ಜಿಂದಾಲ್ ಕಾರ್ಖಾನೆಯ ನೌಕರರಿಗೆ ಕ್ಷಯರೋಗದ ಅರಿವು ಮತ್ತು ತಪಾಸಣೆಗೆ ಸೂಕ್ತ ವ್ಯವಸ್ಥೆ ಮಾಡಿ; ಡಾ. ತಾರಕ್ ಶಾಹ

0
306

ಸಂಡೂರು:ಅ:23:-ಸಂಡೂರು ತಾಲೂಕಿನ ಜಿಂದಾಲ್ ಕಾರ್ಖಾನೆಯ ನೌಕರರಿಗೆ ಕ್ಷಯ ರೋಗದ ಬಗ್ಗೆ ಅರಿವು ಮತ್ತು ತಪಾಸಣೆಗೆ ಸೂಕ್ತ ವ್ಯವಸ್ಥೆ ಮಾಡಿ ಎಂದು ಡಾ.ತಾರಕ್ ಶಾಹ, ಜೆಡಿ, ಕ್ಷಯರೋಗ ಕೇಂದ್ರ ತಂಡ, ತಿಳಿಸಿದರು

ಮೂರು ದಿನಗಳ ಪ್ರವಾಸ ಕೈಗೊಂಡ ಜೆ.ಎಸ್.ಎಸ್ ಸೆಂಟ್ರಲ್ ಮತ್ತು ರಾಜ್ಯದ ವತಿಯಿಂದ ಆಗಮಿಸಿದ ತಂಡ ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಕ್ಷಯರೋಗ ಕಾರ್ಯಕ್ರಮದ ಪ್ರಗತಿ ಪರಿಶೀಲನೆಗೆ ಸೆಂಟ್ರಲ್ ನಿಂದ ಆಗಮಿಸಿದ ಡಾ.ತಾರಕ್ ಶಾಹ, ಮತ್ತು ಮಾನ್ಯ ಶ್ರೀ ಡಾ.ಸುರೇಶ್ ಶಾಸ್ತ್ರಿ, ಐ.ಇ.ಸಿ ಜೆ.ಡಿ, ಅವರು ಆಗಮಿಸಿದ್ದು ಅವರನ್ನು ಸಂಡೂರು ತಾಲೂಕಿನಲ್ಲಿ ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಹೆಚ್.ಎಲ್ ಜನಾರ್ಧನ್ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ ಅವರು ತೋರಣಗಲ್ಲು ಕೇಂದ್ರದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು

ನಂತರ ಕಾರ್ಯಕ್ರಮದ ಪ್ರತಿ ಹಂತದ ಪ್ರಗತಿ ಪರಿಶೀಲನೆ ಮಾಡಿದ ತಂಡ ಜಿಂದಾಲ್ ಕಂಪನಿಯಲ್ಲಿ ಕೆಲಸನಿಮಿತ್ತ ಆಗಮಿಸಿದ ನೌಕರರು ಮತ್ತು ಅವರ ಕುಟುಂಬದ ಜನ ಸಂಖ್ಯೆಗೆ ಹೆಚ್ಚಿನ ಗಮನ ಹರಿಸಬೇಕಿದೆ 2025 ಕ್ಕೆ ಕ್ಷಯರೋಗ ಮುಕ್ತ ಭಾರತ ಮಾಡಲು ಎಲ್ಲಾ ಹಂತಗಳಲ್ಲೂ ಕ್ರಮ ಕೈಗೊಳ್ಳಲು ಡಾ.ತಾರಕ್ ಶಾಹ ಸೂಚಿಸಿ ಮಾತನಾಡಿ ಕಾರ್ಖಾನೆಯ ಕಾರ್ಮಿಕರಿಗೆ ವಿಶೇಷ ಆರೋಗ್ಯ ತಪಾಸಣೆ ಕೈಗೊಳ್ಳವಂತೆ ತಿಳಿಸಿದರು,

ಹಾಗೇ ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ಬೇಟಿ ನೀಡಿ ಕ್ಷಯರೋಗದ ಲಕ್ಷಣಗಳ ಇರುವವರನ್ನು ಕಫ ಪರೀಕ್ಷೆ ಮೂಲಕ ಬೇಗ ಪತ್ತೆ ಹಚ್ಚುವುದು, ಎಕ್ಸ್ ರೇ ಅಥವಾ ಸಿಬಿ ನ್ಯಾಟ್ ಟೆಸ್ಟ್ ಮೂಲಕ ಪರೀಕ್ಷೆಗೆ ಸೂಚಿಸಲು ಕ್ರಮ ಕೈಗೊಳ್ಳ ಬೇಕೆಂದು ಜಿಂದಾಲ್ ಸಂಜೀವಿನಿ ಆಸ್ಪತ್ರೆಯ ಮುಖ್ಯಸ್ಥ ಮತ್ತು ವಿವಿಧ ವೈದ್ಯರೊಂದಿಗೆ ಚರ್ಚೆ ನಡೆಸಿದರು, ಮತ್ತು ಮುಂದಿನ ದಿನಗಳಲ್ಲಿ ಇದಕ್ಕಾಗಿ ವಿಶೇಷ ಕ್ರೀಯಾ ಯೋಜನೆ ತಯಾಸುವಂತೆ ತಂಡ ತಿಳಿಸಿತು,ಸದ್ಯ ಆಸ್ಪತ್ರೆಯಲ್ಲಿ ಅಳವಡಿಸಿರುವ ನಾಲ್ಕು ವರ್ಷಗಳ ಹಿಂದಿನ ಫಲಕಗಳನ್ನು ತೆರವುಗೊಳಿಸಿ ಪ್ರಚಾರಕ್ಕಾಗಿ ನೂತನವಾಗಿ ಬಂದಿರುವ ಫಲಕಗಳನ್ನು ಅಳವಡಿಸುವಂತೆ ಸೂಚಿಸಿದರು,

ನಂತರ ತಂಡ ಕೆಲವು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಕರೆಸಿ ಆರೋಗ್ಯದ ಬಗ್ಗೆ ವಿಚಾರಿಸಿದರು, ತಪಾಸಣೆಗೆ,ಚಿಕಿತ್ಸೆಗೆ ದುಡ್ಡು ಏನಾದರೂ ಖರ್ಚಾಯಿತೇ, ಸರ್ಕಾರ ನೀಡುವ ಸಹಾಯ ಧನ ನಿಮ್ಮ ಕೈ ಸೇರುತ್ತಿದೆಯೇ ಚಿಕಿತ್ಸೆಗೆ ಅಡಚಣೆ ಇದೆಯೇ ಎಂದು ಮಾಹಿತಿ ಪಡೆದು ಊಟ ಸರಿಯಾಗಿ ಮಾಡಿ ಚಿಕಿತ್ಸೆ ಪೂರ್ಣಗೊಳಿಸಿ ಆರೋಗ್ಯವಂತರಾಗಿ ಎಂದು ಶುಭ ಕೋರಿದರು,

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ
ಡಾ.ಜನಾರ್ಧನ್ ಅವರು ಮಾತನಾಡಿ ಸಂಡೂರು ತಾಲೂಕನ್ನು ವಿಶೇಷವಾಗಿ ಪರಿಗಣಿಸಿ ಅರಿವು ಮೂಡಿಸುವ ಮತ್ತು ಕಫ ಪರೀಕ್ಷೆ ಮಾಡಲು ಕ್ರಮ ಕೈಗೊಳ್ಳಲಾಗಿದೆ, ಮತ್ತು ಗ್ರಾಮದ ಮಟ್ಟದಲ್ಲಿ ಖಾಸಗಿ ವೈದ್ಯರಿಗೂ ಕ್ಷಯರೋಗ ಪತ್ತೆಗೆ ಕೈಜೋಡಿಸುವಂತೆ ಸೂಚಿಸಲಾಗಿದೆ, ಯಾವುದೇ ಕಾರಣಕ್ಕೂ ರೋಗಿಗಳನ್ನು ಅಲೆದಾಡಿಸಿ ಸಮಯ ಮತ್ತು ದುಡ್ಡು ಹಾಳು ಮಾಡುವುದು ಬೇಡ ಶೀಘ್ರ ಪತ್ತೆಗೆ ಸರ್ಕಾರಿ ಆಸ್ಪತ್ರೆಗೆ ಕಳಿಸುವಂತೆ ತಿಳಿಸಲಾಗಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಡಿ.ಟಿ.ಓ ಡಾ.ಇಂದ್ರಾಣಿ, ಡಾ.ಗೋಪಾಲ್ ರಾವ್, ಡಾ.ಕುಶಾಲ್ ರಾಜ್,ಬಿ.ಹೆಚ್.ಇ.ಓ ಶಿವಪ್ಪ, ಶಕೀಲ್ ಅಹಮದ್, ಮಂಜುನಾಥ್, ಗಿರೀಶ್, ಗೋಪಾಲ್, ಚಂದ್ರಶೇಖರ್, ಪಂಪಾಪತಿ, ನಿಜಾಮುದ್ದೀನ್, ಶಶಿಧರ, ಚಲುವರಾಜ , ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here