ಶಾಲಾ ಪ್ರಾರಂಭೋತ್ಸವ; ಹಗರಿಬೊಮ್ಮನಹಳ್ಳಿ ಒಲ್ಡ್ ಟೌನ್ ಸರ್ಕಾರಿಶಾಲೆಯಲ್ಲಿ ಮಕ್ಜಳಗೆ ಪೆನ್, ಪೆನ್ಸಿಲ್, ಉತ್ಪತ್ತಿ ಕೊಟ್ಟು ಸ್ವಾಗತಕೋರಿದ ಶಿಕ್ಷಕ ವರ್ಗ

0
142

ಹಗರಿಬೊಮ್ಮನಹಳ್ಳಿ, ಮೇ 16 –
ಹಗರಿಬೊಮ್ಮನಹಳ್ಳಿ ಒಲ್ಡ್ ಟೌನ್ ನಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವದ ಸಂಭ್ರಮವೇ , ಸಂಭ್ರಮ. ಮಕ್ಕಳು ಖುಷಿ,ಖುಷಿಯಾಗಿ ಶಾಲೆಯ ಅವರಣದೊಳಕ್ಕೆ ನಿಗದಿ ಸಮಯಕ್ಕೂ ಮುಂಚೆಯೇ ಯುನಿಫಾರ್ಮಧಾರಿಗಳಾಗಿ ಗುಂಪು,ಗುಂಪಾಗಿ ಆಗಮಿಸಿ ಬಂದರು. ಇಡೀ ಶಾಲಾ ಆವಣರದ ತುಂಬನೂ ತರಗತಿಗಳ ಪ್ರಾರಂಭೋತ್ಸೋವದ ಸಡಗರ ಮನೆ ಮಾಡಿತ್ತು. ಮುಖ್ಯೋಪಾಧ್ಯಾರಾಗಿ ಇಡೀ ಶಿಕ್ಷಕವರ್ಗ, ಬಿಸಿಊಟ ತಯಾರಕರು ಶಾಲೆಗೆ ಬಂದ ಮಕ್ಕಳನ್ನು ಸ್ವಾಗತಿಸುತ್ತಾ ಬರ ಮಾಡಿಕೊಂಡರು.

2022-23ನೇ ಸಾಲಿನ ಶಾಲಾ ಪ್ರಾರಂಭೋತ್ಸವದ ನಿಮಿತ್ತ ಶಾಲೆಗೆ ಆಗಮಿಸಿದ ನೂರಾರು ಮಕ್ಕಳಿಗೆ ಮುಖ್ಯ ದ್ವಾರದಲ್ಲಿಯೇ ಅವರ ಕೈಗೆ ಪೆನ್ನು, ಪೆನ್ಸಿಲ್ ಹಾಗೂ ಉತ್ತತ್ತಿಯನ್ನು ನೀಡುವ ಮೂಲಕ ಶಾಲಾ ಪ್ರಾರಂಭೋತ್ಸವವನ್ನು ಸ್ಮರಣಿಕೆಯನ್ನಾಗಿಸಿದ್ದು ವಿಶೇಷವಾಗಿತ್ತು.

ಕ್ಷೇತ್ರ ಶಿಕ್ಷಣಾಧಿಕಾರಿ ಆನಂದಪ್ಪ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾ ಅಧಿಕಾರಿ ಸಿ ಕೊಟ್ರೇಶ್, ಶಿಕ್ಷಣ ಸಂಯೋಜಕರಾದ ಮುಸ್ತಾಕ್ ಅಹಮದ್ ಹಾಗೂ ಶಿವಲಿಂಗಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಗೂಳಪ್ಪ ಹುಲಮನಿ, ಪುರಸಭಾ ಸದಸ್ಯರಾದ ದೀಪಕ್ ಕಠಾರೆ, ಹೆಚ್ ಎಂ ಚನ್ನಮ್ಮ ವಿಜಯಕುಮಾರ, ಮಂಗಳಾ ರವೀಂದ್ರಗೌಡ , ಎಸ್ ಡಿ ಎಂ ಸಿ ಅಧ್ಯಕ್ಷರಾದ ಹೆಚ್ ಲೋಕಪ್ಪ , ಉಪಾಧ್ಯಕ್ಷೆ ಲತಾ ವೈ ಎಂ, , ಸದಸ್ಯರಾದ ಗಣಪತಿ ಬಿ ಹಬೀಬ್ , ಮಾರೆಡ್ಡಿ , ಚಂದ್ರಶೇಖರ, ಪ್ರಭಾರಿ ಮುಖ್ಯ ಶಿಕ್ಷಕ ಯು ಎಸ್ ಕೊಟ್ರೇಶ್ ಹಾಗೂ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

–ಹುಳ್ಳಿಪ್ರಕಾಶ

LEAVE A REPLY

Please enter your comment!
Please enter your name here