“ಕಿರಿಯರಿಗಾಗಿ ಕೋವ್ಯಾಕ್ಸಿನ್ ಲಸಿಕಾಕರಣ”ಕ್ಕೆ ಉತ್ತಮ ಪ್ರತಿಕ್ರಿಯೆ; ಪ್ರೌಢಶಾಲೆ ಮುಖ್ಯಗುರು ಎಮ್.ತಿಪ್ಪೇಸ್ವಾಮಿ,

0
484

ಸಂಡೂರು:ಜ:04:-ತಾಲೂಕಿನ ಚೋರನೂರು ಹೋಬಳಿಯ ತುಂಬರಗುದ್ದಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾದ ‘ಕಿರಿಯರ ಲಸಿಕಾಕರಣ’ ಕಾರ್ಯಕ್ರಮ ಕುರಿತು ಮಾತನಾಡಿದ ಮುಖ್ಯಗುರುಗಳಾದ ಎಂ. ತಿಪ್ಪೇಸ್ವಾಮಿ ಮಕ್ಕಳಿಗೆ ಸಕಾಲದಲ್ಲಿ ಲಸಿಕೆ ಬಂದಿದೆ ಕೋವಿಡ್ ಮೂರನೆ ಅಲೆ ಭಯದಿಂದ ಇದ್ದ ಮಕ್ಕಳಿಗೆ ಭಯ ದೂರವಾಗಿದೆ,ಲಸಿಕಾಕರಣ ಯಶಸ್ವಿಯಾಗಲು ನಮ್ಮ ಶಾಲೆಯ ವತಿಯಿಂದ ಮೂರು ದಿನಗಳ ಹಿಂದೆ ಪಾಲಕರ ಸಭೆ ನಡೆಸಲಾಗಿತ್ತು ಕೋವಿಡ್-19 ರ ಸಾವು ನೋವುಗಳ ಬಗ್ಗೆ ಅರಿವು ಮೂಡಿಸಿದ್ದೆವು ಮತ್ತು ತಮ್ಮ ಮಕ್ಕಳಿಗೆ ಲಸಿಕೆ ಹಾಕಲು ಯಾವುದೇ ಅಭ್ಯಂತರವಿಲ್ಲ ಮಕ್ಕಳಿಗೆ ಲಸಿಕೆ ನೀಡಿ ಎಂದು ಒಪ್ಪಿಗೆ ಪತ್ರಕ್ಕೂ ಸಹಿ ಮಾಡಿದ್ದರು

ಮಕ್ಕಳಿಗೆ ಲಸಿಕೆಯನ್ನು ನೀಡುವ ಸಂಧರ್ಭದಲ್ಲಿಯೂ ಸಹ ಪಾಲಕರು ಮತ್ತು ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಧಿಯಾಗಿ ಸದಸ್ಯರು ಹಾಗೂ ಎಸ್.ಡಿ.ಎಮ್.ಸಿ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ, ಅರೋಗ್ಯ ಇಲಾಖೆಯ ಸಹಕಾರದೊಂದಿಗೆ ಲಸಿಕಾಕರಣ ಯಶಸ್ವಿಯಾಗಲಿ, ಲಸಿಕೆ ಪಡೆದ ನಂತರ ಮಕ್ಕಳಿಗೆ ಒಂದು ದಿನ ವಿಶ್ರಾಂತಿ ನೀಡಲಾಗುವುದು ಹಾಗೇ ಎಲ್ಲರೂ ಕೋವಿಡ್ ನಿಯಮಾವಳಿಗಳನ್ನು ಮುಂದೆಯೂ ಪಾಲಿಸಿರಿ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಉಮೇಶ್, ಸದಸ್ಯರಾದ ಸುರೇಶ್, ಪ್ರಭು, ವಲಿಸಾಬ್, ನಾಗರಾಜ್, ಮತ್ತು ಎಸ್.ಡಿ.ಎಮ್.ಸಿ ಸದಸ್ಯರು ಮತ್ತು ಗ್ರಾ.ಪಂ ಸದಸ್ಯರಾದ ಅಂಜಿನಪ್ಪ, ಸಹ ಶಿಕ್ಷಕರಾದ ಶ‌ಬ್ಬಿರ್, ಸಿದ್ದಗಂಗಮ್ಮ, ಅಮರೇಶ್, ಹಾಗೂ ಆರೋಗ್ಯ ಸುರಕ್ಷಾಧಿಕಾರಿ ಗುಲ್ಜಾರ್ ಬೇಗಮ್, ಸಮುದಾಯ ಆರೋಗ್ಯ ಅಧಿಕಾರಿ ಮಲ್ಲಿಕಾರ್ಜುನ, ಆಶಾ ಕಾರ್ಯಕರ್ತೆ ಪರ್ವೀನಾ ಬಾನು, ಕೊಟ್ರಮ್ಮ ಮತ್ತು ಊರಿನ ಮುಖಂಡರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here