ಗೃಹರಕ್ಷಕರ ಪುನರ್‍ಮನನ ತರಬೇತಿ ಶಿಬಿರದ ಸಮಾರೋಪ ಸಮಾರಂಭ

0
59

ಬಳ್ಳಾರಿ,ಜೂ.29 : ಬಳ್ಳಾರಿ ತಾಲೂಕಿನ ಮೀನಹಳ್ಳಿ(ಹಗರಿ) ಯ ಗೃಹರಕ್ಷಕ ಹಾಗೂ ಪೌರರಕ್ಷಣಾ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ 13 ದಿನಗಳ ಕಾಲ “ಪುನರ್ ಮನನ” ತರಬೇತಿ ಶಿಬಿರದ ಸಮಾರೋಪ ಸಮಾರಂಭ ಬುಧವಾರದಂದು ನಡೆಯಿತು.
ರಾಜ್ಯದ 15 ಜಿಲ್ಲೆಗಳಿಂದ ಒಟ್ಟು 59 ಜನ ಗೃಹರಕ್ಷಕರು ತರಬೇತಿಯಲ್ಲಿ ಹಾಜರಿದ್ದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗೃಹರಕ್ಷಕದಳದ ಸಮಾದೇಷ್ಟರು(ಪ್ರ) ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಗುರುನಾಥ್ ಮತ್ತೂರು ಅವರು ಮಾತನಾಡಿ, ಈ ತರಬೇತಿ ಪಡೆದ ಗೃಹರಕ್ಷಕರು ತಮ್ಮ ಜಿಲ್ಲೆಗೆ ತೆರಳಿ ಇಲ್ಲಿ ಕಲಿತಿರುವ ವಿಷಯಗಳನ್ನು ಇತರೇ ಗೃಹರಕ್ಷಕರಿಗೆ ಕಲಿಸುವಂತೆ ಸೂಚಿಸಿದರು. ಪ್ರತಿಯೊಬ್ಬ ಗೃಹರಕ್ಷಕರು ಶಿಸ್ತು ಕಾಪಾಡುವಂತೆ ಕರೆ ನೀಡಿದರು. ತರಬೇತಿ ಶಿಬಿರದಲ್ಲಿ ಹಾಜರಿದ್ದ ಗೃಹರಕ್ಷಕರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪೌರರಕ್ಷಣಾ ಸದಸ್ಯರಿಗೆ 05 ದಿನಗಳ ಸಿವಿಲ್ ಡಿಫೆನ್ಸ್ ಫೌಂಡೇಷನ್ ತರಬೇತಿಯನ್ನು ಸಹ ನಡೆಸಲಾಯಿತು. ಈ ತರಬೇತಿಯಲ್ಲಿ 29 ಜನ ಪೌರರಕ್ಷಣಾ ಸದಸ್ಯರು ಹಾಜರಿದ್ದರು.
ಈ ಸಂದರ್ಭದಲ್ಲಿ ಪೌರರಕ್ಷಣಾದಳದ ಮುಖ್ಯ ವಾರ್ಡನ್ ಎಂ.ಎ.ಷಕೀಬ್, ಉಪ ಸಮಾದೇಷ್ಟರಾದ ಬಿ.ಎಸ್.ಕಾಂಬಳೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಹಾಯಕ ಬೋಧಕರಾದ ನವೀನ್ ಬಿ, ಸಹಾಯಕ ಬೋಧಕರಾದ ಪಿ.ನವೀನ್ ಬಾಬು, ಪೌರರಕ್ಷಣಾ ಸದಸ್ಯರಾದ ಲಕ್ಷ್ಮೀನರಸಿಂಹ, ತುಮಕೂರು ಜಿಲ್ಲೆಯ ಬೋಧಕರಾದ ಶಿವಪ್ರಸಾದ್, ಹಾಸನ ಜಿಲ್ಲೆಯ ಬೋಧಕರಾದ ರಘು, ಪಿಡಿ ಹಳ್ಳಿಯ ಪಿಎಸ್‍ಐ ಶಶಿಧರ, ಪ್ರಥಮ ದರ್ಜೆ ಸಹಾಯಕರಾದ ಬಿ.ಎನ್.ಗೋಪಿನಾಥ, ಗೃಹರಕ್ಷಕ ಗೌರವ ಅಧಿಕಾರಿಗಳಾದ ಜಿ.ಬಸವರಾಜು, ಬಿ.ಕೆ.ಬಸವಲಿಂಗ, ಕಚೇರಿ ಸಿಬ್ಬಂದಿ ಜಿ.ಪವನಕುಮಾರ, ಪೌರರಕ್ಷಣಾ ಸದಸ್ಯರುಗಳಾದ ಗೋವಿಂದರಾಜುಲು, ಸತ್ತಾರ್ ಸಾಬ್ ಸೇರಿದಂತೆ 15 ಜಿಲ್ಲೆಗಳ ಗೃಹರಕ್ಷಕರು ಮತ್ತು ಪೌರರಕ್ಷಣಾ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here