ದೇವದಾಸಿಯರನ್ನು ಮುಖ್ಯವಾಹಿನಿಗೆ ತರಲು ಆಗ್ರಹ-ಸಾತಿ ಸುಂದರೇಶ್

0
257

ಕೊಟ್ಟೂರು:ಜೂನ್:30:-ರಾಜ್ಯದಲ್ಲಿನ 15 ಲಕ್ಷ ಹೆಕ್ಟರ್ ಭೂಮಿಯನ್ನು ಸರ್ಕಾರ ದೇವಸ್ಥಾನಗಳು ಮತ್ತು ಖಾಸಗಿ ಕಂಪನಿಗಳವರಿಗೆ ಕೊಟ್ಟಿದ್ದು ನಿವೇಶನಗಳು ಮನೆಗಳು ಇಲ್ಲದ 50 ಲಕ್ಷಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಅದರಲ್ಲೂ ದೇವದಾಸಿಯರಿಗೆ ಸರ್ಕಾರ ನೀಡಲು ಮುಂದಾಗಿದ್ದರೆ ಉತ್ತಮ ಕೆಲಸವಾಗುತ್ತಿತ್ತು. ಸರ್ಕಾರಗಳು ಕೇವಲ ಶ್ರೀಮಂತರ ಬೆಳವಣಿಗೆಗೆ ಪೊರಕ ಅಭಿವೃದ್ದಿ ಯೋಜನೆಗಳನ್ನು ರೂಪಿಸುತ್ತಿವೆ ಎಂದು ರಾಜ್ಯ ಭಾರತೀಯ ಕಮ್ಯುನಿಸ್ಟ್ ಪ್ರಧಾನ ಕಾರ್ಯದರ್ಶಿ ಕಾಂಬ್ರೆಡ್ ಸಾತಿ ಸುಂದರೀಶ್ ಹೇಳಿದರು.

ಎಪಿಎಂಸಿ ಸಭಾಂಗಣದಲ್ಲಿ ಗುರುವಾರ ವಿಜಯನಗರ ಜಿಲ್ಲಾ ಮಟ್ಟದ ದೇವದಾಸಿ ಮಹಿಳೆಯರ ಪ್ರಥಮ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ದೇವದಾಸಿಯವರಿಗೆ ಕೇವಲ 1500 ಮಾಶಾಸನ ಕೊಡುವುದಾಗಿ ಹೇಳಿಕೊಂಡ ಸರ್ಕಾರ ಕಳೆದ ಹಲವಾರು ತಿಂಗಳುಗಳಿಂದ ಅವರುಗಳಿಗೆ ಯಾವುದೇ ಬಗೆಯ ಮಾಶಾಸನ ಕೊಡದೇ ಸತಾಯಿಸುತ್ತಿದೆ. ಇದೀಗ ಈ ಬಗೆಯ ದೇವದಾಸಿಯವರಿಗೆ 5000 ರೂಗಳ ಮಾಶಾಸನ ಪ್ರತಿ ತಿಂಗಳು ನೀಡುವತ್ತ ಸರ್ಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

ದೇವದಾಸಿ ಮಹಿಳೆಯರ ಮಕ್ಕಳಿಗೆ ಉದ್ಯೋಗ ಮತ್ತು ಶಿಕ್ಷಣ ನೀಡಿಕೆಯಲ್ಲಿ ಮೀಸಲಾತಿಯನ್ನು ನೀಡಬೇಕು ಕೇವಲ ಮತ ಬ್ಯಾಂಕ್‌ಗಾಗಿ ಕೆಲವೊಂದು ವರ್ಗದವರಿಗೆ ಮಾತ್ರ ಈ ಸೌಲಭ್ಯಗಳನ್ನು ನೀಡುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ರಾಜ್ಯದ್ಯಾದಂತ ಹೋರಾಟ ಹಮ್ಮಿಕೊಂಡು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಿರಂತರ ಕಮ್ಯುನಿಸ್ಟ್ ಪಕ್ಷ ಮಾಡುತ್ತಿದೆ. ಕೋರೋನಾ ಕಾರಣದಿಂದಾಗಿ ಕಳೆದ 2 ವರ್ಷಗಳಿಂದ ಹೋರಾಟ ರೂಪಿಸಲು ಸಾಧ್ಯವಾಗಿರಲಿಲ್ಲ,ಸರ್ಕಾರ ಗಮನ ಸೆಳೆಯಲು ಶೀಘ್ರದಲ್ಲಿ ದೊಡ್ಡ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳಲಿದೆ ಎಂದರು.

ಬರಹಗಾರ ಉಜ್ಜಿನಿ ರುದ್ರಪ್ಪ ಮಾತನಾಡಿ ಶೋಷಿತ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿ ಕೊಡುವ ನೂತನ ಯೋಜನೆಗಳು ಶೀಘ್ರದಲ್ಲೆ ಕಾರ್ಯರೂಪ ಪಡೆಯಬೇಕೆಂದು ಎಂದರು. ಇದಾದರೆ ಮಾತ್ರ ದೇವದಾಸಿಯರು ಸೇರಿದಂತೆ ಇತರ ಎಲ್ಲಾ ವರ್ಗ ಶೋಷಿತ ಮಹಿಳೆಯರಿಗೆ ಜೀವನ ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ ಎಂದರು.
ರಾಜ್ಯ ದೇವದಾಸಿ ಮಹಿಳೆಯರ ಕ್ಷೇಮಾಭಿವೃದ್ದಿ ಒಕ್ಕೂಟದ ವಿಜಯನಗರ ಜಿಲ್ಲಾಧ್ಯಕ್ಷೆ ಕೆ.ರೇಣುಕಮ್ಮ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಕೊರಚರ ಕೊಟ್ರೇಶ, ಮುದೇನೂರು ವಿನಾಯಕ,ವಿ.ಯಮುನಮ್ಮ, ಕೆ.ಬಸವರಾಜ, ಬದ್ದಿ ರೇಣುಕಮ್ಮ, ದಂಡೆಮ್ಮ, ಅಡಿವೆಪ್ಪ, ಚೌಟ್ಗಿ ದುರುಗಮ್ಮ, ಮತ್ತಿತರರು ಪಾಲ್ಗೊಂಡಿದ್ದರು.

ಸಮ್ಮೇಳನ ಆರಂಭಕ್ಕೂ ಮುನ್ನಾ ವಿಜಯನಗರ ಜಿಲ್ಲಾ ದೇವದಾಸಿ ಮಹಿಳೆಯರ ಕ್ಷೇಮಾಭಿವೃದ್ದಿ ಒಕ್ಕೂಟದ ಸದಸ್ಯರು ಪಟ್ಟಣದ ಬಸ್ ನಿಲ್ದಾಣದಿಂದ ಎಪಿಎಂಸಿ ಯವರಿಗೆ ಬೃಹತ್ ಮೆರವಣಿಗೆ ನಡೆಸಿದರು. ಅಖಿಲ ಭಾರತ ಕಿಸಾನ್ ಸಭಾದ ರಾಜ್ಯ ಉಪಾಧ್ಯಕ್ಷ ಕಾಂಬ್ರೇಡ್ ಹೆಚ್.ವೀರಣ್ಣ ಸ್ವಾಗತಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here