ಹೊಸಪೇಟೆ ನಗರಸಭೆ,ಮರಿಯಮ್ಮನಳ್ಳಿ ಪಟ್ಟಣ ಪಂಚಾಯ್ತಿಗೆ ಚುನಾವಣೆ, ನಿಷ್ಪಕ್ಷಪಾತದಿಂದ ಚುನಾವಣಾ ಕರ್ತವ್ಯ ನಿರ್ವಹಿಸಿ:ಎಸಿ ಸಿದ್ದರಾಮೇಶ್ವರ

0
94

ವಿಜಯನಗರ(ಹೊಸಪೇಟೆ)ಡಿ.03: ಹೊಸಪೇಟೆ ನಗರಸಭೆ ಹಾಗೂ ಮರಿಯಮ್ಮನಳ್ಳಿ ಪಟ್ಟಣ ಪಂಚಾಯತಿಗಳ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2021ಗೆ ಸಂಬಂಧಿಸಿದಂತೆ ತಾಲೂಕು ಕಚೇರಿಯ ಪತ್ರಿಕಾಭವನದಲ್ಲಿ ಸಹಾಯಕ ಆಯುಕ್ತರಾದ ಸಿದ್ದರಾಮೇಶ್ವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ಹಮ್ಮಿಕೊಳ್ಳಲಾಗಿತ್ತು.
ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಅವರು ನಗರಸಭೆ ಮತ್ತು ಪಟ್ಟಣ ಪಂಚಾಯ್ತಿಗೆ ಇದೇ 27ಕ್ಕೆ ಮತದಾನ ನಡೆಯಲಿದೆ. ಚುನಾವಣೆಗೆ ನಿಯೋಜಿತರಾದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯಾವುದೇ ರೀತಿಯ ಸಮಸ್ಯೆಗಳಿಗೆ ಅಸ್ಪದ ಕೊಡದೇ ಅತ್ಯಂತ ಪಾರದರ್ಶಕವಾಗಿ ಹಾಗೂ ನಿಷ್ಪಕ್ಷಪಾತದಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ಚುನಾವಣಾಧಿಕಾರಿಗಳ/ ಸೆಕ್ಟೋರಲ್, ಅಧಿಕಾರಿಗಳ/ಮಾಸ್ಟರ್, ಟ್ರೇನರ್‍ಗಳ/ಚುನಾವಣಾ ಅಭ್ಯರ್ಥಿಗಳ ವೆಚ್ಚದ ನೋಡಲ್ ಅಧಿಕಾರಿಗಳಿಗೆ ಚುನಾವಣಾ ಸಂಬಂಧಿತ ಯಾವ ರೀತಿಯ ನೀತಿ ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ಸಭೆಯಲ್ಲಿ ಸೂಚ್ಯವಾಗಿ ತಿಳಿಸಿದರು.
ಹೊಸಪೇಟೆ ನಗರಸಭೆಯ 35 ವಾರ್ಡ್‍ಗಳು, 167 ಮತಗಟ್ಟೆಗಳು, 06 ಚುನಾವಣಾಧಿಕಾರಿಗಳು, 06 ಸಹಾಯಕ ಚುನಾವಣಾಧಿಕಾರಿಗಳು, 03 ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯತಿಗೆ ಚುನಾವಣಾಧಿಕಾರಿಗಳು, 03 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.
ಡಿ. 08 ರಿಂದ ಡಿ.15ರವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ. ಡಿ.27ರಂದು ಮತದಾನ, ಡಿ.30ರಂದು ಮತ ಎಣಿಕೆ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಹೆಚ್.ವಿಶ್ವನಾಥ್, ನಗರಸಭೆಯ ಪೌರಯುಕ್ತರರಾದ ಮನ್ಸೂರು ಅಲಿ, ನಗರಾಭಿವೃದ್ದಿ ಪ್ರಾಧಿಕಾರ ಆಯುಕ್ತರರಾದ ಈರಪ್ಪ ಬಿರಾದಾರ್ ಹಾಗೂ ಇತರರು ಇದ್ದರು.

LEAVE A REPLY

Please enter your comment!
Please enter your name here