ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಡೂರು ತಾಲೂಕು ಅಂಗನವಾಡಿ ನೌಕರರ ಪ್ರತಿಭಟನೆ..!!

0
235

ಸಂಡೂರು:ಸೆ:25:-ಸಂಡೂರು ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಬೇಡಿಕೆಗಳ ಹಾಗೂ ಸಮಸ್ಯೆಗಳ ಕುರಿತಂತೆ ದಿನಾಂಕ 24.09.2021 ರಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಎಐಟಿಯುಸಿ ತಾಲೂಕು ಘಟಕದಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು,

ಪಟ್ಟಣದ ಮುಖ್ಯ ರಸ್ತೆಗಳ ಮುಖಾಂತರ ಎಲ್ಲರೂ ಪ್ರತಿಭಟನೆಯ ಘೋಷಣೆಗಳನ್ನು ಕೂಗುತ್ತ ತಾಲೂಕು ಕಚೇರಿಗೆ ಬಂದು ತಹಶೀಲ್ದಾರ್ ಗೆ ಮನವಿಯನ್ನು ಸಲ್ಲಿಸಿದರು,

ಮನವಿಪತ್ರದಲ್ಲಿನ ಬೇಡಿಕೆಗಳು:-
1)ಅಂಗನವಾಡಿ ಕೇಂದ್ರದ ಫಲಾನುಭವಿಗಳ ಮೂರರಿಂದ ಆರು ವರ್ಷದ ಮಕ್ಕಳಿಗೆ ಹಾಗೂ ಗರ್ಭಿಣಿ, ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುವ ಕೋಳಿ ಮೊಟ್ಟೆಯನ್ನು ಅಂಗನವಾಡಿ ಫಲಾನುಭವಿಗಳಿಗೆ ಪ್ರತಿ ಮೊಟ್ಟೆ ರೂ.5/- ರಂತೆ ಪ್ರಸ್ತುತ ಮೊಟ್ಟೆಯನ್ನು ಅಂಗನವಾಡಿ ಕಾರ್ಯಕರ್ತೆಯರು ಸ್ಥಳೀಯವಾಗಿ ಖರೀದಿಸಲು ಅನುಕೂಲವಾಗುವಂತೆ ಬಾಲವಿಕಾಸ ಸಲಹಾ ಸಮಿತಿ ಖಾತೆಗೆ ಹಣವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಜಮಾ ಮಾಡುತ್ತಿದ್ದರು ಈಗ ಅದನ್ನು ಸರ್ಕಾರ ಟೆಂಡರ್ ಕರೆದು ಖರೀದಿಸಲು ಮುಂದಾಗಿದೆ ಆದ್ದರಿಂದ ಅದನ್ನು ಕೂಡಲೇ ಕೈಬಿಡಬೇಕು ಈಗ ಅಂಗನವಾಡಿ ಕಾರ್ಯಕರ್ತರು ಸ್ಥಳೀಯವಾಗಿ ಖರೀದಿಸುವುದನ್ನು ಮುಂದುವರೆಸಬೇಕು

2) ಫಲಾನುಭವಿಗಳಿಗೆ ಮೊಟ್ಟೆ ವಿತರಿಸುತ್ತಿದ್ದು ಕೇವಲ ರೂ.5/-ಒಂದು ಮೊಟ್ಟೆಗೆ ಕೊಡುತ್ತಿದ್ದು. ಮಾರ್ಕೆಟ್ ನಲ್ಲಿ ರೂ.6.50/-ರಿಂದ ರೂಪಾಯಿ 7/-ವರೆಗೂ ಧರ ಹೆಚ್ಚಳವಾಗಿದೆ.ಎಷ್ಟೇ ಮನವಿ ಮಾಡಿದರು ಹೆಚ್ಚುವರಿ ಮೊತ್ತವನ್ನು ನೀಡಿರುವುದಿಲ್ಲ ಹೆಚ್ಚುವರಿ ಮೊತ್ತ ದ ಧರವನ್ನು ಯಾವುದೇ ಗ್ರಾಮ ಪಂಚಾಯತಿಗಳಿಂದ ಪಡೆದಿರುವುದಿಲ್ಲ.

3) ಅಂಗನವಾಡಿ ಕೇಂದ್ರಗಳಲ್ಲಿ ಸರಬರಾಜು ಮಾಡುವ ಆಹಾರ ಧಾನ್ಯಗಳ ವಿಮರ್ಶೆಯನ್ನು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ನಿರ್ಧರಿಸುತ್ತದೆ ಅದೇ ರೀತಿ ಮೊಟ್ಟೆಯ ದರವನ್ನು ಮೂರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯು ನಿರ್ಧರಿಸಿದ್ದಾರೆ ಕಾರ್ಯಕರ್ತರು ಫಲಾನುಭವಿಗಳ ಸಂಖ್ಯೆಗನುಗುಣವಾಗಿ ಸ್ಥಳೀಯವಾಗಿ ಖರೀದಿಸಲು ಅನುಕೂಲವಾಗುತ್ತದೆ ಬಾಲವಿಕಾಸ ಸಮಿತಿಗೆ ಹಣವನ್ನು ಮುಂಗಡವಾಗಿ ಜಮಾ ಮಾಡಬೇಕು

4) ಸ್ಥಾನಪಲ್ಲಟನ ಪ್ರಸ್ತಾವನೆಯನ್ನು ಜಿಲ್ಲಾ ಕಚೇರಿಯಲ್ಲಿ ಇತ್ಯರ್ಥಗೊಳಿಸಬೇಕು ಕಾರಣ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸ್ಥಳೀಯರಾಗಿರುತ್ತಾರೆ ಅವರ ಅವಶ್ಯಕತೆಗೆ ಅನುಗುಣವಾಗಿ ಸ್ಥಾನಪಲ್ಲಟನ ಆದೇಶವನ್ನು ಪರಿಗಣಿಸಿ ಜಿಲ್ಲಾ ವ್ಯಾಪ್ತಿಯೊಳಗೆ ಬರುವ ಕುರಿತು ಜಿಲ್ಲಾ ವ್ಯಾಪ್ತಿಯಲ್ಲಿ ಕ್ರಮವಹಿಸಬೇಕೆಂದು ಸ್ಥಾನಪಲ್ಲಟನೆ ಮಾಡಲು ಸಂಘದ ವತಿಯಿಂದ ಕೋರಲಾಗಿದೆ.

5) ಫಲಾನುಭವಿಗಳಿಗೆ ಅನುಗುಣವಾಗಿ ಕಚೇರಿಯಿಂದ ಬಾಲವಿಕಾಸ ಸಲಹಾ ಸಮಿತಿ ಖಾತೆಗೆ ಜಮಾ ಮಾಡಬೇಕು.

6) ಶಿಶುಪಾಲನ ಕೇಂದ್ರಗಳನ್ನು ಅಂಗನವಾಡಿ ಕೇಂದ್ರದಲ್ಲಿ ನಡೆಸಲು ಸರ್ಕಾರ ಕೂಡಲೇ ರದ್ದುಗೊಳಿಸಬೇಕು.

7) ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಾದ ಕೆಲವು ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಕಚೇರಿ ಆದೇಶ ಇರುವುದಿಲ್ಲ ಆದ್ದರಿಂದ ಪ್ರತಿಯೊಬ್ಬರಿಗೂ ಕೂಡಲೇ ಆದೇಶ ಪ್ರತಿ( ಆರ್ಡರ್ ಕಾಫಿ) ನೀಡಬೇಕು.

8) ಖಾಲಿ ಇರುವ ಮೇಲ್ವಿಚಾರಕರ ಹುದ್ದೆಗಳಿಗೆ ಅನುಗುಣವಾಗಿ ಅಂಗನವಾಡಿ ಕಾರ್ಯಕರ್ತೆಯರನ್ನು ಭರ್ತಿಗೊಳಿಸಬೇಕು.

9) ದೀರ್ಘಾವಧಿ ಸೇವೆ ಸಲ್ಲಿಸಿರುವ ಹಿರಿಯರು ಹಾಗೂ ಕಡಿಮೆ ಅವಧಿಗೆ ಸೇವೆ ಸಲ್ಲಿಸಿದ/ ಹೊಸದಾಗಿ ನೇಮಕಾತಿಯಾದ ಕಿರಿಯರಿಗೆ ಒಂದೇ ಮೊತ್ತದ ಗೌರವಧನ ಕೊಡುತ್ತಿದ್ದು. ತಾರತಮ್ಯ ಉಂಟಾಗಿದೆ ಆದ್ದರಿಂದ ಸೇವಾ ಹಿರಿತನದ ಆಧಾರದಲ್ಲಿ ಗೋವಾ ರಾಜ್ಯದ ಮಾದರಿಯಲ್ಲಿ ಗೌರವಧನ/ವೇತನ ಹೆಚ್ಚಳ ಮಾಡಬೇಕು.

10) ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಖಾಯಂಗೊಳಿಸಿ ಮತ್ತು ಸರ್ಕಾರಿ ನೌಕರರೆಂದು ಪರಿಗಣಿಸಿ ಕ್ರಮವಾಗಿ C ದರ್ಜೆ ಹಾಗೂ D ದರ್ಜೆ ನೌಕರರ ಸೌಲಭ್ಯ ಕಲ್ಪಿಸಬೇಕು ಅಲ್ಲಿಯವರೆಗೂ ತುರ್ತಾಗಿ ಮಾಸಿಕ ರೂ.21.000/-ಗಳ ಕನಿಷ್ಠ ವೇತನ ನಿಗದಿಪಡಿಸಿ ಜಾರಿಗೊಳಿಸಬೇಕು.

11)ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಂಚಣಿ, ಭವಿಷ್ಯನಿಧಿ,ಇ.ಎಸ್.ಐ. ಇತ್ಯಾದಿ ಯೋಜನೆಗಳನ್ನು ಜಾರಿಗೊಳಿಸಬೇಕು.

12) ಸಮವಸ್ತ್ರ ವರ್ಷ ಕಳೆಯುತ್ತಾ ಬಂದರೂ ಸರಬರಾಜು ಮಾಡಿರುವುದಿಲ್ಲ ತುರ್ತಾಗಿ ಒದಗಿಸಲು ಕೈಗೊಳ್ಳಬೇಕು. ಎಂದು ಮನವಿಪತ್ರದಲ್ಲಿ ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ
ಅಧ್ಯಕ್ಷರು.ಜಿ ನಾಗರತ್ನಮ್ಮ,
ಪ್ರಧಾನ ಕಾರ್ಯದರ್ಶಿ. ಟಿ. ಕವಿತಾ,
ಖಜಾಂಚಿ ಮೀನಾಕ್ಷಿ, ಈರಮ್ಮ, ವೆಂಕಟಲಕ್ಷ್ಮಿ, ಚಂದ್ರಕಲಾ,ಲಕ್ಷ್ಮಿ, ಸರಸ್ವತಿ,ತಾಯಕ್ಕ, ಮಾರಕ್ಕ, ಮಲ್ಲಮ್ಮ ಇನ್ನುಳಿದ ಎಲ್ಲ ವೃತ್ತದ ಮುಖಂಡರು ಮತ್ತು ಅಂಗನವಾಡಿ ಕಾರ್ಯಕರ್ತರು ಸಹಾಯಕಿಯರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here