ಪತ್ರಕರ್ತ ರಾಜೀವ ಐರಣಿಗೆ ಭಾತೃ ವಿಯೋಗ.

0
112

ಸಿರುಗುಪ್ಪ : ಇಲ್ಲಿನ ವಿಜಯನಗರದ ನಿವಾಸಿ ಪತ್ರಕರ್ತ ರಾಜೀವ ಐರಣಿ ಇವರ ಏಕೈಕ ಹಿರಿಯ ಸಹೋದರ ಶ್ರೀನಾಥ ಐರಣಿ ಮರಣ ಹೊಂದಿದ್ದಾರೆ

ಕಳೆದ 4 ತಿಂಗಳಿನಿಂದ ಹೃದಯದ ತೊಂದರೆ ಇತ್ತು. ಕಳೆದ ದಶಕದಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಇವರು ಮತ್ತೆ ಈಗ ಹೃದಯ ತೊಂದರೆಗೆ ಒಳಗಾಗಿದ್ದರು. ಈ ಮಧ್ಯೆ ಕಳೆದ ಜನವರಿ ತಿಂಗಳ 26 ರಂದು ತಾಯಿ 83 ವರ್ಷದ ರೋಹಿಣಿ ಬಾಯಿ ಐರಣಿ ಮರಣ ಹೊಂದಿದ್ದರು
ಈ ತಿಂಗಳ 5ನೇ ತಾರೀಕಿನಂದು ಬೆಂಗಳೂರಿನ ಜಯದೇವ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರಿಗೆ ಮುಂಬರುವ ತಿಂಗಳಲ್ಲಿ ಮತ್ತೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ದಿನಾಂಕ ನಿಗದಿಯಾಗಿತ್ತು. ಆದರೆ 26 ಮಂಗಳವಾರ ಮಧ್ಯಾಹ್ನ 1ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ರಕ್ತದೊತ್ತಡ ಅತೀವ ಕಡಿಮೆಯಾಗಿ ಚಿಕಿತ್ಸೆಗೆ ದೇಹ ಸ್ಪಂದಿಸಲಾಗದೆ ಅಸುನೀಗಿದರು ಎಂದು ವೈದ್ಯರು ದೃಢಪಡಿಸಿದ್ದಾರೆ

ಅಣ್ಣನ ಇಚ್ಛೆಯಂತೆ ರಾಜೀವ ಐರಣಿ ಹಾಗೂ ಕುಟುಂಬಸ್ಥರು ಶ್ರೀನಾಥರ ನೇತ್ರಗಳನ್ನು ಮತ್ತು ದೇಹವನ್ನು ಎಂ ಎಸ್ ರಾಮಯ್ಯ ವೈದ್ಯಕೀಯ ಸಂಶೋಧನಾ ಘಟಕಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗೆ ಸಹಕಾರಿ ಹಾಗೂ ವೈದ್ಯಕೀಯ ಕ್ಷೇತ್ರದ ಅನೇಕ ಸವಾಲುಗಳ ಪ್ರಯೋಗಕ್ಕೆ ಅನುಕೂಲವಾಗಲಿ ಎಂಬ ಮಾನವೀಯತೆಯಿಂದ ದೇಹದಾನ ಮಾಡಿದ್ದಾರೆ

ಸಿರುಗುಪ್ಪ ತಾಲ್ಲೂಕಿನಲ್ಲಿ ದೇಹದಾನ ಮಾಡಿದ ಮೂರನೆಯ ವ್ಯಕ್ತಿ ಹಾಗೂ ನೇತ್ರಗಳನ್ನು ದಾನ ಮಾಡಿದ ಶ್ರೀನಾಥ ಐರಣಿ 50 ನೆಯ ವ್ಯಕ್ತಿಯಾಗಿದ್ದಾರೆ
ಭಾರತೀಯ ವೈದ್ಯಕೀಯ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಡಾ ಮಧುಸೂದನ ಕಾರಿಗನೂರು ನೇತ್ರಗಳನ್ನು ಮತ್ತು ದೇಹದಾನ ಮಾಡಲು ಸಹಕಾರ ನೀಡಿದ್ದು ನಮಗೆ ಸಹಾಯಕವಾಯಿತು ಎಂದು ಸಂಬಂಧಿಗಳು ತಿಳಿಸಿದರು
ದಾವಣಗೆರೆ ಗುಲ್ಬರ್ಗ ಆಂಧ್ರಪ್ರದೇಶ ಹರಿಹರ ಬಳ್ಳಾರಿ ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಅಪಾರ ಬಂಧುಗಳನ್ನು ಹೊಂದಿದ್ದಾರೆ

ಛಾಯಾಗ್ರಾಹಕ ವೃತ್ತಿ ಮಾಡುತ್ತಿದ್ದ ಇವರಿಗೆ ಅನೇಕ ವೃತ್ತಿಪರ ಸ್ನೇಹಿತರಿದ್ದರು.
ಇದೀಗ ಇವರು ಅಪಾರ ಪ್ರಮಾಣದ ಸಂಬಂಧಿಗಳು ಸ್ನೇಹಿತರು ಹಾಗೂ ಇವರ ತಮ್ಮ ಮತ್ತು ಅವರ ಕುಟುಂಬದವರನ್ನು ಅಗಲಿದ್ದಾರೆ. ಸುದ್ದಿ ತಿಳಿಯುತ್ತಲೇ ಅನೇಕ ಹಿರಿಯರು ಮುಖಂಡರು ಸ್ನೇಹಿತರು ಮತ್ತು ಕುಟುಂಬದವರು ಕಂಬನಿ ಮಿಡಿದಿದ್ದು ಆತ್ಮಕ್ಕೆ ಶಾಂತಿ ಸಿಗಲೆಂದು ಕೋರಿದ್ದಾರೆ.
ಮರಣಾ ನಂತರದ ಧಾರ್ಮಿಕ ವಿಧಿ ವಿಧಾನಗಳನ್ನು ದಕ್ಷಿಣ ಕಾಶಿ ಪಂಪಾ (ಹಂಪಿ) ಕ್ಷೇತ್ರದಲ್ಲಿ ಜರುಗಿಸುತ್ತಾರೆಂದು ತಿಳಿದುಬಂದಿದೆ

LEAVE A REPLY

Please enter your comment!
Please enter your name here