ ದೂರುಗಳನ್ನು ನೀಡುವವರೆ, ಅದರೆ ಬಿಕೆಜಿ ಸಂಸ್ಥೆಯವರು ದೂರನ್ನು ನೀಡದೇ ಪುರಸಭೆಯ ಕಾರ್ಯಕ್ಕೆ ಕೈಜೋಡಿಸುವಂತಹ ಮಹತ್ತರ ಕಾರ್ಯವನ್ನು ಮಾಡಿದ್ದಾರೆ, ಅಲ್ಲದೆ ಕರೋನಾ ಸಂದರ್ಭದಲ್ಲಿಯೂ ಸಹ ಸದಾ ನಮ್ಮೊಂದಿಗೆ ಇದ್ದು ಸಹಕರಿಸಿದ್ದಾರೆ, ಕಾರಣ ಜನತೆಯ ಸಮಸ್ಯೆ ನಮ್ಮ ಸಮಸ್ಯೆ ಎಂದು ಭಾವಿಸಿದ ಕಂಪನಿ ಬಿಕೆಜಿ ಕಂಪನಿಯ ನಾಗನಗೌಡರದಾಗಿದೆ, ಕಾರಣ ಅವರು ಮಾಜಿ ಸದಸ್ಯರಾಗಿ ಕೆಲಸ ಮಾಡಿ ಇಲ್ಲಿಯ ಸಮಸ್ಯೆ ಅರಿತ ಕಾರಣ ಸದಾ ಒಡನಾಡಿಗಳಾಗಿದ್ದಾರೆ ಇದೇ ರೀತಿ ಮುಂದುವರಿಯಲಿ ಎಂದರು.

ಸಮಾರಂಭದಲ್ಲಿ ಬಿಕೆಜಿ ಸಂಸ್ಥೆಯ ವ್ಯವಸ್ಥಾಪಕ ಶ್ರೀನಿವಾಸರಾವ್, ಉಪಾಧ್ಯಕ್ಷ ಈರೇಶ್ ಶಿಂದೇ, ಪ್ರಭುರಾಜ್ ಹಗರಿ ಮಾತನಾಡಿದರು. ಸಮಾರಂಭದಲ್ಲಿ ಪುರಸಭೆಯ ಎಲ್ಲಾ ಸದಸ್ಯರು, ಬಿಕೆಜಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪ್ರಭುರಾಜ್ ಹಗರಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಅಧಿಕಾರಿಗಳಾದ ಮಲ್ಲೇಶಪ್ಪ, ಶಿವರಂಜಿನಿ, ಖಾಜಾಸಾಹೇಬ್, ಅರುಣ್ ಪಾಟೀಲ್ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here