ಕೊಟ್ಟೂರು ಪಟ್ಟಣ ಪಂಚಾಯಿತಿ ಕೊಟ್ಟೂರು- ಕೆ ಎಂ ಎಫ್ 24 ಸಂಬಂದಿತ ವಿಷಯಕ್ಕೆ ವಸತಿ/ನಿವೇಶನಗಳು ಸೇರಿದಂತೆ 14910 ಆಸ್ತಿಗಳಿದ್ದು, ಈಗಾಗಲೇ ಕಛೇರಿಯಲ್ಲಿ ಸ್ವೀಕೃತವಾಗಿರುವ ಆಸ್ತಿ ತೆರಿಗೆ ಚಲನ್ ಗಳನ್ನು ವಾರ್ಡವಾರು ವಿಂಗಡಿಸಿ ಆಸ್ತಿಗಳ ಪ್ರಕಾರ ಸುಮಾರು 8000 ಕಡತಗಳನ್ನು ಸಿದ್ದಪಡಿಸಿಕೊಳ್ಳಲಾಗಿದ್ದು ಪಟ್ಟಣದ ವ್ಯಾಪ್ತಿಯಲ್ಲಿ ಬರುವ ರಾಜೀವ್ ನಗರ ಆಶ್ರಯ ಮತ್ತು ಜೆ ಪಿ ನಗರ ಆಶ್ರಯಗಳಲ್ಲಿ ಮನೆ ಮನೆಗೆ ಶನಿವಾರ ಮತ್ತು ಭಾನುವಾರದಂದು ಸಿಬ್ಬಂದಿಗಳು ಬೇಟಿ ನೀಡಿ ಚೆಕ್ ಲಿಸ್ಟ್ ನೀಡಿ ಮಾಹಿತಿ ಹಾಗೂ ದಾಖಲಾತಿಗಳನ್ನು ಸಂಗ್ರಹಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು,
ಸದ್ರಿ ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರತ್ತಿರುತ್ತದೆ. ಸಾರ್ವಜನಿಕರು ತಮ್ಮ ಆಸ್ತಿ ದಾಖಲಾತಿಗಳನ್ನು ಸಲ್ಲಿಸಲು ಪಟ್ಟಣ ಪಂಚಾಯಿತಿ ಕಛೇರಿಯಲ್ಲಿ ಸೋಮವಾರದಂದು ವಾರ್ಡವಾರು ಬಾಕ್ಸ್ ಗಳ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.
ವರದಿ: ಶಿವರಾಜ್ ಕನ್ನಡಿಗ