ನಂದಿಹಳ್ಳಿ ಸ್ನಾತಕೋತ್ತರ ಪಿ.ಜಿ. ಸೆಂಟರ್ ನ 46 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು, ಪಿ.ಜಿ. ಸೆಂಟರ್ ಸಿಲ್ ಡೌನ್

0
405

ಸಂಡೂರು:23:- ತಾಲೂಕಿನ ನಂದಿಹಳ್ಳಿ ವಿಜಯನಗರ ಶ್ರೀ ಕೃಷ್ಣ ದೇವರಾಯ ಸ್ನಾತಕೋತ್ತರ ಪದವಿ ಕಾಲೇಜಿನ ಪಿ.ಜಿ ಸೆಂಟರ್ ನಲ್ಲಿ 46 ಪಾಸಿಟಿವ್ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಪಿ.ಜಿ ಸೆಂಟರ್ ಸೀಲ್ ಡೌನ್ ಮಾಡಲಾಯಿತು,

ಈ ಪಿ.ಜಿ ಸೆಂಟರ್ ನ ವಿದ್ಯಾರ್ಥಿಗಳಲ್ಲಿ 46 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, 46 ವಿದ್ಯಾರ್ಥಿಗಳಲ್ಲಿ 34 ವಿದ್ಯಾರ್ಥಿಗಳ ಇದ್ದು ಅವರಿಗೆ ಟ್ರಿಯೇಜ್ ಮಾಡಲಾಗಿದ್ದು, ಎಲ್ಲರೂ ಆರೋಗ್ಯದಿಂದ ಇದ್ದಾರೆ, ಕೆಲವರಿಗೆ ಸೌಮ್ಯ ಲಕ್ಷಣಗಳು ಇದ್ದು, ಎಲ್ಲರಿಗೂ ಪಲ್ಸ್ ರೇಟ್, ಆಕ್ಸಿಜನ್ ಲೆವೆಲ್, ಟೆಂಪರೇಚರ್ ಚೆಕ್ ಮಾಡಲಾಗಿ ನಾರ್ಮಲ್ ಇದ್ದು, ಇತರೆ ಯಾವುದೆ ಸಮಸ್ಯೆಗಳು ಕಂಡು ಬಂದಿಲ್ಲ,

ಎಲ್ಲರನ್ನೂ ಹೋಮ್ ಐಸೋಲೇಷನ್ ಮಾಡಿ ಮೆಡಿಸನ್ ಕಿಟ್ ವಿತರಿಸಲಾಗಿದೆ, ಉಳಿದ 12 ವಿದ್ಯಾರ್ಥಿಗಳು ಭಾನುವಾರ ಇರುವುದರಿಂದ ತಮ್ಮ ತಮ್ಮ ಊರುಗಳಿಗೆ ತೆರಳಿದ್ದು ಅವರಿಗೆ ಸೋಂಕು ಇತರರಿಗೆ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ,

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಎ.ಡಿ ವೆಂಕಟೇಶ್, ಡಾ.ಭರತ್ ಕುಮಾರ್, ಡಾ.ಚಂದ್ರಪ್ಪ, ಆರೋಗ್ಯ ನೀರಿಕ್ಷಣಾಧಿಕಾರಿ ಮಹಾಂತೇಶ್, ಆರೋಗ್ಯ ಸುರಕ್ಷಾಧಿಕಾರಿ ಶಿವರುದ್ರಮ್ಮ, ಉದ್ಬವ್ ಮೊಬೈಲ್ ಮೆಡಿಕಲ್ ಯುನಿಟ್ ನ ಕೋ-ಆರ್ಡಿನೇಟರ್ ವರವೇಶ್, ಯುಸೂಫ್, ಲ್ಯಾಬ್ ತಂತ್ರಜ್ಞ ಅಲಿ, ಅಶಾ ಕಾರ್ಯಕರ್ತೆ ವಿಜಯ ಲಕ್ಷ್ಮಿ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here