ಕಾನಹೊಸಹಳ್ಳಿ ನಾಡ ಕಛೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಉಪ ತಹಶೀಲ್ದಾರ್ ಚಂದ್ರಮೋಹನ್.!

0
87

ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲ್ಲೂಕು ಕಾನಾ ಹೊಸಹಳ್ಳಿ ಹೋಬಳಿಯ ನಾಡ ಕಛೇರಿಯಲ್ಲಿ (ಅಗಸ್ಟ್-15) 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಉಪ ತಹಶೀಲ್ದಾರ್ ಜಿ.ಚಂದ್ರಮೋಹನ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು ಸ್ವಾತಂತ್ರ್ಯಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟು, ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ವೀರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವನ್ನು ಸ್ಮರಿಸಿದರು.

ನಂತರ ನಿವೃತ್ತ ಶಿಕ್ಷಕರಾದ ಕೋಟ್ರಣ್ಣ ಮಾತನಾಡಿ ರಾಷ್ಟ್ರಕ್ಕಾಗಿ, ರಾಷ್ಟ್ರದ ಜನತೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಸಿಂಹ ಸದೃಶರ ತ್ಯಾಗ ಬಲಿದಾನಗಳಿಂದ 1947 ಆಗಸ್ಟ್ 14 ರ ಮಧ್ಯರಾತ್ರಿಯಂದು ದೇಶ ಸ್ವಾತಂತ್ರ್ಯವನ್ನು ಪಡೆಯಿತು. ಬ್ರಿಟೀಷರಿಂದ ಭಾರತವನ್ನು ಸ್ವಾತಂತ್ರಗೊಳಿಸುವುದಕ್ಕಾಗಿ ಅನೇಕ ಚಳುವಳಿಗಳು ನಡೆದವು ಆ ನಿಟ್ಟಿನಲ್ಲಿ 1857 ರಲ್ಲಿ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಈ ಸಮರದ ನೇತೃತ್ವವನ್ನು ಝಾನ್ಸಿರಾಣಿ ಲಕ್ಷ್ಮೀಬಾಯಿ, ತಾಂತ್ಯಾಟೋಪಿ, ನಾನಾಸಾಹೇಬ್ ಮೊದಲಾದವರು ವಹಿಸಿದ್ದರು. ಆದರೆ ಈ ಒಂದು ಸಮರಕ್ಕೆ ವ್ಯಾಪಕ ಬೆಂಬಲ ದೊರೆಯದೇ ಸಂಗ್ರಾಮ ವಿಫಲವಾಯಿತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ವಿ.ಮಹಾದೇವಪ್ಪ, ಕಂದಾಯ ಪರೀವೀಕ್ಷಕರಾದ ಮುರುಳಿಕೃಷ್ಣ, ಗ್ರಾಮಲೆಕ್ಕಾಧಿಕಾರಿಗಳಾದ ಮರುಳಸಿದ್ದಪ್ಪ , ಕೋಟ್ರೇಶ್, ಸೋಮಪ್ಪ, ಕುಂಬಾರ್ ಮುರುಗೇಶ್, ಶ್ರೀನಿವಾಸ ಕೋಂಡಿ, ರಾಘವೇಂದ್ರ. ಚೈತ್ರ, ಅಂಬುಜಾಕ್ಷಿ , ಸಿಬ್ಬಂದಿ ಅನಿತಾ, ಮಂಜುನಾಥ, ಸಿದ್ದೇಶ್, ವೀರೇಶ್ ಕಿಟ್ಟಪ್ಪನವರ್, ಅಮಲಾಪುರ ಅಂಜಿನಪ್ಪ , ಹೇಮಂತ್,ಯಶವಂತ, ಫೋಟೋ ನಾಗರಾಜ, ಕುಂಬಾರ್ ಹನುಮಂತಪ್ಪ , ಹನುಮಂತಪ್ಪ ಹಾಗೂ ಗ್ರಾಮ ಸಹಾಯಕರುಗಳು ಸೇರಿ ಇತರರು ಉಪಸ್ಥಿತರಿದ್ದರು.

ವರದಿ:-ಮಂಜುನಾಥ್. ಹೆಚ್

LEAVE A REPLY

Please enter your comment!
Please enter your name here