ದೇಶ ಸುಂದರ ಮತ್ತು ಕೀಟಮುಕ್ತ ಮಾಡಲು ಪ್ರತಿಯೊಬ್ಬರೂ “ಸ್ವಚ್ಚತೇ ಸೇವೆ” ಎಂಬ ಮಂತ್ರ ಪಾಲನೆ ಮಾಡಬೇಕು ಡಾ.ದೀಪಾ ಪಾಟೀಲ್ ಸಲಹೆ,

0
631

ಸಂಡೂರು:ಡಿ:24:- ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ. ದೀಪಾ ಪಾಟೀಲ್ ಮಾತನಾಡುತ್ತಾ.. ಸ್ವಚ್ಛ ಭಾರತ ಅಭಿಯಾನದಡಿ ಪ್ರತಿ ತಿಂಗಳು 25 ನೇ ತಾರೀಖು ಎಲ್ಲಾ ಸರ್ಕಾರಿ ಕಛೇರಿ, ಆಸ್ಪತ್ರೆಗಳಲ್ಲಿ “ಸ್ವಚ್ಚತಾ ದಿವಸ್” ಆಚರಣೆ ಮಾಡಬೇಕಿತ್ತು ಆದರೆ ನಾಳೆ ಕ್ರಿಸ್ ಮಸ್ ಇರುವ ಕಾರಣ ಇಂದೇ ತೋರಣಗಲ್ಲು ಆರೋಗ್ಯ ಕೇಂದ್ರದಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಸ್ವಚ್ಚತಾ ದಿವಸ್ ಪ್ರಯುಕ್ತ ಪ್ರತಿ ವರ್ಷಕ್ಕೆ 100 ಗಂಟೆಗಳ ಕಾಲ ಸ್ವಚ್ಚತೆಗೆ ಮೀಸಲಿಟ್ಟು ಪ್ರತಿಯೊಬ್ಬರು ಸ್ವಚ್ಚತಾ ಕಾರ್ಯ ನಿರ್ವಹಿಸುವಂತೆ ಸರ್ಕಾರದ ಆದೇಶ ದನ್ವಯ “ಸ್ವಚ್ಚತಾ ದಿವಸ್” ಆಚರಿಸಲಾಯಿತು, ಕಾರ್ಯಕ್ರಮದಲ್ಲಿ “ಸ್ವಚ್ಚತೆಯೇ ಸೇವೆ” ಮತ್ತು “ಸ್ವಚ್ಛ ಮೇವ ಜಯತೆ ” ಕುರಿತು ಮಾಹಿತಿ ನೀಡಿದರು, ಹಾಗೆ ಎಲ್ಲರೂ ಸ್ವಚ್ಚತೆ ಮಾಡುವುದಾಗಿ ಪ್ರತಿಜ್ಞೆ ಕೈಗೊಂಡರು,

ಪ್ರತಿಜ್ಞೆಯನ್ನು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಬೋದಿಸಿದರು, ನಂತರ ವೈದ್ಯರು ಮತ್ತು ಸಿಬ್ಬಂದಿಯವರು ಹಾಗೂ ಕರ್ನಾಟಕ ರಕ್ಷಣಾ ಸೇನೆ ಸಂಘದ ಸದಸ್ಯರು ಸ್ವಚ್ಚತಾ ಕಾರ್ಯ ಮಾಡಿದರು,

ಈ ಸಂದರ್ಭದಲ್ಲಿ ಡಾ.ದೀಪಾ ಪಾಟೀಲ್, ಡಾ.ಆಯೇಶಾ,ಕ್ಷೇತ್ರ‌ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಕಛೇರಿಯ ಸೂಪರಿಂಟೆಂಡೆಂಟ್ ಹರ್ಷ, ಔಷಧ ತಜ್ಞ ಮಂಜುನಾಥ್, ಮಾರೇಶ್, ನವೀನ್, ಚಲುವರಾಜ, ಶಿವರಾಜ್, ಶ್ರೀನಿವಾಸ, ಕರಿಬಸಮ್ಮ, ಕೀರ್ತನಾ, ಆಶಾ ಕಾರ್ಯಕರ್ತೆ ಲಕ್ಷ್ಮಿ, ಕರ್ನಾಟಕ ಸೇನೆ ಸದಸ್ಯರಾದ ರಾಘವೇಂದ್ರ, ಎರ್ರಿಸ್ವಾಮಿ ಇತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here