ಕ್ಷಯ ಮುಕ್ತ ಗ್ರಾಮ ರೂಪಿಸಲು ಗುಂಪು ಸಭೆಗಳ ಮೂಲಕ ಜಾಗೃತಿ

0
377

ಸಂಡೂರು:ಜೂ:16: ತಾಲೂಕಿನ ತೋರಣಗಲ್ಲು ಗ್ರಾಮದ ಜನತಾ ಕಾಲೋನಿಯಲ್ಲಿ ಆರೋಗ್ಯ ಇಲಾಖೆ ಮತ್ತು ಕೆ.ಹೆಚ್.ಪಿ.ಟಿ ಸಂಸ್ಥೆಯ ಸಹಯೋಗದಲ್ಲಿ ಗುಂಪು ಸಭೆಗಳ ಮೂಲಕ ಕ್ಷಯರೋಗ ನಿರ್ಮೂಲನೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು, ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಪ್ರಧಾನ ಮಂತ್ರಿಯವರ ಕಲ್ಪನೆಯಂತೆ 2025 ರೊಳಗೆ ಭಾರತವನ್ನು ರೂಪಿಸಲು ಆರೋಗ್ಯ ಇಲಾಖೆ ಪ್ರಯತ್ನ ಮಾಡುತ್ತಿದ್ದು ಇದಕ್ಕೆ ಕೆ.ಹೆಚ್.ಪಿ.ಟಿ ಸಂಸ್ಥೆಯೂ ಕೈಜೋಡಿಸಿದೆ, ಕ್ಷಯ ಮುಕ್ತ ಗ್ರಾಮ ರೂಪಿಸಲು ಸಮುದಾಯದ ಪಾತ್ರ ಮಹತ್ವದ್ದಾಗಿದೆ, ಯಾರಿಗಾದರೂ ಕೆಮ್ಮು,ಸಂಜೆ ಜ್ವರ,ಬೆವರು,ಹಸಿವೆ ಇಲ್ಲದಿರುವುದು, ತೂಕ ಕಡಿಮೆಯಾಗುವುದು, ಕಫ ಬರುವುದು,ಕಫದಲ್ಲಿ ರಕ್ತದ ಕಣಗಳು ಇರುವುದು ಕಂಡುಬಂದರೆ ಆರೋಗ್ಯ ಕೇಂದ್ರಕ್ಕೆ ಬಂದು ತಪಾಸಣೆ ಮಾಡಿಸಿಕೊಳ್ಳುವಂತೆ ಅರಿವು ಮೂಡಿಸಲಾಯಿತು, ಇತರೆ ರಾಜ್ಯಗಳಿಂದ ವಲಸೆ ಬಂದವರು ಸಹಾ ತಪಾಸಣೆಗೆ ಒಳಗಾಗಲು ಸೂಚಿಸಿದರು,ದೃಢಪಟ್ಟರೆ ಆರು ತಿಂಗಳು ಚಿಕಿತ್ಸೆ ಜೊತೆಗೆ 500/- ರೂಪಾಯಿ ಸಹಾಯ ಧನ ನೀಡಲಾಗುತ್ತದೆ, ಹಾಗೆನಾದರೂ ಕ್ಷಯರೋಗದ ಲಕ್ಷಣಗಳು ಇರುವರು ನಿಮ್ಮ ಕಣ್ಣಿಗೆ ಬಿದ್ದರೆ ನಮ್ಮ ಸ್ವಯಂ ಸೇವಕರಿಗೆ ತಿಳಿಸಿ ಅವರು ಮನವೊಲಿಸಿ ಆಸ್ಪತ್ರೆಗೆ ಕರೆತರುವ ಪ್ರಯತ್ನ ಮಾಡುವರು, ಎಲ್ಲರೂ ಕೈಜೋಡಿಸಿದಾಗ ಕ್ಷಯರೋಗ ಮುಕ್ತ ಗ್ರಾಮ ಮಾಡಲು ಸಾಧ್ಯವಿದೆ ಎಂದು ಅವರು ತಿಳಿಸಿದರು,

ಈ ಕೆ.ಹೆಚ್.ಪಿ.ಟಿ ಮೇಲ್ವಿಚಾರಕಿ ಆಶಾ, ಸ್ವಯಂ ಸೇವಕಿ ಉಮಾದೇವಿ, ಸಾರ್ವಜನಿಕರಾದ ಹನುಮಂತಪ್ಪ,ಯೂನೀಸ್,ಗೋರಕ್ ಚೌದರಿ, ಶಾರದಮ್ಮ,ನೀಲಮ್ಮ,ತಬ್ಸೂಮ್,ಹಂಪಮ್ಮ, ಲಕ್ಷ್ಮಮ್ಮ, ಮೀರಾ, ಜಯಲಕ್ಷ್ಮಿ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here