ಹರ್ ಘರ್ ತಿರಂಗಾ ಜಾಥ್ ಕಾರ್ಯಕ್ರಮಕ್ಕೆ ಸಂಸದ ವೈ.ದೇವೇಂದ್ರಪ್ಪ ಚಾಲನೆ

0
339

ಕೊಟ್ಟೂರು:ಆಗಸ್ಟ್:11:-ಈ ಬಾರಿ 75 ನೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ತುಂಬಾ ಅದ್ದೂರಿಯಾಗಿ ಆಚರಣೆ ಮಾಡಬೇಕು ಎಂದು ಸಂಸದ ವೈ ದೇವೇಂದ್ರಪ್ಪ ಹೇಳಿದರು

ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಹರ್ ಗರ್ ತಿರಂಗ ಜಾಥಾ ಕಾರ್ಯಕ್ರಮವನ್ನು ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು ಈ ಹರ್ ಘರ್ ಜಾಥಾ ಕಾರ್ಯಕ್ರಮಕ್ಕೆ ಸಂಸದರಾದ ವೈ ದೇವೇಂದ್ರಪ್ಪ ಚಾಲನೆ ನೀಡಿ ಮಾತನಾಡಿದರು

75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತವಾಗಿ ಈ ಸ್ವಾತಂತ್ರ್ಯದ ಹಿಂದೆ ತ್ಯಾಗ ಬಲಿದಾನಗಳಿವೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು ಈ ಬಾರಿ ಸ್ವಾತಂತ್ರೋತ್ಸವವನ್ನು ತುಂಬಾ ವಿಜೃಂಭೃತ ಆಚರಣೆ ಮಾಡಬೇಕು ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿ ತಮ್ಮ ತಮ್ಮ ಮನೆ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿ ದೇಶ ಅಭಿಮಾನ ದೇಶಪ್ರೇಮ ವ್ಯಕ್ತಗೊಳಿಸಬೇಕು ಹಾಗೂ ಪ್ರತಿಯೊಂದು ಸರ್ಕಾರಿ ಕಚೇರಿ ಮತ್ತು ಅಂಗಡಿಯಲ್ಲಿ
ರಾಷ್ಟ್ರಧ್ವಜವನ್ನು ಆರಿಸಬೇಕು ಎಂದು ಹೇಳಿದರೂ ಸುಮಾರು 2000 ಶಾಲಾ ಮಕ್ಕಳು ಭಾಗವಹಿಸಿದ್ದರು. 75 ವರ್ಷದ ಅಮೃತ ಮಹೋತ್ಸವ ಸವಿನೆನಪಿಗಾಗಿ 75 ಸಂಖ್ಯೆಯ ವಿದ್ಯಾರ್ಥಿಗಳು, 75 ತ್ರಿವರ್ಣ ರಾಷ್ಟ್ರಧ್ವಜವನ್ನು ಹಿಡಿದು ನಿಂತಿದ್ದು ಆಕರ್ಷಣೆಯಾಗಿತ್ತು.

ಈ ಹರ್ ಘರ್ ತಿರಂಗಾ ಜಾಥಾ ಕಾರ್ಯಕ್ರಮವು ಪಟ್ಟಣ ಶಾಲೆಯ ಮಕ್ಕಳು ಮತ್ತು ಹಳ್ಳಿ ಗ್ರಾಮದ ಮಕ್ಕಳು ಈ ಹರ್ ಘರ್ ತಿರಂಗಾ ಜಾಥಾದಲ್ಲಿ ಭಾಗವಹಿಸಿ ಈ ಜಾಥಾವು ತಾಲೂಕು ಕ್ರೀಡಾಂಗಣದಿಂದ ಪಟ್ಟಣದ ಪ್ರಮುಖ ರಸ್ತೆಗಳಾದ ಉಜ್ಜಿನಿ ಸರ್ಕಲ್, ಗಾಂಧಿ ಸರ್ಕಲ್, ಮೂಲಕ ಬಸ್ಸ್ಟ್ಯಾಂಡ್ ಮೂಲಕ ಸಾಗಿ ಎಪಿಎಂಸಿ ಹೊರಗೆ ಈ ಜಾಥಾವು ಕೊನೆಗೊಂಡಿತು. ಈ ಹರ್ ಘರ್ ಜಾಥಾವು 3 ದಿನಗಳ ಕಾಲ ನಡೆಯುತ್ತದೆ. ಅದೇ ರೀತಿ ಗ್ರಾಮೀಣ ಭಾಗದಲ್ಲೂ ಪ್ರತಿಯೊಂದು ಗ್ರಾಮ ಪಂಚಾಯಿತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ನೀಡಿದ ನಿರ್ದೇಶನದಂತೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿಯನ್ನು ಮೂಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು. ಚನ್ನಬಸವನಗೌಡ, ಬಿಜೆಪಿ ಮುಖಂಡರಾದ ತಿಂದಪ್ಪ, ತಾಲೂಕು ದಂಡಾಧಿಕಾರಿ ಎಂ. ಕುಮಾರಸ್ವಾಮಿ, ಪ. ಪಂ. ಅಧ್ಯಕ್ಷರಾದ ಭಾರತೀ ಸುಧಾಕರ್ ಪಾಟೀಲ್, ಪ. ಪಂ. ಸದಸ್ಯರಾದ ಕೊಟ್ರೇಶ್. ಮರುಬದ, ಮಲ್ಲಿಕಾರ್ಜುನ್, ಅಜ್ಜಪ್ಪ, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ಮತ್ತು ಮಕ್ಕಳು ಹಾಗೂ ಸಾರ್ವಜನಿಕರು ಈ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here