ಟೆಸ್ಟ್ ಟ್ಯೂಬ್ ಸೆಂಟರ್ ಆಗಿಯೂ ಲೈಫ್ ಆಸ್ಪತ್ರೆ. ಮೊದಲ ಯಶಸ್ವಿ ಅವಳಿ ಜನನ.

0
222

ಹೊಸಪೇಟೆ:ಜುಲೈ:11:- ಹೊಸಪೇಟೆಯಲ್ಲಿ ಅಧಿಕೃತವಾಗಿ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್ ಆಗಿ ಲೈಫ್ ಲೈನ್ ಆಸ್ಪತ್ರೆಯಾಗಿಯೂ ಕಾರ್ಯನಿರ್ವಹಿಸಲಿದೆ ಬಂಜೆತನದಿಂದ ಬಳಲುವವರಿಗೆ ವರದಾನವಾಗಲಿದೆ ಮೊದಲ ಚಿಕಿತ್ಸಾ ಫಲ ಎಂಬಂತೆ ಯಶಸ್ವಿ ಅವಳಿ ಮಕ್ಕಳ ಜನನವಾಗಿದೆ ಎಂದು ಡಾ.ಶಿರಿಷಾ ಹೇಳಿದರು.

ಜಂಬುನಾಥ ರಸ್ತೆಯ ಲೈಫ್ ಲೈನ್ ಆಸ್ಪತ್ರೆಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದಾಜು 45 ವರ್ಷ ವಯಸ್ಸಿನ ದಂಪತಿಗಳಿಗೆ ಮಾಡಬಹುದಾದ ಈ ಚಿಕಿತ್ಸೆ ಕಳೆದ ಅಕ್ಟೋಬರ್‌ನಲ್ಲಿ ಅಧಿಕೃತವಾಗಿ ನಾವು ಮಾನ್ಯತೆ ಪಡೆದು ಚಿಕಿತ್ಸೆ ಆರಂಭಿಸಿದ್ದು ಈ ವರೆಗೂ 11 ಪ್ರಕರಣಗಳ ಚಿಕಿತ್ಸಾ ಚಟುವಟಿಕೆ ಆರಂಭವಾಗಿದ್ದು ಮೊದಲ ಮಗು ಶುಕ್ರವಾರ ಆಗಿದ್ದು ಮಗು ಮತ್ತು ತಾಯಿ ಆರೋಗ್ಯವಾಗಿದ್ದು ಸಂತಸ ತಂದಿದೆ. ಮೊದಲ ಮಗು ಅವಳಿ ಆಗಿರುವುದು ಹಾಗೂ ಆರೋಗ್ಯ ಪೂರ್ಣವಾಗಿದ್ದು ಸಂತಸಕ್ಕೆ ಕಾರಣವಾಗಿದೆ ಎಂದರು.

ಬಂಜೆತನಕ್ಕೆ ಈ ಭಾಗದಲ್ಲಿ ವಾತಾವರಣ ಕಾರಣವಾಗಿದ್ದು ಸೇರಿದಂತೆ ದೈಹಿಕ, ಮಾನಸಿಕ ಹಾಗೂ ಹಾರ್ಮೋನ ತೊಂದರೆ ಸೇರಿದಂತೆ ಒಂದು ಅಂದಾಜಿನ ಪ್ರಕಾರ18% ದಂಪತಿಗಳು‌ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದ್ದು ಅವರು ಹಾಗೂ ಐವಿಎಫ್ ಚಿಕಿತ್ಸಾ ಕ್ರಮಗಳ ಕುರಿತು ಜಾಗೃತಿ ಮೂಡಿಸುವ ಮತ್ತು ಒಪ್ಪಿಗೆಯೊಂದಿಗೆ ದಂಪತಿಗಳಲ್ಲಿ ಯಾರಿಗೇ ತೊಂದರೆ ಇದ್ದರು, ಚಿಕಿತ್ಸೆ ನೀಡುವ ಮೂಲಕ ಸಾಮಾನ್ಯರಿಗೂ ಚಿಕಿತ್ಸಾ ಫಲ ದೊರೆಯುವಂತೆ ಮಾಡಲಾಗಿದೆ ಎಂದರು.

ಉಚಿತ ತಪಾಸಣಾ, ಸಲಹೆ ನೀಡುವ ಮೂಲಕ ಸಾಮಾಜಿಕ ಹೊಣೆಯನ್ನು ನಿರ್ವಹಿಸಲಿದೆ ಎಂದು ಡಾ.ರಘನಾಥ ದೀಪಾಲಿ ಹೇಳಿದರು.ಪ್ರಥಮ ಯಶಸ್ವಿ ಚಿಕಿತ್ಸೆಯಲ್ಲಿ ಪಾಲ್ಗೊಂಡ ಆಸ್ಪತ್ರೆಯ ಸಿಬ್ಬಂದಿಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ವರದಿ:-ಪಿ.ವಿ.ಕಾವ್ಯ

LEAVE A REPLY

Please enter your comment!
Please enter your name here