ಬಳ್ಳಾರಿ ನಗರದಲ್ಲಿ ನೂತನ ಸಮ್ಮರ್ ಕ್ಯಾಂಪ್ ಓಪನ್..!!

0
156

ಬಳ್ಳಾರಿ:06:ಎ:- ಸಮ್ಮರ್ ಕ್ಯಾಂಪ್ಸ್ ಎಂದು ಕರೆಯಲಾಗುವ ಇದು ಅನುಭವಿ ತರಬೇತುದಾರರಿಂದ ಮಕ್ಕಳಿಗಾಗಿ ನಡೆಯುವ ಶಿಬಿರಗಳು. ಈ ಶಿಬಿರಗಳಲ್ಲಿ, ಮಕ್ಕಳ ದೈನಂದಿನ ಕಲಿಕೆಯ ಬದಲಾಗಿ, ಬೇರೆಯದೇ ರೀತಿಯ ಶಿಕ್ಷಣ ನೀಡಲಾಗುತ್ತದೆ

ಮಕ್ಕಳಿಗೆ (School) ಪರೀಕ್ಷೆಗಳು (Exams) ಮುಗಿದು ಇನ್ನೇನು ಸಮ್ಮರ್ ಹಾಲಿಡೇಸ್ (Summer Holidays) ಪ್ರಾರಂಭವಾಗುತ್ತಿವೆ, ಮಕ್ಕಳಿಗೆ ರಜೆಯ ಮಜದ ಖುಷಿಯಾದರೆ, ಪೋಷಕರಿಗೆ ಹೇಗಪ್ಪಾ ಇವರನ್ನು ಕಂಟ್ರೋಲ್ ಮಾಡೋದು ಅನ್ನೋದೆ ಚಿಂತೆ. ಬೇಸಿಗೆಯ ರಜಾ ಉತ್ತಮವಾಗಿ ಕಳೆಯಲು, ಪೋಷಕರ (Parents) ಚಿಂತೆ ದೂರಮಾಡಲು ಇರುವುದೊಂದೇ ಪರಿಹಾರ, ಅದುವೇ ಮಕ್ಕಳ ಬೇಸಿಗೆ ಶಿಬಿರ (Children Summer Camp). ಹೌದು, ಬೇಸಿಗೆ ಶಿಬಿರ ಇವುಗಳು ಅಟಗಳು, ಬುದ್ಧಿಯನ್ನು ವೃದ್ಧಿಸುವ ಮೈಂಡ್ ಗೇಮ್ ಗಳು, ಕಲೆ ಸಂಸ್ಕೃತಿಯ ಪರಿಚಯ- ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಇಂತಹ ಉನ್ನತ ಶಿಬಿರಗಳು ಜೀವಮಾನದ ನೆನಪುಗಳು ಮತ್ತು ಕೌಶಲ್ಯಗಳನ್ನು ಒದಗಿಸುತ್ತವೆ.

ಬಳ್ಳಾರಿಯಲ್ಲಿ ನೂತನವಾಗಿ ಆರಂಭವಾಗಿರುವ ಮಕ್ಕಳ ಸಮ್ಮರ್ ಕ್ಯಾಂಪ್ ನಹಿದಾ ಆ್ಯಕ್ಟಿವ್ ಆಗಿರುವ ನಾಹಿದಾ ಮೇಡಂ ಇದರ ಮುಖ್ಯ ರೂವಾರಿ ಆಗಿರುತ್ತಾರೆ

ಇದು ಬಳ್ಳಾರಿಯ B.P.S.C school Opposite ಆರಂಭವಾಗಿದ್ದು ಅದರಲ್ಲಿ ವಿವಿಧ ರೀತಿಯ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ

ದಿ.4/4/2022 ರಂದು ಉದ್ಘಾಟನಾ ಸಮಾರಂಭ ನಡೆಸಲಾಯಿತು ಅದರಲ್ಲಿ ಮಕ್ಕಳ ಜೊತೆಗೆ ಗಿಡಗಳಿಗೆ ನೀರನ್ನು ಹಾಕುವುದರ ಮೂಲಕ ಬಿಸಿಲನಾಡು ಬಳ್ಳಾರಿಯಲ್ಲಿ ಹಸಿರುನಾಡು ಮಾಡುವ ನುಡಿಮುತ್ತುಗಳನ್ನು ಮಕ್ಕಳಿಗೆ ತಿಳಿಸಲಾಯಿತು

ಮುಖ್ಯವಾಗಿ ಸಮ್ಮರ್ ಕ್ಯಾಂಪ್ ನಲ್ಲಿ ಡ್ಯಾನ್ಸ್ ಸಿಂಗಿಂಗ್ ಆಟದೊಂದಿಗೆ ಪಾಠ ಬೇಸಿಕ್ ಕನ್ನಡ ಹಿಂದಿ ಇಂಗ್ಲಿಷ್ ಹಾಗೂ ಗಣಿತ ವಿಷಯದ ಬಗ್ಗೆ ಹಿಂದುಳಿದ ಮಕ್ಕಳನ್ನು ಇದರಲ್ಲಿ ಪರಿಣಿತರಾಗಿ ಮಾಡಲಾಗುತ್ತದೆ

ನಾನಾ ಕಾರಣಗಳಿಂದ ಮಕ್ಕಳು ಕಳೆದ 2ವರ್ಷಗಳಿಂದ ಚಟುವಟಿಕೆಗಳಲ್ಲಿ ಹಿಂದುಳಿದಿದ್ದು ಎಲ್ಲವನ್ನು ಮರೆಯುವ ಸಾಧ್ಯತೆಗಳಿಸುವ ಸಂದರ್ಭದಲ್ಲಿ ಇದು ಒಂದು ಸುವರ್ಣ ಅವಕಾಶ ಎಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎನ್ನುವುದೇ ಈ ಸಮ್ಮರ್ ಕ್ಯಾಂಪ್ ನ ವ್ಯವಸ್ಥಾಪಕರ ಆಶಯವಾಗಿದೆ ಎಂದು ಕ್ಯಾಂಪ್ ನ ವ್ಯವಸ್ಥಾಪಕರಾದ ನಹಿದಾ ತಿಳಿಸಿದರು

ಮೊದಲನೆಯ ಬ್ಯಾಚ್:-ದಿನಾಂಕ:4 /4/22 ರಿಂದ 15/5/22 ,ರವರೆಗೆ ಹಾಗೂ ಎರಡನೆಯ ಬ್ಯಾಚ್:- 12/4/22 ಆರಂಭಗೊಳ್ಳಲಿದೆ,
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ನಹಿದಾ ವ್ಯವಸ್ಥಾಪಕರು – 7892545906
ಬಾಷಾ – 7892895860

LEAVE A REPLY

Please enter your comment!
Please enter your name here