ವಿಶ್ವ ಏಡ್ಸ್ ದಿನಾಚರಣೆ-2021 ರ ಜಾಗೃತಿ ಜಾಥಕ್ಕೆ ಚಾಲನೆ ನೀಡಿದ ಡಾ. ಗೋಪಾಲ್ ರಾವ್,

0
563

ಸಂಡೂರು:ಡಿ:01:-ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಹಮ್ಮಿಕೊಂಡ ವಿಶ್ವ ಏಡ್ಸ್ ದಿನಾಚರಣೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಳಾಗಿತ್ತು

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ.ಗೋಪಾಲ್ ರಾವ್ ಅವರು 2030 ಕ್ಕೆ ಏಡ್ಸ್ ಮುಕ್ತ ವಿಶ್ವ ರೂಪಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ, ಹೆಚ್.ಐ.ವಿ ಮತ್ತು ಏಡ್ಸ್ ಬಗ್ಗೆ ಎಚ್ಚರಿಕೆಯಿಂದ ಇರದ್ದಿದ್ದರೆ ಯಾರಿಗಾದರೂ ಬರಬಹುದು, ಹೆಚ್.ಐ.ವಿ ಯು ಸೋಂಕಿತ ವ್ಯಕ್ತಿಯಿಂದ ನಡೆಸುವ ಅಸುರಕ್ಷಿತ ಲೈಂಗಿಕತೆಯಿಂದ ಹರಡುತ್ತದೆ, ಮತ್ತು ಸೋಂಕಿತ ರಕ್ತವನ್ನು ಪರೀಕ್ಷಿಸಿಸದೇ ಪಡೆಯುವುದರಿಂದ,ಸಂಸ್ಕರಿಸಿದ ಸೂಜಿ,ಸಿರಂಜು, ಬ್ಲೇಡು ಇತರೆ ಹರಿತವಾದ ವಸ್ತುಗಳನ್ನು ಬಳಸುವುದರಿಂದ, ಹಾಗೂ ಸೋಂಕಿತ ಗರ್ಭಿಣಿಯಿಂದ ಹುಟ್ಟುವ ಮಗುವಿಗೆ ಬರುತ್ತದೆ, ವೈರಸ್ ದೇಹ ಸೇರಿದ ಮೇಲೆ ನಿರೋಧ ಶಕ್ತಿ ಕಡಿಮೆಯಾಗಿ ಇತರೆ ರೋಗಗಳ ಕೂಟವೇ ಏಡ್ಸ್ ಆಗಿ ಪರಿವರ್ತನೆಯಾಗುತ್ತದೆ, ಆಗ ಯಾವುದೇ ಚಿಕಿತ್ಸೆ ಪರಿಣಾಮ ಕಾರಿ ಇರುವುದಿಲ್ಲ, ಹೆಚ್.ಯ.ವಿ ಬರದಂತೆ ಕಾಳಜಿ ವಹಿಸುವುದು ಮುಖ್ಯ,

ಇಲಾಖೆಯು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಪರೀಕ್ಷೆ ಮಾಡುತ್ತದೆ, ಪಾಸಿಟಿವ್ ಬಂದ ವ್ಯಕ್ತಿಯ ಅರೋಗ್ಯ ಸುಧಾರಣೆ ಮಾಡಲು ಶ್ರಮಿಸುತ್ತದೆ, ಬದುಕಲು ದೈರ್ಯ ತುಂಬುತ್ತದೆ, ಸಿಡಿ4 ಸೆಲ್ ಗಳು 200 ಕ್ಕಿಂತ ಕಡಿಮೆಯಾದಾಗ ಎ.ಆರ್.ಟಿ ಚಿಕಿತ್ಸೆ ಪ್ರಾರಂಭಿಸಲಾಗುವುದು ಜೀವನ ಪರ್ಯಂತ ರೋಗಿಯು ಎ.ಆರ್.ಟಿ ಚಿಕಿತ್ಸೆ ಮುಂದುವರೆಸ ಬೇಕಾಗುವುದು, ಕಾಂಡೋಮ್ (ನಿರೋಧ್) ಪೊಟ್ಟಣಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ, ಏಕೈಕ ಸಂಗಾತಿಯೊಂದಿಗೆ ಲೈಂಗಿಕ ಸಂಪರ್ಕ ಇಟ್ಟುಕೊಳ್ಳ ಬೇಕು, ಮದುವೆಗೆ ಮುಂಚೆ ಲೈಂಗಿಕತೆ ಬೇಡ, ಮತ್ತು ಸೋಂಕಿತರ ಜೊತೆಗೆ ವಾಸ ಮಾಡುವುದರಿಂದಾಗಲಿ, ಕೆಲಸ ಮಾಡುವುದರಿಂದಾಗಲಿ,ಊಟ ಬಟ್ಟೆ ಹಂಚಿಕೊಳ್ಳುವುದರಿಂದಾಗಲಿ, ಸೊಳ್ಳೆ, ಕೀಟ ಕಚ್ಚುವುದರಿಂದಾಗಲಿ, ಒಂದೇ ಸ್ನಾನದ ಮನೆ, ಅಡುಗೆ ಮನೆ ಬಳಸುವುದರಿಂದ ಹೆಚ್.ಐ.ವಿ/ಏಡ್ಸ್ ಬರುವುದಿಲ್ಲ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ 1988 ರಿಂದ ಪ್ರತಿವರ್ಷ ಡಿಸೆಂಬರ್ ಒಂದರಂದು ಏಡ್ಸ್ ಕುರಿತು ಜಾಗೃತಿ ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗುವುದು, ಜನರಿಗೆ ಹೆಚ್.ಐ.ವಿ ಮತ್ತು ಏಡ್ಸ್ ಬಗ್ಗೆ ಮಾಹಿತಿ ತಿಳಿಸಲಾಗುವುದು, ಹಾಗೆ ಸುರಕ್ಷಿತ ಲೈಂಗಿಕತೆ ಬಗ್ಗೆ ಅರಿವು ಮೂಡಿಸಲಾಗುತ್ತದೆ ಸರ್ವರೂ ಇಲಾಖೆಯೊಂದಿಗೆ ಕೈಜೋಡಿಸಿದಲ್ಲಿ 2030 ಕ್ಕೆ ಏಡ್ಸ್ ಮುಕ್ತ ವಿಶ್ವ ಮಾಡಬಹುದು, 2021 ರ ಘೋಷಣೆಯಂತೆ ಅಸಮಾನತೆಗಳನ್ನು ಹೋಗಲಾಡಿಸಿ, ಏಡ್ಸ್ ನ್ನು ಕೊನೆಗೊಳಿಸಿ, ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಡಾ.ಗೋಪಾಲ್ ರಾವ್, ಡಾ.ಆಯೇಶಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಐ.ಸಿ.ಟಿ.ಸಿ ಕೌನ್ಸಲರ್‌ ಶ್ರೀರಾಮುಲು, ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಶಕೀಲ್ ಅಹಮದ್, ಮಂಜುನಾಥ್, ಶಶಿಧರ,ಇಮ್ರಾನ್, ನವೀನ್, ತಿಪ್ಪೇಸ್ವಾಮಿ, ಮಮತಾ, ಕೀರ್ತನಾ, ವೆಂಕಪ್ಪ, ಮಾರೇಶ, ಶಿವಕುಮಾರ್, ಅಂಚೆ ಶಂಕ್ರಪ್ಪ, ಹುಸೇನ್‌ ವಲಿ,ಆಶಾ ಕಾರ್ಯಕರ್ತೆ ರಾಜೇಶ್ವರಿ, ಇತರರು ಜಾಥದಲ್ಲಿ ಭಾಗವಹಿಸಿದ್ದರು

LEAVE A REPLY

Please enter your comment!
Please enter your name here