ದೇವಗಿರಿ ಗ್ರಾಮದಲ್ಲಿ ಆನೆಕಾಲು ರೋಗದ ಪತ್ತೆಗೆ ರಕ್ತದ ಮಾದರಿ ಸಂಗ್ರಹಣೆಗೆ ಜನರ ಸ್ಪಂದನೆ ಉತ್ತಮ ಡಾ.ಚಂದ್ರಪ್ಪ,

0
618

ಸಂಡೂರು:ಡಿ:29:-ಸಂಡೂರು ತಾಲೂಕಿನ ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ ದೇವಗಿರಿ ಗ್ರಾಮದಲ್ಲಿ ಆನೆಕಾಲು ರೋಗದ ಪತ್ತೆಗೆ ರಕ್ತದ ಮಾದರಿ ಸಂಗ್ರಹಣೆಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಳಾಗಿತ್ತು

ಈ ಸಂಧರ್ಭದಲ್ಲಿ ಡಾ. ಚಂದ್ರಪ್ಪ ಮಾತನಾಡುತ್ತಾ..ಆನೆಕಾಲು ರೋಗದ ವ್ಯಕ್ತಿ ವಾಸವಾಗಿದ್ದ ಕಾರಣಕ್ಕಾಗಿ ಇಲ್ಲಿಯೂ ರಕ್ತದ ಮಾದರಿಗಳನ್ನು ಸಂಗ್ರಹಣೆ ಮಾಡಲು ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿಗಳು ಆದೇಶ ನೀಡಿದ್ದಕ್ಕಾಗಿ ದೇವಗಿರಿ ಗ್ರಾಮದಲ್ಲಿ ಒಟ್ಟು 501 ಜನರಿಗೆ ಅನೆಕಾಲು ಪತ್ತೆಗಾಗಿ ರಕ್ತದ ಮಾದರಿಗಳನ್ನು ಸಂಗ್ರಹಣೆ ಮಾಡಲಾಗಿದೆ ಎಂದು ಡಾ.ಚಂದ್ರಪ್ಪ ತಿಳಿಸಿದರು,

ದೀರ್ಘಕಾಲ ಸೊಳ್ಳೆ ಕಚ್ಚುವುದರಿಂದ ಬರಬಹುದಾದ ಆನೆಕಾಲು ರೋಗವು ಇತರರಿಗೂ ಬರುವ ಸಾಧ್ಯತೆ ಇರುವುದರಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಣೆ ನೀಡಿದರು ಜನರು ಯಾವುದೇ ಅಂಜಿಕೆ ಇಲ್ಲದೇ ಬಂದು ರಕ್ತ ಪರೀಕ್ಷೆಗೆ ಒಳಗಾಗಿದ್ದಾರೆ ಇದು ಸಂತೋಷದಾಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು,

ಈ ಸಂದರ್ಭದಲ್ಲಿ ಬಂಡ್ರಿ ವೈದ್ಯಾಧಿಕಾರಿ ಡಾ.ಚಂದ್ರಪ್ಪ, ಎಮ್.ಟಿ.ಎಸ್ ಸಾಗರ್, ಮರಿಬಸವನಗೌಡ, ಲ್ಯಾಬ್ ತಂತ್ರಜ್ಞ ಪ್ರಸನ್ನ, ಆರೋಗ್ಯ ಸುರಕ್ಷಾಧಿಕಾರಿ ಮಹಾಂತೇಶ್, ತಿಪ್ಪಮ್ಮ, ಅನುಷಾ,ಹೊನ್ನಾನಾಯ್ಕ, ಸಿ.ಹೆಚ್.ಓ ದಿವ್ಯಾ, ಆಶಾ ಕಾರ್ಯಕರ್ತೆ ಶಾಂತಮ್ಮ, ಸುಜಾತ, ಪವಿತ್ರಾ, ತಿಪ್ಪಮ್ಮ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here