ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತವಾಗಿ ವ್ಯಾಪಾರ ವಹಿವಾಟು ಮಾಡುವುದು ನಿಷೇಧ: ಪ್ರೀತಿ ಗೆಹ್ಲೋಟ್.

0
160

ಬಳ್ಳಾರಿ,ನ.15:-ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತವಾಗಿ ವ್ಯಾಪಾರ ವಹಿವಾಟು ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ, ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಸಂಚಾರ ಮಾಡಲು ತೊಂದರೆಯಾಗುತ್ತಿದ್ದು, ವ್ಯಾಪಾರ ವಹಿವಾಟು ಮಾಡುವವರು 3 ದಿನಗಳ ಒಳಗಾಗಿ ತೆರವುಗೊಳಿಸಬೇಕು ಎಂದು ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನಧಿಕೃತವಾಗಿ ವ್ಯಾಪಾರ ಮಾಡುವ ಸ್ಥಳಗಳು: ಬೆಂಗಳೂರು ರಸ್ತೆಯ ಗಡಗಿ ಚೆನ್ನಪ್ಪ ವೃತ್ತದಿಂದ ಬ್ರೂಸ್‍ಪೇಟೆ ಪೊಲೀಸ್ ಠಾಣೆಯವರೆಗೆ, ಅನಂತಪುರ ರಸ್ತೆ ಎಂ.ಜಿ ಯಿಂದ ಇಂದಿರಾ(ಸಂಗಮ್) ಸರ್ಕಲ್‍ವರೆಗೆ, ಇಂದಿರಾ(ಸಂಗಮ್) ಸರ್ಕಲ್‍ನಿಂದ ರಾಯಲ್ ಸರ್ಕಲ್‍ವರೆಗೆ, ರಾಯಲ್ ಸರ್ಕಲ್‍ನಿಂದ ಮೋತಿ ಸರ್ಕಲ್‍ವೆರೆಗೆ, ಇಂದಿರಾ(ಸಂಗಮ್) ಸರ್ಕಲ್‍ನಿಂದ ರಾಘವೇಂದ್ರ ಚಿತ್ರಮಂದಿರವರೆಗೆ ಅನಧಿಕೃತವಾಗಿ ವ್ಯಾಪಾರ ಮಾಡುವುದನ್ನು ನಿಷೇಧಿಸಲಾಗಿದ್ದು ವ್ಯಾಪಾರ ವಹಿವಾಟು ತೆರವುಗೊಳಿಸುವುದು ತಪ್ಪಿದಲ್ಲಿ ನಿಯಮಾನುಸಾರ ಪಾಲಿಕೆಯಿಂದ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here