ಗಬ್ಬೆದ್ದ ರಸ್ತೆ: ಮಂಗಮಾಯವಾದ ಅಧಿಕಾರಿಗಳು..? ತರಕಾರಿ ಮಾರುಕಟ್ಟೆ ಮೂಲ ಸೌಕರ್ಯ: ಸ್ವಚ್ಛತೆ ಮರೀಚಿಕೆ!

0
314

ಕೊಟ್ಟೂರು:ಜುಲೈ19:-ಪಟ್ಟಣದ ತೇರು ಬಯಲು ನಲ್ಲಿ ತರಕಾರಿ ಸಂತೆ ನಡೆಯುತ್ತದೆ ತಾಲೂಕಿನ ಸುತ್ತಮುತ್ತಲಿನ ರೈತರು ತಾವು ಬೆಳೆದ ತರಕಾರಿಗಳನ್ನು ಮಾರಲು ಪಟ್ಟಣಕ್ಕೆ ಬರುತ್ತಾರೆ ಆದರೆ ಸರಿಯಾದ ಮೂಲಸೌಕರ್ಯ ಇಲ್ಲದೆ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ತೇರು ಬಯಲು ಪ್ರದೇಶದಲ್ಲಿ ತರಕಾರಿ ಮಾರುಕಟ್ಟೆ ನಡೆಯುತ್ತದೆ ಮಳೆ ಬಂದರೆ ಸಾಕು ತೇರು ಬಯಲು ಪ್ರದೇಶವು  ಕೆಸರುಗದ್ದೆಯಂತೆ ಆಗುತ್ತದೆ ಇದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆ ರೈತರು ತಾವು ತಂದ ಬೆಳೆಯು ಸರಿಯಾದ ಬೆಲೆ ಇಲ್ಲದೆ ಒಂದು ಕಡೆ ಮತ್ತು ಕೆಸರು ಮಧ್ಯದಲ್ಲೇ ನಿಂತು  ತಮ್ಮ ತರಕಾರಿಗಳನ್ನು ಮಾರುವುದು ಸ್ಥಿತಿ ನಿರ್ಮಾಣವಾಗಿದೆ
ವ್ಯಾಪಾರಸ್ಥರು ಮತ್ತು ರೈತರು ಬೀದಿ ವ್ಯಾಪಾರಿಗಳು ಗೋಳು ಕೇಳುವವರು ಯಾರು ಇಲ್ಲ ಪಟ್ಟಣ ಪಂಚಾಯತಿಯು ಒದಗಿಸಬೇಕಾದ ಕನಿಷ್ಠ ಮೂಲ ಸೌಕರ್ಯಗಳನ್ನು ನೀಡಿಲ್ಲ ಸರಿಯಾದ ಸಮಯಕ್ಕೆ ತೆರಿಗೆಯನ್ನು ಕಟ್ಟಿಸಿಕೊಳ್ಳುತ್ತದೆ

ಖಾಸಗಿ ಬಸ್ ನಿಲ್ದಾಣವು ಈ ತೇರು ಬಯಲು ನಿಲ್ಲುತ್ತವೆ ಮಳೆ ಬಂದರೆ ಈ ಪ್ರದೇಶವು ಕೆಸರು ಗದ್ದೆಯಂತೆ ಆಗುತ್ತವೆ, ತಮ್ಮ ತಮ್ಮ ಊರುಗಳಿಂದ ಬರುವ ಪ್ರೇಣಿಕರು ಕೆಸರಿನಲ್ಲೇ ಇಳಿದು ಕೆಸರನಲ್ಲೇ ಬಸ್ ಹತ್ತಬೇಕು ಇದರ ಬಗ್ಗೆ ಯಾವುದೇ ಒಬ್ಬ ಅಧಿಕಾರಿ ಆಗಲಿ ಜನಪ್ರತಿನಿಧಿಗಳಾಗಲಿ ಗಮನ ಹರಿಸುತ್ತಾ ಇಲ್ಲ 

ಸುಮಾರು 45 ರಿಂದ 50 ವರ್ಷಗಳಾದರೂ ತರಕಾರಿ ವ್ಯಾಪಾರಸ್ಥರಿಗೆ ಎಂದು ಸಂತೆ ಮಾರ್ಕೆಟ್ ಅನ್ನು ನಿರ್ಮಾಣ ಮಾಡಿಕೊಡುವಂತಿಲ್ಲ ವ್ಯಾಪಾರಸ್ಥರು ಮತ್ತು ಬೀದಿ ವ್ಯಾಪಾರಿಗಳಾದ ನಾಗರಾಜ್ ರಾಜಭಕ್ಷಿ ಆಗ್ರಹಿಸಿದರು.

ಪಟ್ಟಣ ಪಂಚಾಯ್ತಿಯು ತರಕಾರಿ ಮಾರುಕಟ್ಟೆಗೆ ಮೂಲಸೌಕರ್ಯ ಒದಗಿಸದೆ ಸಾರ್ವಜನಿಕರ ಹಣವನ್ನು ಸುಮ್ಮನೆ ಪೋಲು ಮಾಡುತ್ತಿದೆ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆರಿಸಿಕೊಡಬೇಕು ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು 

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here