ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ: ಮಕ್ಕಳ ತಜ್ಞ ಹೈದರ್‌ ಅಲಿ,

0
122

ಸಂಡೂರು: ನ: 06: ತಾಲೂಕಿನ ತೋರಣಗಲ್ಲು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯುಷ್ಮಾನ್ ಭವ ಆರೋಗ್ಯ ತಪಾಸಣೆ ಶಿಬಿರ ನಡೆಯಿತು, ಶಿಬಿರದಲ್ಲಿ ವಿಮ್ಸ್ ನ ಮಕ್ಕಳ ತಜ್ಞ ವೈದ್ಯರಾದ ಡಾ.ಹೈದರ್‌ಅಲಿ ಅವರು ತಾಯಂದಿರನ್ನು ಉದ್ದೇಶಿಸಿ ಮಾತನಾಡಿ ಋತುಮಾನಗಳ ಬದಲಾವಣೆಯಾದಾಗ ಮಕ್ಕಳಿಗೆ ಆರೋಗ್ಯದ ಸಮಸ್ಯೆಗಳು ಕಾಣಿಸುವವು ಈ ಸಮಯದಲ್ಲಿ ನಿರ್ಲಕ್ಷ್ಯ ಮಾಡಬಾರದು,ಉಸಿರಾಟ,ನೆಗಡಿ,ಜ್ವರ,ಶೀತ ಕಾಣಿಸಿಕೊಂಡಾಗ ವೈದ್ಯರಲ್ಲಿ ತಪಾಸಣೆ ಮಾಡಿಸಿ ಚಿಕಿತ್ಸೆ ಕೊಡಿಸಬೇಕು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಗೋಪಾಲ್ ರಾವ್ ಅವರು ಮಾತನಾಡಿ ಶಿಬಿರಗಳಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ, ತಜ್ಞರೇ ಗ್ರಾಮಗಳತ್ತ ಬರಲಿರುವುದರಿಂದ ತಪಾಸಣೆಗೆ ಅನುಕೂಲ ವಾಗಲಿದೆ,ವಿಮ್ಸ್‌ನ ಗಂಟಲು ಕಿವಿ,ನಾಲಿಗೆ ತಜ್ಞರು, ಪ್ರಾಧ್ಯಾಪಕರೂ ಆದ ಡಾ.ಸುಧಾಕರ್, ಡಾ.ಅಬ್ದುಲ್ ಮನ್ನಾನ್ ಶೇರಿಕ್ ಅವರು ಸಹ ಹಾಜರಿದ್ದು ತಪಾಸಣೆ ಮಾಡುತ್ತಿದ್ದಾರೆ, ಡಿಸೆಂಬರ್ 5 ರ ಶಿಬಿರ ಸಾರ್ವಜನಿಕರಿಗೆ ಇನ್ನಷ್ಟು ಅನುಕೂಲವಾಗಲು ಪ್ರಚಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ವೆಂಕಪ್ಪ,ಮಾರೇಶ,ಮಂಜುನಾಥ್, ರಾಮ್ ಬಾಬು ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here