ರಾಷ್ಟ್ರೀಯ ಫ್ಲೋರೋಸಿಸ್ ತಡೆ ಹಾಗೂ ನಿಯಂತ್ರಣ ಕಾರ್ಯಕ್ರಮ.

0
132

ಬಳ್ಳಾರಿ,ಮೇ 10: ರಾಷ್ಟ್ರೀಯ ಫ್ಲೋರೋಸಿಸ್ ತಡೆ ಹಾಗೂ ನಿಯಂತ್ರಣ ಕಾರ್ಯಕ್ರಮದ ಅಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಮೂಳೆ ಫ್ಲೋರೊಸಿಸ್‍ನಿಂದ ಗುರುತಿಸಲ್ಪಟ್ಟ ರೋಗಿಗಳಿಗೆ ಗಾಲಿ ಕುರ್ಚಿ ವಿತರಣಾ ಕಾರ್ಯಕ್ರಮವನ್ನು ಮಂಗಳವಾರದಂದು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಹೆಚ್.ಎಲ್ ಜನಾರ್ಧನ್ ಅವರು ಮೂಳೆ ಫ್ಲೋರೊಸಿಸ್‍ನಿಂದ ಗುರುತಿಸಲ್ಪಟ್ಟ ರೋಗಿಗಳಿಗೆ ಗಾಲಿ ಕುರ್ಚಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ ವಿವಿಧ ಗ್ರಾಮಗಳಲ್ಲಿ ನೀರಿನಲ್ಲಿ ಕಂಡುಬರುವಂತಹ ಫ್ಲೋರೊಸಿಸ್ ಪ್ರಮಾಣವನ್ನು ಪರೀಕ್ಷೆ ಮಾಡಲಾಗುತ್ತಿದ್ದು, ನಿರಂತರವಾಗಿ ಆರೋಗ್ಯ ಜಾಗೃತಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ವಿಶೇಷವಾಗಿ ಮೂಳೆ ಮತ್ತು ದಂತ ಫ್ಲೋರೊಸಿಸ್‍ನ ತೊಂದರೆಯನ್ನು ನಿರ್ವಹಿಸಲು ಹಾಗೂ ಅದನ್ನು ನಿಯಂತ್ರಿಸಲು ಸಾರ್ವಜನಿಕರು ಶುದ್ಧೀಕರಿಸಿದ ನೀರನ್ನು ಕುಡಿಯಬೇಕು ಹಾಗೂ ಕಿತ್ತಳೆ, ನಿಂಬೆ, ಹಸಿರು ಸೊಪ್ಪು, ಮೊಳಕೆಕಾಳು, ಹಾಲು, ಬೆಲ್ಲ ಸೇವೆನೆಯಿಂದ ಫ್ಲೊರೋಸಿಸ್‍ನ್ನು ಕಾಯಿಲೆಯನ್ನು ನಿಯಂತ್ರಿಸಬಹುದು ಹಾಗೂ ವಿಶೇಷವಾಗಿ ಹೆಚ್ಚು ಫ್ಲೋರೈಡ್ ಯುಕ್ತ ಆಳವಾದ ಕೊಳವೆ ಬಾವಿಯ ನೀರನ್ನು ಕುಡಿಯದಂತೆ ಮುಂಜಾಗೃತೆ ವಹಿಸಬೇಕು. ಹಾಗೂ ಆಹಾರದಲ್ಲಿ ಕಪ್ಪು ಟೀ, ಅಡಿಕೆ, ಕಪ್ಪು ಉಪ್ಪು ಮತ್ತು ಹೆಚ್ಚು ಫ್ಲೊರೈಡ್ ಅಂಶವಿರುವ ಟೂತ್‍ಪೇಸ್ಟ್/ ಬಾಯಿ ಸ್ವಚ್ಚಗೊಳಿಸುವ ದ್ರಾವಣಗಳನ್ನು ಬಳಸಬಾರದು ಎಂದು ತಿಳಿಸಿದರು.
ಈ ಕಾರ್ಯಕ್ರಮದ ಅಡಿಯಲ್ಲಿ ಸಿರುಗುಪ್ಪ ತಾಲ್ಲೂಕಿನ ಉತ್ತನೂರು ಗ್ರಾಮದ ಮಲ್ಲಯ್ಯ ತಂದೆ ಅಂಜಿನಪ್ಪ ಇವರಿಗೆ ಗಾಲಿ ಕುರ್ಚಿಯನ್ನು ಹಾಗೂ ಮೂರು ತಿಂಗಳುವರೆಗೂ ಆಗುವಷ್ಟು ವಿಟಮಿನ್ ಸಿ ಮತ್ತು ವಿಟಮಿನ್ ಡಿ3, ಕ್ಯಾಲ್ಸಿಯಮ್ ಮಾತ್ರೆಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ಅನಿಲ್ ಕುಮಾರ್, ಸಂಡೂರಿನ ತಾಲ್ಲೂಕ ಆರೋಗ್ಯ ಅಧಿಕಾರಿಗಳಾದ ಡಾ. ಕುಶಲ್‍ರಾಜ್, ಜಿಲ್ಲಾ ಫ್ಲೋರೊಸಿಸ್ ಸಲಹೆಗಾರರಾದ ಡಾ.ಆನಂದ್ ಹಾಗೂ ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here