ಜನರ ಆರೋಗ್ಯಕ್ಕಾಗಿ ಗುಣಾತ್ಮಕ ಸೇವೆ ಒದಗಿಸುವುದೇ ನಮ್ಮ ಅಧ್ಯ ಕರ್ತವ್ಯವಾಗಬೇಕು; ಡಿ.ಎಚ್.ಓ.ಡಾ ಜನಾರ್ಧನ್

0
231

ಸಂಡೂರು: ಜು: 21: ಜನರ ಆರೋಗ್ಯ ರಕ್ಷಣೆ ಮಾಡುವುದು ಭಗವಂತನ ಆರಾಧನೆ ಮಾಡಿದಷ್ಟೇ ಪುಣ್ಯ ಲಭಿಸಲಿದೆ; ಡಿ.ಹೆಚ್.ಓ ಡಾ.ಜನಾರ್ದನ್,ಹೇಳಿದರು
ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ “ಪ್ರೇರಣ ಕಾರ್ಯಕ್ರಮ”ವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್.ಜನಾರ್ದನ್ ಅವರು ಮಾತನಾಡಿ, ಆರೋಗ್ಯ ಕೇಂದ್ರದ ವಾತಾವರಣವೇ ಬದಲಾಗಿದೆ, ಸ್ವಚ್ಛತೆಗೆ ಗಮನ ಹರಿಸಲಾಗಿದೆ, ಎಲ್ಲರೂ ಶ್ರದ್ಧೆಯಿಂದ ಕೆಲಸ ಮಾಡುವುದನ್ನ ಗಮನಿಸಿದ್ದೇನೆ, ಜನರು ಆರೋಗ್ಯಕಾಗಿ ನಮ್ಮ ಬಳಿ ಬಂದಾಗ ಗುಣಾತ್ಮಕ ಸೇವೆ ಒದಗಿಸುವುದೇ ನಮ್ಮ ಆದ್ಯ ಕರ್ತವ್ಯವಾಗಿದೆ, ಒಳ್ಳೆಯ ಸೇವೆಯಿಂದ ಭಗವಂತನ ನಮಗೆ ಆರೋಗ್ಯ ಕರುಣಿಸುವನು, ಇಷ್ಟು ಬದಲಾವಣೆ ತರಲು ನಾವು ಮಾಡಿದ ಪ್ರಯತ್ನ ಸಾರ್ಥಕವಾಗಿದೆ, ಇದನ್ನು ಹೀಗೆ ಮುಂದುವರೆಸಿರಿ, ಕಾಯಕಲ್ಪ ಅವಾರ್ಡ್ ಪಡೆಯುವ ಪ್ರಯತ್ನದ ಕಡೆ ಗಮನವಿರಲಿ, ಹಾಗೆ ನಾನು ಕೈಗೊಂಡ ನಿರ್ಧಾರಗಳಿಂದ ಕೆಲವರ ಮನಸ್ಸಿಗೆ ನೋವಾಗಿರುತ್ತೆ, ಆಡಳಿತಾತ್ಮಕ ಆದೇಶ ಪಾಲಿಸುವುದು ನಮ್ಮ ದೇಯ ಉತ್ತಮವಾಗಿ ಸೇವೆ ಮಾಡಿ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು,

ಈ ಸಂದರ್ಭದಲ್ಲಿ ತಾಲೂಕಿನ ನೋಡಲ್ ಅಧಿಕಾರಿ ಹಾಗೂ ಡಿ.ಟಿ.ಒ ಡಾ.ಇಂದ್ರಾಣಿ, ಜಿ.ಕು.ಕ.ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ ಅವರು ಮಾತನಾಡಿ ಹೀಗೆ ಮುಂದುವರೆಸಿಕೊಂಡು ಹೋಗುವಂತೆ ಸೂಚಿಸಿದರು,

ಕಾರ್ಯಕ್ರಮ ಕುರಿತು ಕೆಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸಾದಿಯ ಅವರು ಮಾತನಾಡಿ ನನಗೆ ಆಡಳಿತ್ಮಾಕವಾಗಿ ಕೆಲಸ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಕ್ಕೆ ತಕ್ಕಂತೆ ಕೆಲಸ ಮಾಡಿವೆ, ಅದಕ್ಕಾಗಿ ಡಿ.ಹೆ.ಹೆಚ್.ಒ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು,

ಈ ಸಂದರ್ಭದಲ್ಲಿ ಉತ್ತಮ ಕೆಲಸ ನಿರ್ವಹಿಸಿದ ಸಿಬ್ಬಂದಿಗಳಿಗೆ ಪ್ರಶಂಸಾ ಪ್ರಮಾಣ ಪತ್ರ, ಆಶಾ ಕಾರ್ಯಕರ್ತೆಯರಿಗೆ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು,
ಈ ಸಂದರ್ಭದಲ್ಲಿ ಜಿಲ್ಲಾ ಬಾಯಿ ಆರೋಗ್ಯ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ.ವಿಶಾಲಾಕ್ಷಿ, ಟಿ.ಹೆಚ್.ಒ ಡಾ.ಭರತ್ ಕುಮಾರ್, ಡಾ.ಕುಶಾಲ್ ರಾಜ್, ಡಾ.ಅಕ್ಷಯ್ ಕುಮಾರ್, ಡಾ.ಅನುಷಾ, ಡಾ.ಪ್ರಿಯಾಂಕ,ಡಾ.ಹರೀಶ್, ಡಿ.ಹೆಚ್.ಇ.ಓ ಈಶ್ವರ್ ದಾಸಪ್ಪನವರ್,ಬಿ.ಹೆಚ್.ಇ.ಒ ಶಿವಪ್ಪ,ಸೂಪಿಡೆಂಡೆಂಟ್ ಹರ್ಷ,ಪ್ರಶಾಂತ್ ಕುಮಾರ್, ರೀಟಾ,ಶಕೀಲ್ ಅಹಮದ್, ಮಂಜುನಾಥ್, ವಂಕಟೇಶ್, ಎಲ್ಲಾ ವರ್ಗದ ಆರೋಗ್ಯ ಸಿಬ್ಬಂದಿ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here