ಪಕ್ಷಿಗಳಿಗೆ ನೀರುಣಿಸುವ ಅರವಟ್ಟಿಗೆ ಕಟ್ಟಿ ಅಂಬೇಡ್ಕರ್ ಹಾಗೂ ಮಹಾವೀರ ಜಯಂತಿ ಆಚರಣೆ.

0
211

ಸಿಂಧನೂರು ತಾಲೂಕಿನ ತುರವಿಹಾಳ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ 131ನೇ ಜಯಂತಿ ಮತ್ತು ಭಗವಾನ್ ಮಹಾವೀರ ಜಯಂತಿಯ ನಿಮಿತ್ತವಾಗಿ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ಕಟ್ಟುವ ಕಾರ್ಯಕ್ರಮ ಆಚರಿಸಲಾಯಿತು .

ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಗಳಾದ ಶ್ರೀ ಮಂಜುನಾಥ ಅವರು ಪಕ್ಷಿಗಳ ಅರವಟ್ಟಿಗೆಗಳಿಗೆ ಆಹಾರ ಧಾನ್ಯ ಮತ್ತು ನೀರು ಹಾಕುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಶ್ರೀ ಅಮರೇಗೌಡ ಮಲ್ಲಾಪೂರ, ಸಿಂಧನೂರು ವನಸಿರಿ ಫೌಂಡೇಶನ ತಾಲೂಕ ಅದ್ಯಕ್ಷರಾದ ರಮೇಶ ಕುನ್ನಟಗಿ,ವನಸಿರಿ ಕಾರ್ಯಧ್ಯಕ್ಷ ಚಂದ್ರಶೇಖರ್ ಪವಾಡಶೆಟ್ಟಿ. ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ವನಸಿರಿ ತಂಡದ ಸದಸ್ಯರುಗಳಾದ ಶಂಕರಗೌಡ ದೇವರಮನಿ,ಪ್ರದೀಪ್,ಚನಪ್ಪ, ತುರವಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗಳಾದ ಹುಸೇನ್ ಬೀ, ಮೋದೀನ್ ಬೀ, ಇಂದಿರಾ, ಪೂಜಾ, ಪರಮೇಶ, ಬಾಬು ಇನ್ನಿತರರು ಉಪಸ್ಥಿತರಿದ್ದರು.

ವರದಿ: ಅವಿನಾಶ್ ದೇಶಪಾಂಡೆ

LEAVE A REPLY

Please enter your comment!
Please enter your name here